ಬುಧವಾರ, ಏಪ್ರಿಲ್ 30, 2025
HomeCorona UpdatesMask Compulsory : ರಾಜ್ಯಕ್ಕೆ ಮತ್ತೆ ಕೊರೋನಾ ಆತಂಕ : ಮಾಸ್ಕ್ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ

Mask Compulsory : ರಾಜ್ಯಕ್ಕೆ ಮತ್ತೆ ಕೊರೋನಾ ಆತಂಕ : ಮಾಸ್ಕ್ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ

- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆ ಅಂತಹ ಸದ್ದು ಮಾಡಿರಲಿಲ್ಲ. ಹೀಗಾಗಿ ಜನಜೀವನ ಸಹಜ ಸ್ಥಿತಿಗೆ ಮರಳಲಾರಂಭಿಸಿತ್ತು. ಜನರು ವ್ಯಾಪಾರ ಉದ್ಯೋಗ ಎಂದು ಮನೆಯಿಂದಾಚೆಗೆ ಕಾಲಿಡಲಾರಂಭಿಸಿದ್ದರು. ಅಷ್ಟೇ ಅಲ್ಲ ಮುಖ್ಯವಾಗಿ ಶಾಲಾ ಕಾಲೇಜುಗಳು ಭೌತಿಕ ತರಗತಿಗಳನ್ನು ಆರಂಭಿಸಿದ್ದವು. ಆದರೆ ಈ ಎಲ್ಲದರ ಮೇಲೆ ಮತ್ತೆ ಕೊರೋನಾ ಕರಿನೆರಳು ಮೂಡಲಾರಂಭಿಸಿದ್ದು, ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿ (Mask Compulsory ) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೌದು ರಾಜ್ಯದಲ್ಲಿ ನಿಧನವಾಗಿ ಕೊರೋನಾ ಕೇಸ್ ಗಳ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಕೆಲ ತಿಂಗಳ ಹಿಂದೆ ರಾಜ್ಯದಲ್ಲಿ ಏಕಂಕಿಯಲ್ಲಿದ್ದ ಕೊರೋನಾ ಸಂಖ್ಯೆ ಈಗ ಶತಕದ ಗಡಿ ದಾಟಿ ನಿಧಾನಕ್ಕೆ ಸಾವಿರದ ಅಂಚಿಗೆ ತಲುಪಿದೆ. ನಿನ್ನೆ 438 ರಲ್ಲಿದ್ದ ಕೊರೋನಾ ಕೇಸ್ ಇಂದು 525 ನ್ನು ತಲುಪಿದೆ.

ಈ ಹಿನ್ನೆಲೆಯಲ್ಲಿ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆದಿದೆ. ಸಭೆಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆಗೆ ಸೂಚನೆ ನೀಡಲಾಗಿದೆ.
ಕಳೆದ 10 ದಿನಗಳಿಂದ ಕೋವಿಡ್ ನಿಧಾನಗತಿಯ ಏರಿಕೆಯಾಗ್ತಿದ್ದು, ಜೂ.6ರಂದು 471 ಕೇಸ್, ಪಾಸಿಟಿವ್ ಪ್ರಮಾಣ 2.14% ವರದಿ ಬಂದಿದೆ. ಈ ಬೆಳವಣಿಗೆಗಳನ್ನು ಗಮನಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಆಯುಕ್ತ ರಂದೀಪ್ ಕೊರೊನಾ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದಾರೆ.

Mask Compulsory : ಸರಕಾರದ ಮಾರ್ಗಸೂಚಿಯಲ್ಲಿ ಏನಿದೆ ?

  • ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
  • ಮಾರ್ಷಲ್/ ಪೋಲೀಸ್ ಸಿಬ್ಬಂದಿಗಳ ಸಹಾಯವನ್ನು ಪಡೆಯುವುದು
  • ಶಾಪಿಂಗ್ ಮಾಲ್‌ಗಳು, ರೆಸ್ಟೋರೆಂಟ್‌ಗಳು, ಕಚೇರಿ, ಕಾರ್ಖಾನೆಗಳಲ್ಲಿ ಮಾಸ್ಕ್‌ ಕಡ್ಡಾಯ
  • ಮಾಸ್ಕ್ ಧರಿಸಿ ಬರುವರಿಗೆ ಮಾತ್ರವೇ ಪ್ರವೇಶ ನೀಡುವುದನ್ನು ಖಚಿತಪಡಿಸಿಕೊಳ್ಳುವುದು ಆಯಾ ಸಂಸ್ಥೆಯ ಜವಾಬ್ದಾರಿ
  • ಸ್ವಂತ ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ( ಬಸ್ ಹಾಗೂ ರೈಲು) ಪ್ರಯಾಣಿಸುವ ಸಂದರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ
  • ILI & SARI, ಹೈರಿಸ್ ಗುಂಪಿನವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು
  • ಕೊರೊನಾ ಪರೀಕ್ಷೆಗೆ ಒಳಪಡುವುದು ಹಾಗೂ ಫಲಿತಾಂಶ ಲಭ್ಯವಾಗುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು
  • ಅರ್ಹ ಜನರೆಲ್ಲರೂ ಮುಂಜಾಗ್ರತಾ ಲಸಿಕೆ ಪಡೆಯುವುದು.

ಈ ಸೂಚನೆಗಳನ್ನು ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಬಿಡುಗಡೆಮಾಡಿದ್ದು, ಒಂದೊಮ್ಮೆ ರಾಜ್ಯದಲ್ಲಿ ಮತ್ತೊಮ್ಮೆ ಕೊರೋನಾ ಪ್ರಕರಣಗಳು ಏರಿಕೆಯಾದಲ್ಲಿ ನಿಯಮಗಳು ಇನ್ನಷ್ಟು ಕಠಿಣಗೊಳಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : 777 Charlie : 777 ಚಾರ್ಲಿ ಬೆನ್ನಲ್ಲೇ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಡ್ತಿದೆ ಮತ್ತೊಂದು ಶ್ವಾನ ಕತೆಯಾಧಾರಿತ ಸಿನಿಮಾ

ಇದನ್ನೂ ಓದಿ : ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌ : ಶೇ. 35-60ರಷ್ಟು ಇಳಿಕೆಯಾಗಲಿದೆ ಮದ್ಯದ ದರ

Karnataka Corona Hike Mask Compulsory Govt Release New Guidelines

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular