ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 83,876 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಪಾಸಿಟಿವಿಟಿ ದರವು 7.25 ಪ್ರತಿಶತಕ್ಕೆ ಇಳಿಕೆ (Covid Cases Drop) ಕಂಡಿದೆ. ಜನವರಿ ಆರನೇ ತಾರೀಖಿನ ಬಳಿಕ ದೇಶದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟದೇ ಇರುವುದು ಇದೇ ಮೊದಲಾಗಿದೆ.
ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 11,08,938 ಆಗಿದೆ. ಅಂದರೆ ಒಟ್ಟು ಕೊರೊನಾ ಪ್ರಕರಣಗಳ 2.62 ಪ್ರತಿಶತ ಸಕ್ರಿಯ ಕೋವಿಡ್ ಪ್ರಕರಣಗಳು ದೇಶದಲ್ಲಿ ಇದೆ. ದೇಶಾದ್ಯಂತ ಕೋವಿಡ್ ರಿಕವರಿ ದರವು 96.19 ಪ್ರತಿಶತಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೇಳಿದೆ.
ದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರವು 7.25 ಪ್ರತಿಶತಕ್ಕೆ ತಲುಪಿದೆ. ಪ್ರತಿ 100 ಕೋವಿಡ್ ಪರೀಕ್ಷೆಯಲ್ಲಿ ಎಷ್ಟು ಮಂದಿಯ ಕೋವಿಡ್ ವರದಿಯು ಪಾಸಿಟಿವ್ ಬಂದಿದೆ ಎಂಬುದನ್ನು ಆಧರಿಸಿ ಕೋವಿಡ್ ಪಾಸಿಟಿವ್ ದರವನ್ನು ನಿರ್ಧರಿಸಲಾಗುತ್ತದೆ.
ಈ ನಡುವೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ನಿನ್ನೆಯಷ್ಟೇ ಸಿಂಗ್ ಶೋ ಸ್ಪುಟ್ನಿಕ್ ಲೈಟ್ ಲಸಿಕೆಗಳಿಗೆ ಅನುಮೋದನೆಯನ್ನು ನೀಡಿದೆ. ದೇಶದಲ್ಲಿ ಅನುಮೋದನೆಯನ್ನು ಪಡೆದುಕೊಂಡ 9ನೇ ಕೋವಿಡ್ ಲಸಿಕೆ ಇದಾಗಿದೆ.
ಕಳೆದ 24 ಗಂಟೆಗಳಲ್ಲಿ 1,99,054 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ ಒಟ್ಟು ಗುಣಮುಖರಾದವರ ಸಂಖ್ಯೆ 4,06,60,202 ಆಗಿದೆ . ದೇಶದಲ್ಲಿ ವಾರದ ಪಾಸಿಟಿವಿಟಿ ದರವು 9.18 ಪ್ರತಿಶತವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ಇದನ್ನು ಓದಿ : Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?
ಇದನ್ನೂ ಓದಿ : Best Smartphones Under 5000: ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್; 5 ಸಾವಿರದೊಳಗಿನ ಉತ್ತಮ ಸ್ಮಾರ್ಟ್‌ಫೋನ್‌ಗಳಿವು
ಇದನ್ನೂ ಓದಿ : Hyundai Boycott: ಹುಂಡೈ ಬಾಯ್ಕಾಟ್‌ಗೆ ಅಭಿಯಾನ; ಪಾಕಿಸ್ತಾನದ ಹುಂಡೈ ಘಟಕದ ವಿರುದ್ಧ ಆಕ್ರೋಶ, ದೇಶವಿರೋಧಿಯಾಯಿತೇ ಹುಂಡೈ?
ಇದನ್ನೂ ಓದಿ : 22 students wearing hijab : ಕುಂದಾಪುರದಲ್ಲಿ ಸರಕಾರದ ಆದೇಶಕ್ಕೆ ದೋಂಟ್ ಕೇರ್ : ಹಿಜಾಬ್ ಧರಿಸಿ ಬಂದ 22 ವಿದ್ಯಾರ್ಥಿನಿಯರು
India’s Daily Covid Cases Drop Below 1 Lakh (83,876) After A Month