omicron positive :ದೇಶದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಓಮಿಕ್ರಾನ್ ರೂಪಾಂತರಿಯಂತೂ ತನ್ನ ಕಬಂಧಬಾಹುವನ್ನು ಚಾಚುತ್ತಲೇ ಇದ್ದು ಇದು ಮುಂದೆ ಯಾವ ರೀತಿಯ ಗಂಭೀರ ಪರಿಣಾಮ ಉಂಟು ಮಾಡಬಹುದು ಎಂಬ ಭಯ ಎಲ್ಲರಲ್ಲೂ ಇದೆ. ಓಮಿಕ್ರಾನ್ ಪ್ರಕರಣ ವರದಿ, ಚಿಕಿತ್ಸೆ ನಡುವೆಯೇ ಇದೀಗ ದೇಶದಲ್ಲಿ ಓಮಿಕ್ರಾನ್ ಸೋಂಕನ್ನು ಹೊಂದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇಡೀ ದೇಶದಲ್ಲಿ ಪ್ರಸ್ತುತ ಮಹಾರಾಷ್ಟ್ರವು ಅತೀ ಹೆಚ್ಚು ಕೊರೊನಾ ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡುತ್ತಿದೆ. ಇದೇ ರಾಜ್ಯದ ಪಿಂಪ್ರಿ ಜಿಲ್ಲೆಯಲ್ಲಿ ಓಮಿಕ್ರಾನ್ ರೂಪಾಂತರಿ ಸೋಂಕು ಹೊಂದಿದ್ದ ವ್ಯಕ್ತಿಯು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಓಮಿಕ್ರಾನ್ ರೂಪಾಂತರಿ ಸೋಂಕು ಹೊಂದಿದ್ದ 52 ವರ್ಷದ ವ್ಯಕ್ತಿಯೊಬ್ಬರು ಕಾರ್ಡಿಯಾಕ್ ಅರೆಸ್ಟ್ನಿಂದ ಸಾವನ್ನಪ್ಪಿದ್ದಾರೆ. ಈ ವ್ಯಕ್ತಿಗೆ ಓಮಿಕ್ರಾನ್ ಹೊರತುಪಡಿಸಿ ಬೇರೆಯ ಅನಾರೋಗ್ಯವೂ ಇದ್ದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಇದನ್ನು ಕೋವಿಡ್ ಒಮಿಕ್ರಾನ್ ಸಾವು ಎಂದು ಘೋಷಣೆ ಮಾಡಿಲ್ಲ ಎನ್ನಲಾಗಿದೆ.
ಕೆಲ ದಿನಗಳ ಹಿಂದಷ್ಟೇ ನೈಜಿರಿಯಾದಿಂದ ಮಹಾರಾಷ್ಟ್ರದ ಪಿಂಪ್ರಿಗೆ ಆಗಮಿಸಿದ್ದ ಸೋಂಕಿತ ವ್ಯಕ್ತಿಯು ದೀರ್ಘಕಾಲದಿಂದ ಮಧುಮೇಹದಿಂದ ಬಳಲುತ್ತಿದ್ದರು. ಕೊರೊನಾ ಸೋಂಕಿಗೆ ಒಳಗಾಗಿದ್ದ ಇವರನ್ನು ಚಿಂಚ್ವಾಡದಲ್ಲಿರುವ ವೈ.ಬಿ ಚವನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಲ್ಲಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ ಪ್ರಯೋಗಾಲಯದ ವರದಿಗಳು ಇವರಿಗೆ ಓಮಿಕ್ರಾನ್ ರೂಪಾಂತರಿಯ ಸೋಂಕು ತಗುಲಿತ್ತು ಎಂದು ಹೇಳಿವೆ.
ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ದೆಹಲಿಯನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಮಹಾರಾಷ್ಟ್ರ 450ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದೆ. ದೆಹಲಿಯಲ್ಲಿ 320 ,ಗುಜರಾತ್ ನಲ್ಲಿ 97 ತೆಲಂಗಾಣ 62 ಆಂಧ್ರ 16, ಹರಿಯಾಣ ಒಡಿಶಾ ತಲಾ 14 ಪ. ಬಂಗಾಳ 11 ಓಮಿಕ್ರಾನ್ ಪ್ರಕರಣಗಳು ವರದಿಯಾಗಿದೆ..
Maharashtra Man Died of Heart Attack, after died tests showed omicron positive
ಇದನ್ನು ಓದಿ : new COVID-19 cases: ದೇಶದಲ್ಲಿ ಮತ್ತೆ 16,764 ಮಂದಿಗೆ ಕೊರೊನಾ
ಇದನ್ನೂ ಓದಿ : Karnataka Corona Rise Again : ಕರ್ನಾಟಕ ಸೇರಿ 5 ರಾಜ್ಯದಲ್ಲಿ ಮತ್ತೆ ಕೊರೋನಾ ಪ್ರಮಾಣ ಏರಿಕೆ : ಆಘಾತಕಾರಿ ಮಾಹಿತಿ ಕೊಟ್ಟ ಕೇಂದ್ರ