777 Charlie : 777 ಚಾರ್ಲಿ ಬೆನ್ನಲ್ಲೇ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಡ್ತಿದೆ ಮತ್ತೊಂದು ಶ್ವಾನ ಕತೆಯಾಧಾರಿತ ಸಿನಿಮಾ

777 Charlie : ಪ್ರಾಣಿಗಳು ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದು ನಾಯಿಯೇ ಇರಲಿ ಅಥವಾ ಬೆಕ್ಕೇ ಇರಲಿ ಪ್ರಾಣಿ ಪ್ರಿಯರು ಇವುಗಳನ್ನು ತಮ್ಮ ಸ್ವಂತ ಮಕ್ಕಳಂತೆಯೇ ಸಾಕುತ್ತಾರೆ. ಇದೇ ಕಾರಣಕ್ಕಾಗಿಯೇ ಶ್ವಾನಗಳ ಜೊತೆಗಿನ ಸಿನಿಮಾಗಳು ಪ್ರೇಕ್ಷಕರನ್ನು ಹೆಚ್ಚೆಚ್ಚು ಆಕರ್ಷಿಸುತ್ತದೆ.


ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಅಭಿನಯದ ಕನ್ನಡ ಸಿನಿಮಾ 777 ಚಾರ್ಲಿ ಇಂದು ಚಿತ್ರಮಂದಿರಗಳಲ್ಲಿ ಕಮಾಲ್​ ಮಾಡಿದೆ. ಜೀವನದಲ್ಲಿ ಯಾವುದೇ ಆಸಕ್ತಿ ಇಲ್ಲದ ವ್ಯಕ್ತಿಯೊಬ್ಬ ಹೇಗೆ ನಾಯಿಯೊಂದಿಗೆ ತನ್ನ ಬಂಧವನ್ನು ಬೆಸೆದುಕೊಳ್ತಾನೆ. ಹಾಗೂ ಈ ಶ್ವಾನವು ಹೇಗೆ ಒಬ್ಬ ವ್ಯಕ್ತಿಯ ಜೀವನವನ್ನು ಬದಲಾಯಿಸಿಬಿಡುತ್ತದೆ ಎಂಬುದನ್ನು ಚಿತ್ರಿಸಿಕೊಟ್ಟಿದೆ. ಪ್ರೀಮಿಯರ್​ ಶೋ ಹಾಗೂ ಸಿನಿಮಾ ರಿಲೀಸ್​ ಬಳಿಕ ಸಾಕಷ್ಟು ಪ್ರೇಕ್ಷಕರು ಈ ಸಿನಿಮಾವನ್ನು ವೀಕ್ಷಿಸಿದ್ದು ರಕ್ಷಿತ್​ ಶೆಟ್ಟಿ ಹಾಗೂ ಚಾರ್ಲಿ ಅಭಿನಯಕ್ಕೆ ಫಿದಾ ಆಗಿದ್ದಾರೆ. ಸಿನಿಮಾ ವೀಕ್ಷಕರು ಇನ್ನೂ 777 ಚಾರ್ಲಿ ಹ್ಯಾಂಗ್​ಓವರ್​ನಲ್ಲಿ ಇರುವಾಗಲೇ ಕನ್ನಡದಲ್ಲಿ ಮತ್ತೊಂದು ಶ್ವಾನದ ಕತೆ ಆಧಾರಿತ ಸಿನಿಮಾ ತೆರೆಗೆ ಅಪ್ಪಳಿಸಲು ಸಿದ್ಧವಾಗ್ತಿದೆ.ಈ ತಿಂಗಳ ಕೊನೆಯಲ್ಲಿ ಸಿನಿಮಾ ಶೂಟಿಂಗ್​ ಆರಂಭವಾಗಲಿದೆ.


ಸಧ್ಯಕ್ಕೆ ಈ ಸಿನಿಮಾಗೆ ಪ್ರೊಡಕ್ಷನ್​ ನಂಬರ್​ 2 ಎಂದು ಹೆಸರಿಡಲಾಗಿದೆ. ಇದು ವಿಕಲಾಂಗ ಚೇತನ ಹುಡುಗಿ ಹಾಗೂ ಶ್ವಾನದ ನಡುವಿನ ಮಧುರ ಸಂಬಂಧದ ಸುತ್ತ ಹೆಣೆದ ಕತೆಯಾಗಿದೆ. ಇದರಲ್ಲಿ ವಿಕಲಾಂಗ ಚೇತನ ಹುಡುಗಿ ಪಾತ್ರವನ್ನು ನಿರ್ಮಾಪಕರ ಪುತ್ರಿ ಪ್ರಕೃತಿ ನಿರ್ವಹಿಸಿದ್ದಾರೆ. ರಾಕಿ ಎಂಬ ಶ್ವಾನವು ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದೆ.

ನಿರ್ದೇಶಕ ವಿಶ್ವಾಸ್ ಕೃಷ್ಣ ಅವರ ಚೊಚ್ಚಲ ನಿರ್ದೇಶನವನ್ನು ಶರಣಪ್ಪ ಗೌರಮ್ಮ ನಿರ್ಮಿಸುತ್ತಿದ್ದಾರೆ. ಮೂರು ಹಾಡುಗಳಿರುವ ಚಿತ್ರಕ್ಕೆ ಅನಿಲ್ ಸಿಜೆ ಸಂಗೀತ ನೀಡುತ್ತಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಲಿದ್ದಾರೆ.


777 ಚಾರ್ಲಿ ಸಿನಿಮಾದ ಬಗ್ಗೆ ಮಾತನಾಡುವುದಾದರೆ ಈ ಸಿನಿಮಾದಲ್ಲಿ ಮನೆ ಫ್ಯಾಕ್ಟರಿ ಹಾಗೂ ಧೂಮಪಾನ , ಬಿಯರ್​​ ಕುಡಿಯುತ್ತಾ ಇದ್ದ ವ್ಯಕ್ತಿಯೊಬ್ಬ ತನ್ನ ಜೀವನದ ಬಗ್ಗೆ ಸಂಪೂರ್ಣ ಆಸಕ್ತಿಯನ್ನು ಕಳೆದುಕೊಂಡಿರ್ತಾನೆ. ಈ ಸಮಯದಲ್ಲಿ ಈತನ ಜೀವನದಲ್ಲಿ ಬರುವ ಹೆಣ್ಣು ನಾಯಿಯೊಂದು ಈತನ ಜೀವನವನ್ನು ಯಾವ ರೀತಿಯಲ್ಲಿ ಬದಲಾಯಿಸುತ್ತೆ ಎನ್ನುವುದೇ ಕತೆಯಾಗಿದೆ.

ಇದನ್ನು ಓದಿ : Teen Shot Mother :ಮೊಬೈಲ್​​ ಹುಚ್ಚಿಗೆ ತಾಯಿಯನ್ನೇ ಕೊಂದ ಬಾಲಕ

ಇದನ್ನೂ ಓದಿ : Virat Kohli New Record : 10 ವರ್ಷಗಳಲ್ಲಿ 20 ಸಾವಿರ ರನ್ ; ಶತಕ “ಬರ”ದೇ ಇದ್ರೂ ಕೊಹ್ಲಿಯೇ ಕಿಂಗ್

After Rakshit Shetty’s 777 Charlie, Another Similar Film to Hit Theatres Soon

Comments are closed.