Private Hospitals : ಖಾಸಗಿ ಆಸ್ಪತ್ರೆ ಸಂಕಷ್ಟಕ್ಕಿಲ್ಲ ಬೆಲೆ : ಕೋಟ್ಯಾಂತರ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡ ಸರಕಾರ

ಬೆಂಗಳೂರು : ಕೊರೋನಾ ಒಂದು ಮತ್ತು ಎರಡನೇ ಅಲೆಯಲ್ಲಿ ಜನರ ಜೀವ ಉಳಿಸಲು ಸರ್ಕಾರಿ ಆಸ್ಪತ್ರೆಗಳಂತೆ, ಖಾಸಗಿ ಆಸ್ಪತ್ರೆಗಳು ಶ್ರಮಿಸಿವೆ. ಕೆಲ ಆಸ್ಪತ್ರೆಗಳು ರೋಗಿಗಳನ್ನು ಸುಲಿಗೆ ಮಾಡಿದ್ದರೂ ಹಲವು ಆಸ್ಪತ್ರೆಗಳು ಆಕ್ಸಿಜನ್ ಸೇರಿದಂತೆ ರೋಗಿಗಳ ಅಗತ್ಯಕ್ಕೆ ತಕ್ಕಂತೆ ಸೌಲಭ್ಯ ಒದಗಿಸಿದೆ. ಆದರೆ ಹೀಗೆ ರೋಗಿಗಳ ಕಷ್ಟಕ್ಕೆ ಸ್ಪಂದಿಸಿದ ಖಾಸಗಿ ಆಸ್ಪತ್ರೆಗಳೇ Private Hospitals bill pending) ಈಗ ಸರ್ಕಾರದ ಧೋರಣೆಯಿಂದ ಸಂಕಷ್ಟಕ್ಕೆ ಸಿಲುಕಿವೆ.

ಹೌದು, ಕೊರೋನಾ ಒಂದು ಮತ್ತು ಎರಡನೇ ಅಲೆಯಲ್ಲಿ ಕೊರೋನಾ ವಿರುದ್ಧ ಹೋರಾಟದಲ್ಲಿ ಸರ್ಕಾರಕ್ಕೆ ಸಹಾಯ ಮಾಡಿದ್ದ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಕೋಟ್ಯಾಂತರ ರೂಪಾಯಿ ಬಾಕಿ ಉಳಿಸಿಕೊಂಡಿದೆ.ಇದರಿಂದ ಖಾಸಗಿ ಆಸ್ಪತ್ರೆಗಳು ಕಂಗಾಲಾಗಿದ್ದು ಬಿಲ್ ಪೇ ಮಾಡುವಂತೆ ಸರ್ಕಾರಕ್ಕೆ ದುಂಬಾಲು ಬಿದ್ದಿವೆ. ಕೊರೋನಾ ಚಿಕಿತ್ಸೆ ‌ನೀಡಿದ ಬಿಲ್ ನೀಡದೆ ಇರೋದಕ್ಕೆ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿರುವ ಖಾಸಗಿ ಆಸ್ಪತ್ರೆಗಳು ಒಂದನೇ ಅಲೆಯಲ್ಲಿ ಚಿಕಿತ್ಸೆ ನೀಡಿದ್ದೇವೆ. ಆದರೆ ಎರಡನೇ ಅಲೆ‌ ಮುಗಿದು ಮೂರನೇ ಕಾಲಿಟ್ಟರೂ ಸರ್ಕಾರ ಬಿಲ್ ಪಾವತಿಸಿಲ್ಲ ಎಂದು ತಮ್ಮ ನೋವು ತೋಡಿಕೊಂಡಿದೆ. ಮೂಲಗಳ ಮಾಹಿತಿ ಪ್ರಕಾರ ಸರ್ಕಾರ ನಗರದ ಹಲವು ಖಾಸಗಿ ಆಸ್ಪತ್ರೆಗಳಿಗೆ ಒಟ್ಟೂ 300 ಕೋಟಿ ಅನುದಾನ ಪಾಲಿತಿಸಬೇಕು.

ಇದುವರೆಗೂ ಖಾಸಗಿ ಆಸ್ಪತ್ರೆಗಳ ಒತ್ತಡದಿಂದ ಸರ್ಕಾರ ಕೇವಲ 140 ಕೋಟಿ ಹಣ ಪಾವತಿಸಿದೆ. ಆದರೆ ಇನ್ನೂ ಸರ್ಕಾರ ಹಲವು ಆಸ್ಪತ್ರೆಗಳಿಗೆ ಒಟ್ಟು 160 ಕೋಟಿಗೂ ಅಧಿಕ ಹಣ ಪಾವತಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಮನವಿ‌ಮಾಡಿರುವ ಖಾಸಗಿ ವೈದ್ಯರ ಒಕ್ಕೂಟ ಫನಾ ಅಧ್ಯಕ್ಷ ಡಾ.ಪ್ರಸನ್ನ, ಕಟ್ಟಡ ಗುತ್ತಿಗೆದಾರರಿಗೆ ಹಾಗೂ ಇತರರಿಗೆ ಬಾಕಿ ಉಳಿಸಿಕೊಂಡಂತೆ ನಮಗೂ ಬಿಲ್ ಬಾಕಿ ಉಳಿಸಿಕೊಳ್ಳಬೇಡಿ. ಇದರಿಂದ ಖಾಸಗಿ‌ ಆಸ್ಪತ್ರೆಗಳು ಸಂಕಷ್ಟಕ್ಕೆ ಸಿಲುಕಿವೆ. ಕಟ್ಟಡ ಬಾಡಿಗೆ, ಅಗತ್ಯ ಔಷಧಿ,ನರ್ಸ್ ಗಳು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳಿಗೆ ವೇತನ ನೀಡಬೇಕು.ಹೀಗಾಗಿ ನಮ್ಮ ಕಷ್ಟ ಅರಿತು ಬೇಗ ನಮಗೆ ಬರಬೇಕಿರುವ ಹಣ ಪಾವತಿಸಿ ಎಂದು ಮನವಿ ಮಾಡಿದ್ದಾರೆ.

ಎರಡನೇ ಅಲೆಯ ವೇಳೆಗೂ ಸರ್ಕಾರ ಅಕ್ಸಿಜನ್ ಸೇರಿದಂತೆ ಹಲವು ಅಗತ್ಯ ಸೇವೆಗಳಿಗಾಗಿ ಸರ್ಕಾರ ಖಾಸಗಿ‌ ಆಸ್ಪತ್ರೆಗಳನ್ನು ಬಳಸಿಕೊಂಡಿತ್ತು. ಇದೀಗ ಸರ್ಕಾರ ಕೋಟ್ಯಾಂತರ ರೂಪಾಯಿ ಬಾಕಿ ಉಳಿಸಿಕೊಂಡಿರುವ ಸಂಗತಿ ಬಯಲಾಗಿದ್ದು, ಒಂದೊಮ್ಮೆ ಸರ್ಕಾರ ಬಾಕಿ ಹಣ ಪಾವತಿಸದಿದ್ದರೇ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : ದೇಶದಲ್ಲಿ ಕೊರೊನಾ ರೌದ್ರಾವತಾರ: ಒಂದೇ ದಿನದಲ್ಲಿ 3.37 ಲಕ್ಷ ಹೊಸ ಪ್ರಕರಣ ವರದಿ

ಇದನ್ನೂ ಓದಿ : ಬಿಬಿಎಂಪಿ ಟೆಸ್ಟ್ ಮಾಡಿಸಿ ಅನುತ್ತೇ, ಸಚಿವರು ಬೇಡ ಅಂತಾರೆ : ಸರ್ಕಾರದ ಡೊಂಬರಾಟಕ್ಕೆ ಜನರು ಹೈರಾಣ

( Karnataka government pending corona treatment amount for private hospitals)

Comments are closed.