22 students wearing hijab : ಕುಂದಾಪುರದಲ್ಲಿ ಸರಕಾರದ ಆದೇಶಕ್ಕೆ ದೋಂಟ್‌ ಕೇರ್‌ : ಹಿಜಾಬ್‌ ಧರಿಸಿ ಬಂದ 22 ವಿದ್ಯಾರ್ಥಿನಿಯರು

ಕುಂದಾಪುರ : ರಾಜ್ಯ ಸರಕಾರ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸಿ ಪರಿಷ್ಕೃತ ಆದೇಶ ಹೊರಡಿಸಿದ್ದರೂ ಕೂಡ ಕುಂದಾಪುರದಲ್ಲಿ ವಿದ್ಯಾರ್ಥಿನಿಯರು ಸರಕಾರದ ಆದೇಶಕ್ಕೆ ಡೋಂಟ್‌ ಕೇರ್‌ ಎಂದಿದ್ದಾರೆ. ಕುಂದಾಪುರದ ಪದವಿ ಪೂರ್ವ ಕಾಲೇಜಿಗೆ ಇಂದು 22 ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ (22 students wearing hijab) ಕಾಲೇಜಿಗೆ ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದ್ದು, ಮನವೊಲಿಕೆಯ ಕಾರ್ಯ ನಡೆಯುತ್ತಿದೆ.

ಕುಂದಾಪುರದ ಪದವಿ ಪೂರ್ವ ಕಾಲೇಜಿನ ವಿದ್ಯಾಭ್ಯಾಸ ಮಾಡುತ್ತಿದ್ದ ಸುಮಾರು 28 ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಲು ಅವಕಾಶ ಕಲ್ಪಿಸುವಂತೆ ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಈ ಪೈಕಿ ಇಂದು ಕಾಲೇಜಿಗೆ 22 ವಿದ್ಯಾರ್ಥಿನಿಯರು ಮಾತ್ರವೇ ಹಿಜಾಬ್‌ ಧರಿಸಿ ಕಾಲೇಜಿಗೆ ಹಾಜರಾಗಿದ್ದಾರೆ. ಆದರೆ ಐದು ವಿದ್ಯಾರ್ಥಿನಿಯರು ಕಾಲೇಜಿಗೆ ಇಂದು ಗೈರು ಹಾಜರಾಗಿದ್ದರೆ, ಓರ್ವ ವಿದ್ಯಾರ್ಥಿನಿ ಹಿಜಾಬ್‌ ಧರಿಸದೇ ತರಗತಿಗೆ ಹಾಜರಾಗಿದ್ದಾಳೆ.

ಉಡುಪಿಯ ಮಹಿಳಾ ಪದವಿ ಪೂರ್ವ ಕಾಲೇಜಿನ ಆರಂಭಗೊಂಡ ಹಿಜಾಬ್‌ ವಿವಾದ ಇದೀಗ ರಾಜ್ಯದ ಹತ್ತಕ್ಕೂ ಅಧಿಕ ಜಿಲ್ಲೆಗಳಿಗೆ ವ್ಯಾಪಿಸಿದೆ. ಅದ್ರಲ್ಲೂ ಹಿಜಾಬ್‌ ವಿವಾದ ಜೋರಾಗುತ್ತಲೇ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಹಾಜರಾಗುತ್ತಿದ್ದಾರೆ. ಕುಂದಾಪುರ, ಚಿಕ್ಕಮಗಳೂರು, ಬೈಂದೂರು, ಮೈಸೂರು ಬೆನ್ನಲ್ಲೇ ಇಂದು ಕೂಡ ಮಂಡ್ಯದ ಖಾಸಗಿ ಶಾಲೆಗೆ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಹಾಜರಾಗಿದ್ದಾರೆ. ಇದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ತಲೆನೋವು ತರಿಸಿದೆ. ಇನ್ನು ವಿಜಯಪುರದಲ್ಲೂ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಶಾಲೆಗೆ ರಜೆಯನ್ನು ಘೋಷಣೆ ಮಾಡಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಜೈ ಶ್ರೀರಾಮ್‌ ಘೋಷಣೆಯನ್ನು ಕೂಗುತ್ತಾ ಹಿಜಾಬ್‌ ವಿರುದ್ದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಹಿಜಾಬ್‌ ಹಾಗೂ ಕೇಸರಿ ಶಾಲು ವಿವಾದ ರಾಜ್ಯದಲ್ಲಿ ಬುಗಿಲೇಳುತ್ತಿದ್ದಂತೆಯೇ ರಾಜ್ಯ ಸರಕಾರ ಹೈಕೋರ್ಟ್‌ ಆದೇಶ ಬರುವವರೆಗೂ ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಶಾಲೆ, ಕಾಲೇಜುಗಳಿಗೆ ಹಾಜರಾಗಬೇಕೆಂದು ಆದೇಶ ಹೊರಡಿಸಿತ್ತು. ಆದರೂ ಕೂಡ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸರಕಾರದ ಆದೇಶವನ್ನೇ ಧಿಕ್ಕರಿಸಿದ್ದಾರೆ.

ಇದನ್ನೂ ಓದಿ : ನಿಗದಿಯಂತೆ ನಡೆಯಲಿದೆ ಎಸ್ಎಸ್ಎಲ್‌ಸಿ, ಪಿಯುಸಿ ಪರೀಕ್ಷೆ: ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ

ಇದನ್ನೂ ಓದಿ : ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

ಇದನ್ನೂ ಓದಿ : Hijab Row Opinion: ಬ್ರಾಹ್ಮಣ ಸಮುದಾಯದಂತೆ ಮುಸ್ಲಿಂ ಸಮುದಾಯ ‘ಓಪನ್ ಅಪ್’ ಆಗುವುದು ಯಾವಾಗ?

(22 students wearing hijab don’t care for government order in Kundapur)

Comments are closed.