Hyundai Boycott: ಹುಂಡೈ ಬಾಯ್ಕಾಟ್‌ಗೆ ಅಭಿಯಾನ; ಭಾರತ ವಿರೋಧಿ ಧೋರಣೆ ತಳೆಯಿತೇ ಹುಂಡೈ?

ಪ್ರತ್ಯೇಕ ಕಾಶ್ಮೀರಕ್ಕೆ ಬೆಂಬಲ ನೀಡಿ ‘ಹುಂಡೈ ಪಾಕಿಸ್ತಾನ’ ಟ್ವೀಟ್ ಮಾಡಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು,  ಹುಂಡೈ ತಯಾರಿಸುವ ಉತ್ಪನ್ನಗಳನ್ನು ತ್ಯಜಿಸುವಂತೆ ಭಾರತೀಯರು ಅಭಿಯಾನ ಕೈಗೊಂಡಿದ್ದಾರೆ. ಅಲ್ಲದೇ ಭಾರತದ ಹುಂಡೈ (Hyundai) ಘಟಕವನ್ನು ಈಕುರಿತು ತರಾಟೆಗೆ ತೆಗೆದುಕೊಂಡಿದ್ದು, ಹುಂಡೈ ಕಾರುಗಳನ್ನು ಬಾಯ್ಕಾಟ್ (Hyundai Boycott) ಮಾಡುವುದಾಗಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿದ್ದಾರೆ.

@hyundaiPakistanOfficia ಟ್ವಿಟರ್‌ ಅಕೌಂಟಲ್ಲಿ ನಿನ್ನೆ ಕಾಶ್ಮೀರದ ಸ್ವತಂತ್ರಕ್ಕಾಗಿ ಹೋರಾಟ ಮತ್ತು ಕಾಶ್ಮೀರದ ಏಕತೆ ಎಂಬರ್ಥದಲ್ಲಿ ಟ್ವೀಟ್ ಮಾಡಲಾಗಿದೆ. ಈ ಟ್ವೀಟ್ ಭಾರತ ವಿರೋಧಿಯಾಗಿದ್ದು, ಭಾರತದಲ್ಲಿ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡುವ ಹುಂಡೈ ವಿರುದ್ಧ ಭಾರತೀಯರು ತಿರುಗಿ ಬೀಳುವಂತೆ ಮಾಡಿದೆ.

ಕಾಶ್ಮೀರ ಪ್ರತ್ಯೇತಕತೆಯ ವಿಚಾರವಾಗಿ ಹೊತ್ತಿಕೊಂಡ ಟ್ವಿಟರ್ ಬೆಂಕಿಯಿಂದ ಕೊನೆಗೂ ಹುಂಡೈ ಇಂಡಿಯಾ ಕ್ಷಮೆ ಕೇಳಿದೆ. ಪಾಕಿಸ್ತಾನ ಹುಂಡೈ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಶ್ಮೀರ ಪ್ರತ್ಯೇಕಿಸುವ ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ವೀಟ್ ಮಾಡಲಾಗಿತ್ತು.ಟ್ವಿಟರ್ ಮೂಲಕ ಹುಂಡೈ ಇಂಡಿಯಾ ಕ್ಷಮೆ ಕೇಳಿದ್ದು ಹುಂಡೈ ಮೋಟಾರ್ ಕಳೆದ 25 ವರ್ಷಗಳಿಂದ ಭಾರತದಲ್ಲಿ(India) ಕಾರ್ಯನಿರ್ವಹಿಸುತ್ತಿದೆ. ನಾವು ರಾಷ್ಟ್ರೀಯತೆಯನ್ನು ಗೌರವಿಸುವ(respecting nationalism) ಬಲವಾದ ನೀತಿ ಹೊಂದಿದ್ದೇವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಪೋಸ್ಟ್ ಹಾಗೂ ಚಟುವಟಿಕೆ ನಮ್ಮ ಬದ್ಧತೆಗೆ ವಿರುದ್ಧವಾಗಿದೆ.

ಈ ಕುರಿತು ಹ್ಯುಂಡೈ ಇಂಡಿಯಾ ನಿಲುವ ಕೇಳಿದ ಭಾರತೀಯರ ಖಾತೆಗಳನ್ನು ಟ್ವಿಟರ್ ಬ್ಲಾಕ್ ಮಾಡಿತ್ತು. ಹೀಗಾಗಿ ಹ್ಯುಂಡೈ ಕಾರುಗಳನ್ನು ಬಹಿಷ್ಕರಿಸಿ (Boycott Hyundai) ಎಂಬ ಅಭಿಯಾನ ಇಂದು ಟ್ವಿಟರ್‌ನಲ್ಲಿ ಭಾರಿ ಟ್ರೆಂಡ್ ಆಗಿತ್ತು. ಈ ಟ್ರೆಂಡಿಂಗ್ ಗಂಭೀರತೆ ಅರಿತ ಹುಂಡೈ ಇಂಡಿಯಾ ಇದೀಗ ಕ್ಷಮೆ ಕೇಳಿದೆ.

ಇದನ್ನೂ ಓದಿ: Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

(Hyundai Boycott by Indians for Hyundai Pakistans Kashmir solidarity tweet)

Comments are closed.