ದೇವರನಾಡಲ್ಲಿ ನಿಲ್ಲದ ಕೊರೊನಾ ಆರ್ಭಟ : 24 ಗಂಟೆಯಲ್ಲಿ 29,836 ಮಂದಿಗೆ ಸೋಂಕು

ತಿರುವನಂತಪುರಂ : ಕೇರಳದಲ್ಲಿ ಕೊರೊನಾ ವೈರಸ್‌ ಸೋಂಕಿನ ಆರ್ಭಟ ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಕಳೆದ ಐದು ದಿನಗಳಿಂದಲೂ ಮೂವರತ್ತು ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲಾಗುತ್ತಿದೆ. ಇಂದು ಸೋಂಕಿನ ಪ್ರಮಾಣದಲ್ಲಿ ಕೊಂಚ ಇಳಿಕೆ ಕಂಡಿದೆಯಾದ್ರೂ ಪಾಟಸಿಟಿವಿಟಿ ಪ್ರಮಾಣದಲ್ಲಿ ಮಾತ್ರ ಇಳಿಕೆಯಾಗಿಲ್ಲ. ಕಳೆದ 24 ಗಂಟೆಗಳ ಅವಧಿಯಲ್ಲಿ 29,836 ಮಂದಿಗೆ ಸೋಂಕು ದೃಢಪಟ್ಟಿದೆ.

ತ್ರಿಶೂರ್ 3965, ಕೋಯಿಕ್ಕೋಡ್ 3548, ಮಲಪ್ಪುರಂ 3190, ಎರ್ನಾಕುಲಂ 3178, ಪಾಲಕ್ಕಾಡ್ 2816, ಕೊಲ್ಲಂ 2266, ತಿರುವನಂತಪುರಂ 2150, ಕೊಟ್ಟಾಯಂ 1830, ಕಣ್ಣೂರು 1753, ಆಲಪ್ಪುಳ 1498, ಪತ್ತನಂತಿಟ್ಟ 1178, ವಯನಾಡ್ 1002, ಇಡುಕ್ಕಿ 962 ಮತ್ತು ಕಾಸರಗೋಡ ಜಿಲ್ಲೆಯಲ್ಲಿ 500 ಕೊರೊನಾ ಪ್ರಕರಣಗಳು ದಾಖಲಾಗಿದೆ.

ಕಳೆದ 24 ಗಂಟೆಗಳಲ್ಲಿ 1,51,670 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಪಾಸಿಟಿವಿಟಿ ದರ 19.67 ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೆ 3,12,75,313 ಮಾದರಿಗಳನ್ನುಪರೀಕ್ಷಿಸಲಾಗಿದೆ. ಕೊರೊನಾ ಸಾವಿನ ಸಂಖ್ಯೆ ಕೊಂಚ ಇಳಿಕೆ ಕಂಡಿದೆ. ಇಂದು 75 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ರಾಜ್ಯದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 20,541 ಕ್ಕೆ ಏರಿಕೆ ಕಂಡಿದೆ.

ಕೇರಳದಲ್ಲಿ ಒಟ್ಟು 5,33,817 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 5,03,762 ಮನೆ ಹಾಗೂ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ರೆ, 30,055 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಲ್ಲದೇ ಹೊಸದಾಗಿ 2666 ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಇದನ್ನೂ ಓದಿ : ಕೇರಳದಿಂದ ಬಂದಿದ್ದ 15 ವಿದ್ಯಾರ್ಥಿಗಳಿಗೆ ಕೊರೊನಾ : ಕೋಲಾರದ ನರ್ಸಿಂಗ್‌ ಕಾಲೇಜಿನಲ್ಲಿ ಕೊರೊನಾ ರಣಕೇಕೆ

ಇದನ್ನೂ ಓದಿ : Kerala Corona Updates : ಕೇರಳದಲ್ಲಿ ನಿಲ್ಲದ ಕೊರೊನಾ ಆರ್ಭಟ : ಇಂದು 31,265 ಮಂದಿಗೆ ಕೊರೊನಾ ಸೋಂಕು

Comments are closed.