ಅಂತರ್ಜಿಲ್ಲಾ ಸಂಚಾರಕ್ಕೆ ಬ್ರೇಕ್ : ಸಂಪೂರ್ಣ ಲಾಕ್ ಡೌನ್ : ಜನತೆಗೆ ಕಾದಿದೆ ಬಿಗ್ ಶಾಕ್..!!!

ಉಡುಪಿ : ರಾಜ್ಯದಲ್ಲಿ ಸದ್ಯ ನೈಟ್ ಕರ್ಪ್ಯೂ, ವಿಕೇಂಡ್ ಕರ್ಪ್ಯೂ ಜಾರಿಯಲ್ಲಿದೆ. ಆದ್ರೂ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ. ಹೀಗಾಗಿ ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್ ಹಾಕಿ, ಲಾಕ್ ಡೌನ್ ಹೇರಿಕೆಯ ಕುರಿತು ಸರಕಾರ ಚಿಂತನೆ ನಡೆಸಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಜಿಲ್ಲೆಯಿಂದ ಜಿಲ್ಲೆಗೆ ಜನರು ಸಂಚಾರಕ್ಕೆ ಬ್ರೇಕ್ ಹಾಕದ ಹೊರತು ಕೊರೊನಾ ನಿಯಂತ್ರಣ ಅಸಾಧ್ಯ. ಹೀಗಾಗಿ ಅಂತರ್ ಜಿಲ್ಲಾ ಸಂಚಾರಕ್ಕೆ ಬ್ರೇಕ್ ಹಾಕುವಂತೆ ಕೋವಿಡ್ ತಾಂತ್ರಿಕ ಸಮಿತಿ ಸಲಹೆ ನೀಡಿದೆ. ಬೆಂಗಳೂರು ಮಾತ್ರವಲ್ಲದೇ ಉಳಿದ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಹೀಗಾಗಿ ಸರಕಾರ ಕೂಡ ಈ ಕುರಿತು ಗಂಭೀರ ಚಿಂತನೆ ನಡೆಸಿದೆ.

ವೀಕೆ‌ಂಡ್ ಕರ್ಪ್ಯೂ ಬೆನ್ನಲ್ಲೇ ರಾಜ್ಯದಲ್ಲಿ ದಿನವೀಡಿ ಕರ್ಪ್ಯೂ ಹೇರಿಕೆ ಮಾಡುವ ಸಾದ್ಯತೆಯಿದೆ. ಸಿಎಂ ಯಡಿಯೂರಪ್ಪ ಈ ಕುರಿತು ಈಗಾಗಲೇ ರಾಜ್ಯದ ಸಚಿವರ ಬಳಿಯಲ್ಲಿ ಅಭಿಪ್ರಾಯ ಕೇಳಿದ್ದಾರೆ‌. ತಾಂತ್ರಿಕ ಸಮಿತಿ ಈಗಾಗಲೇ ಲಾಕ್ ಡೌನ್ ಕುರಿತು ಅಭಿಪ್ರಾಯ ನೀಡಿದೆ, ಅಲ್ಲದೇ ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಕೂಡ ಲಾಕ್ ಡೌನ್ ಮಾಡಿ ಅಂದಿದ್ದಾರೆ. ಒಂದೊಮ್ಮೆ ಸಚಿವರು ಕೂಡ ಅದೇ ಅಭಿಪ್ರಾಯ ಮಂಡಿಸಿದ್ರೆ ಹೊಸ ರೂಲ್ಸ್ ಜಾರಿಗೆ ಬರೋದು ಪಕ್ಕಾ.

Comments are closed.