ಮೊದಲ ಬಾರಿಗೆ ಬೇಸರ-ಕೋಪದಲ್ಲಿ ಮಾತನಾಡುತ್ತಿದ್ದೇನೆ…! ನಟ ಪ್ರಜ್ವಲ್ ದೇವರಾಜ್ ಹೀಗ್ಯಾಕಂದ್ರು ಗೊತ್ತಾ…?!

ಕೊರೋನಾ ಎರಡನೇ ಅಲೆಯ ಆರಂಭದಲ್ಲೇ ಸ್ಯಾಂಡಲ್ ವುಡ್ ಇನ್ಸಪೆಕ್ಟರ್ ವಿಕ್ರಂ ಖ್ಯಾತಿಯ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು.  ಇದೀಗ ಸೋಂಕಿನಿಂತ ಚೇತರಿಸಿಕೊಂಡು ಹೊರಬಂದಿರೋ ಪ್ರಜ್ವಲ್ ಕೋಪ ಹಾಗೂ ಬೇಸರದಲ್ಲಿ ಮಾತನಾಡುವ ಸ್ಥಿತಿ ಇದೆ ಎನ್ನುವ ಮೂಲಕ ತಮ್ಮ ಸಂದೇಶ ನೀಡಿದ್ದಾರೆ.

ಪ್ರಜ್ವಲ್  ಹಾಗೂ ಅವರ ಪತ್ನಿ ತಮ್ಮ ಕೊರೋನಾ ಸೋಂಕಿನ ಅನುಭವವನ್ನು ಹಂಚಿಕೊಂಡಿದ್ದು, ಮನೆಯಲ್ಲಿ ಎಲ್ಲರಿಗೂ ಆತಂಕವಾಗಿತ್ತು ಎಂದಿದ್ದಾರೆ. ಅಷ್ಟೇ ಅಲ್ಲ ಜಗತ್ತಿನಲ್ಲಿ,ದೇಶದಲ್ಲಿ, ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗಲು ಜನರ ನಿರ್ಲಕ್ಷ್ಯವೇ ಕಾರಣವಾಗುತ್ತಿದೆ ಎಂದು ಅಭಿಪ್ರಾಯಿಸಿದ್ದಾರೆ.

 ಯಾವಾಗಲೂ ನಿಮ್ಮೊಂದಿಗೆ ಮಾತನಾಡಲು ಖುಷಿ,ಸಂಭ್ರಮ ಇರುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಬೇಸರ ಹಾಗೂ ಕೋಪದಲ್ಲಿ ಮಾತನಾಡುತ್ತಿದ್ದೇನೆ. ಎಲ್ಲರೂ ಕೊರೋನಾದ ಚಿಕ್ಕ ಚಿಕ್ಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಲ್ಲಿ ನಿರ್ಲಕ್ಷ್ಯತನ ತೋರುತ್ತಿದ್ದೀರಿ. ಹೀಗಾಗಿ ಸೋಂಕು ಹೆಚ್ಚುತ್ತಿದೆ.

ಸರಿಯಾಗಿ ಮಾಸ್ಕ್ ಧರಿಸದೇ ಅದನ್ನು ಕುತ್ತಿಗೆಗೆ, ಮೂಗಿನ ಕೆಳಭಾಗಕ್ಕೆ ಹಾಕಿಕೊಂಡು ಓಡಾಡುತ್ತಿದ್ದೀರಿ. ಇದರಿಂದ ಕೊರೋನಾ ಹೆಚ್ಚುತ್ತಿದೆ. ಅದೇಷ್ಟೋ ಜನರು ತಂದೆ-ತಾಯಿ-ಅಣ್ಣ,ತಮ್ಮ ಬಂಧುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ದಯವಿಟ್ಟು ಅರ್ಥ ಮಾಡಿಕೊಂಡು ಕೊರೋನಾ ನಿಯಮಗಳನ್ನು ಸರಿಯಾಗಿ ಪಾಲಿಸಿ ಎಂದು ಮನವಿ ಮಾಡಿದ್ದಾರೆ.

https://www.facebook.com/watch/?v=800724410867069

ಪೊಲೀಸರು ಅವರಿಗಾಗಿ ನಿಯಮ ರೂಪಿಸಿಲ್ಲ. ನಿಮ್ಮ ಹಿತಕ್ಕಾಗಿಯೇ ನಿಯಮವಿದೆ. ಪಾಲಿಸಿ ಕೊರೋನಾದಿಂದ ಸುರಕ್ಷಿತವಾಗಿರಿ. ನೀವೆಲ್ಲ ಖುಷಿಯಾಗಿದ್ದರೇ, ಸುಖವಾಗಿದ್ದರೇ ಮಾತ್ರ ನಾವು ಚೆನ್ನಾಗಿರಲು ಸಾಧ್ಯ. ನಮ್ಮ ಬದುಕು ಸುಂದರವಾಗಿರಲು ಸಾಧ್ಯ. ಅರ್ಥ ಮಾಡಿಕೊಳ್ಳಿ. ನಿಮ್ಮವರಿಗಾಗಿ ನಿಯಮ ಪಾಲಿಸಿ ಎಂದು ಕೈಮುಗಿದು ಮನವಿ ಮಾಡಿದ್ದಾರೆ.

ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ನಟಿ, ರಾಗಿಣಿ ಚಂದ್ರನ್  ಈ ಮನವಿಯ ವಿಡಿಯೋವನ್ನು ಬೆಂಗಳೂರು ನಗರ ಪೊಲೀಸ್ ಇಲಾಖೆ ತನ್ನ ಅಧಿಕೃತ್ ಪೇಜ್ ನಲ್ಲಿ ಹಂಚಿಕೊಂಡಿದೆ.

Comments are closed.