Lata Mangeshkar : ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ಗೆ ಕೊರೊನಾ ಸೋಂಕು ಧೃಡಪಟ್ಟಿರುವ ಹಿನ್ನೆಲೆಯಲ್ಲಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. 92 ವರ್ಷ ಪ್ರಾಯದ ಹಿರಿಯ ಗಾಯಕಿಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಲತಾ ಮಂಗೇಶ್ಕರ್ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸೋದರ ಸೊಸೆ ರಚನಾ, ಲತಾ ಮಂಗೇಶ್ಕರ್ ಆರೋಗ್ಯವಾಗಿದ್ದಾರೆ. ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ನಮ್ಮ ಖಾಸಗಿತನಕ್ಕೆ ಗೌರವ ನೀಡಿ ಹಾಗೂ ಲತಾ ಮಂಗೇಶ್ಕರ್ ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿ ಎಂದು ಹೇಳಿದ್ದಾರೆ.
ಇನ್ನು ಉನ್ನತ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಲತಾ ಮಂಗೇಶ್ಕರ್ರಿಗೆ ಕೊರೊನಾ ಅಸಿಂಪ್ಟೋಮ್ಯಾಟಿಕ್ ಲಕ್ಷಣಗಳಿವೆ ಎಂದು ತಿಳಿದುಬಂದಿದೆ. ಲತಾ ಮಂಗಾಶ್ಕರ್ ಆರೋಗ್ಯವಾಗಿದ್ದು ವೈದ್ಯರು ಅವರ ಮೇಲೆ ನಿಗಾ ಇಟ್ಟಿದ್ದಾರೆ ಎನ್ನಲಾಗಿದೆ.
ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ 2019ರ ನವೆಂಬರ್ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಲತಾ ಮಂಗೇಶ್ಕರ್ರಿಗೆ ವೈರಲ್ ಸೋಂಕು ಹರಡಿತ್ತು ಎಂದು ಲತಾ ಮಂಗೇಶ್ಕರ್ ಕಿರಿಯ ಸಹೋದರಿ ಉಷಾ ಮಾಹಿತಿ ನೀಡಿದ್ದರು.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಕುಟುಂಬಸ್ಥರ ಜೊತೆಯಲ್ಲಿ ಲತಾ ಮಂಗೇಶ್ಕರ್ ತಮ್ಮ 92 ವರ್ಷದ ಜನ್ಮ ದಿನವನ್ನು ಆಚರಿಸಿದ್ದಾರೆ.ತೀರಾ ಆಪ್ತರಿಗೆ ಮಾತ್ರ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತಾದರೂ ಸೋಶಿಯಲ್ ಮೀಡಿಯಾದಲ್ಲಿ ಲತಾ ಮಂಗೇಶ್ಕರ್ ಜನ್ಮ ದಿನಕ್ಕೆ ಶುಭಾಶಯಗಳ ಸುರಿಮಳೆಯೇ ಹರಿದುಬಂದಿತ್ತು. ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿ ಲತಾ ಮಂಗೇಶ್ಕರ್ ರ ದೀರ್ಘ ಹಾಗೂ ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇವೆ ಎಂದು ಟ್ವೀಟ್ ಮಾಡಿದ್ದರು.
ಬರೋಬ್ಬರಿ 7 ದಶಕಗಳ ವೃತ್ತಿ ಜೀವನದಲ್ಲಿ ಇಂದೋರ್ ಮೂಲದ ಲತಾ ಮಂಗೇಶ್ಕರ್ 1000ಕ್ಕೂ ಅಧಿಕ ಬಾಲಿವುಡ್ ಸಿನಿಮಾಗಳಲ್ಲಿ ಹಾಡಿದ್ದಾರೆ. 2004ರ ಯಶ್ ಚೋಪ್ರಾ ನಿರ್ದೇಶನದ ವೀರ್ ಝಾರಾ ಸಿನಿಮಾದಲ್ಲಿ ಲತಾ ಮಂಗೇಶ್ಕರ್ ಕೊನೆಯ ಬಾರಿಗೆ ಹಾಡಿದ್ದಾರೆ. ಸೌಗಂಧ ಮುಝೆ ಇಸ್ ಮಿಟ್ಟಿ ಕಿ ಎಂಬ ಹಾಡು ಲತಾ ಮಂಗೇಶ್ಕರ್ ತಮ್ಮ ವೃತ್ತಿ ಜೀವನದಲ್ಲಿ ಹಾಡಿದ ಕೊನೆಯ ಹಾಡಾಗಿದೆ. ಇದು 2021ರ ಮಾರ್ಚ್ 30ರಂದು ರಿಲೀಸ್ ಆಗಿದೆ. ಇದು ಭಾರತೀಯ ಸೇನೆಗೆ ಗೌರವ ಸಲ್ಲಿಸುವ ಹಾಡಾಗಿದೆ. ಲತಾ ಮಂಗೇಶ್ಕರ್ರಿಗೆ 2001ರಲ್ಲಿ ಭಾರತದ ಅತ್ಯುನ್ನತ ಭಾರತ ರತ್ನವನ್ನು ನೀಡಿ ಗೌರವಿಸಲಾಗಿದೆ. ಇದನ್ನು ಹೊರತುಪಡಿಸಿ ಪದ್ಮಭೂಷಣ, ಪದ್ಮ ವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಸಾಕಷ್ಟು ರಾಷ್ಟ್ರೀಐ ಪ್ರಶಸ್ತಿಗಳು ಲತಾ ಮಂಗೇಶ್ಕರ್ ಮುಡಿಗೇರಿವೆ.
Lata Mangeshkar Admitted to ICU at Breach Candy Hospital in Mumbai After Contracting Covid-19
ಇದನ್ನು ಓದಿ : Bombay High Court : ಕೊರೊನಾ ಲಸಿಕೆ ಪಡೆಯದವರಿಗೆ ತಾರತಮ್ಯ ಮಾಡುವಂತಿಲ್ಲ : ಬಾಂಬೆ ಹೈಕೋರ್ಟ್
ಇದನ್ನೂ ಓದಿ : Aadhaar for future Schemes: ಆಧಾರ್ ಮಾಹಿತಿ ಸಂಚಿಕೆಗೆ ಒಪ್ಪಿಗೆ ಪಡೆಯಲು ಮುಂದಾಗಲಿದೆ ಸರ್ಕಾರ