BCCI – IPL : 10 ಲಕ್ಷ ಇದ್ರೆ ನೀವೂ ಖರೀದಿಸಬಹುದು ಐಪಿಎಲ್‌ ತಂಡ : ಬಿಡ್ಡರ್‌ಗಳಿಂದ ಅರ್ಜಿ ಆಹ್ವಾನಿಸಿದ ಬಿಸಿಸಿಐ

ಮುಂಬೈ : ಐಪಿಎಲ್‌ 14 ನೇ ಆವೃತ್ತಿ ಈಗಾಗಲೇ ಮುಕ್ತಾಯದ ಹಂತ ತಲುಪಿದೆ. ಈ ನಡುವಲ್ಲೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 15ನೇ ಆವೃತ್ತಿಗಾಗಿ ಬಿಸಿಸಿಐ ( BCCI ) ಸಿದ್ದತೆ ಆರಂಭಿಸಿದೆ. ಮುಂದಿನ ವರ್ಷದಿಂದ ಮತ್ತೆರಡು ತಂಡಗಳ ಸೇರ್ಪಡೆಗೊಳ್ಳಲಿದೆ. ಇದಕ್ಕಾಗಿ ಬಿಸಿಸಿಐ ಹೊಸ ತಂಡ ಖರೀದಿಗೆ ಟೆಂಡರ್‌ ಆಹ್ವಾನಿಸಿದ್ದು, ಐಪಿಎಲ್‌ ತಂಡ ಮಾಲೀಕರಾಗಲು ಎಲ್ಲರಿಗೂ ಅವಕಾಶ ಕಲ್ಪಿಸಿದೆ. ನಿಮ್ಮ ಬಳಿ 10 ಲಕ್ಷ ರೂಪಾಯಿ ಇದ್ರೆ ನೀವೂ ತಂಡವನ್ನು ಖರೀದಿಸಬಹುದು.

ಇಂಡಿಯನ್‌ ಪ್ರೀಮಿಯರ್‌ ಲೀಗ್ ವಿಶ್ವದ ಕ್ರಿಕೆಟ್‌ ಪ್ರೇಮಿಗಳ ಗಮನ ಸೆಳೆದಿದೆ. ವಿಶ್ವದ ಅತ್ಯಂತ ಶ್ರೀಮಂತ ಲೀಗ್‌ ಅನ್ನೋ ಖ್ಯಾತಿಗೂ ಪಾತ್ರವಾಗಿದೆ. ಪ್ರಸಕ್ತ ವರ್ಷದಲ್ಲಿ 8 ತಂಡಗಳು ಐಪಿಎಲ್‌ ಪಂದ್ಯಾವಳಿಯಲ್ಲಿ ಸೆಣೆಸಾಟವನ್ನು ನಡೆಸುತ್ತಿದ್ದವು. ಆದ್ರೀಗ ಬಿಸಿಸಿಐ ಹೊಸದಾಗಿ ಎರಡು ತಂಡಗಳ ಸೇರ್ಪಡೆಯ ಘೋಷಣೆಯ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಂಡವನ್ನು ಖರೀದಿಸಲು ಆಸಕ್ತಿ ಹೊಂದಿರುವರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮಾತ್ರವಲ್ಲ ಅಗತ್ಯವಾದ ದಾಖಲೆಗಳ ಮೂಲಕ ಅರ್ಜಿಗಳನ್ನು ಅಕ್ಟೋಬರ್ 20ರ ಒಳಗಾಗಿ ಸಲ್ಲಿಸುವಂತೆ ತಿಳಿಸಿದೆ.

ಇದನ್ನೂ ಓದಿ : ಬೆಂಗಳೂರು ತಂಡಕ್ಕೆ ಮರಳುತ್ತಾರೆ ರಾಹುಲ್‌ : ಆರ್‌ಸಿಬಿಗೆ ಕನ್ನಡಿಗನೇ ನಾಯಕ

ಈ ಹಿಂದೆ ಆಗಸ್ಟ್ 31ರ ಒಳಗೆ ಹೊಸ ತಂಡ ಖರೀದಿ ಮಾಡುವವರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ನಂತರ ಅವಧಿಯನ್ನು ಅಕ್ಟೋಬರ್‌ 10 ರವರೆಗೆ ಅವಧಿಯನ್ನು ವಿಸ್ತರಣೆ ಮಾಡಿತ್ತು. ಇದೀಗ ಮತ್ತೆ ಅಕ್ಟೋಬರ್‌ 20ರ ವರೆಗೆ ಅವಧಿಯನ್ನು ವಿಸ್ತರಿಸಿದೆ. ಐಪಿಎಲ್‌ ತಂಡವನ್ನು ಖರೀದಿಸುವವರು 10 ಲಕ್ಷರೂಪಾಯಿ ಹಣವನ್ನು ಟೆಂಡರ್‌ ಶುಲ್ಕವಾಗಿ ನೀಡಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಟೆಂಡರ್‌ ಖರೀದಿಸಿದವರು 2022ರ ಐಪಿಎಲ್‌ ಪಂದ್ಯಾವಳಿಯಲ್ಲಿ ತಂಡವನ್ನು ಖರೀದಿಸಲು ಅರ್ಹತೆಯನ್ನು ಪಡೆಯುತ್ತಾರೆ.

ಈಗಾಗಲೇ ಹಲವು ಮಂದಿ ಬಿಡ್ಡರ್‌ಗಳು ಹೊಸ ಐಪಿಎಲ್‌ ತಂಡ ಖರೀದಿಗೆ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಐಪಿಎಲ್‌ ಪಂದ್ಯಾವಳಿಯಲ್ಲಿ ಹತ್ತು ತಂಡಗಳು ಭಾಗವಹಿಸಿದ್ದವು. ತದನಂತರದಲ್ಲಿ ತಂಡಗಳ ಸಂಖ್ಯೆಯನ್ನು ಇಳಿಕೆ ಮಾಡಲಾಗಿತ್ತು. ಆದ್ರೀಗ ಮತ್ತೆ ಎರಡು ತಂಡಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗುತ್ತಿದ್ದು, ಮುಂದಿನ ಐಪಿಎಲ್‌ ಹಿನ್ನೆಲೆಯಲ್ಲಿ ಮಹಾ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ನಾಯಕತ್ವ ತ್ಯೆಜಿಸಿದ ವಿರಾಟ್‌ ಕೊಯ್ಲಿ : ಆರ್‌ಸಿಬಿ ನಾಯಕನಾಗಿ ಗೆಲುವಿಗಿಂತ ಸೋತಿದ್ದೆ ಹೆಚ್ಚು !

(BCCI ANNOUNCES RELEASE OF TENDER TO OWN AND OPERATE AN IPL TEAM )

Comments are closed.