Masks mandatory for health workers : ರಾಜ್ಯದಲ್ಲಿ H3N2 ವೈರಸ್ ಆತಂಕ ಹಿನ್ನಲೆ: ಆರೋಗ್ಯ ಸಿಬ್ಬಂದಿಗಳಿಗೆ ಇಂದಿನಿಂದಲೇ ಮಾಸ್ಕ್ ಕಡ್ಡಾಯ

ಬೆಂಗಳೂರು: (Masks mandatory for health workers) ರಾಜ್ಯದಲ್ಲಿ ಕೆಮ್ಮು, ಜ್ವರದಂತಹ ಲಕ್ಷಣಗಳು ಹೆಚ್ಚಾಗಿದ್ದು, ಇದನ್ನು H3N2 ವೈರಸ್‌ ಎಂದು ಹೇಳಲಾಗಿದೆ. ಇದೀಗ ವ್ಯಾಪಕವಾಗಿ ಉಲ್ಬಣಗೊಳ್ಳುತ್ತಿರುವ H3N2 ವೈರಸ್‌ ಆತಂಕದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕೆಲವು ಮಾರ್ಗಸೂಚಿಗಳನ್ನು ತೆಗೆದುಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಇಂದಿನಿಂದಲೇ ಆರೋಗ್ಯ ಸಿಬ್ಬಂದಿಗಳಿಗೆ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ದೇಶದಲ್ಲಿ H3N2 ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ. H3N2 ಸೋಂಕಿನ ಬಗ್ಗೆ ಯಾರೂ ಗಾಬರಿಪಡಬೇಕಿಲ್ಲ. ಎಲ್ಲಾ ಆರೋಗ್ಯ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಂದಿನಿಂದಲೇ ಆರೋಗ್ಯ ಸಿಬ್ಬಂದಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ರಾಜ್ಯದಲ್ಲಿ H3N2 26 ಸೋಂಕು ಪತ್ತೆಯಾಗಿವೆ. ಮಕ್ಕಳು ಹಾಗೂ ಗರ್ಭಿಣಿಯರು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.

ಕೊರೊನಾ ಎನ್ನುವ ಮಹಾಮಾರಿ ಒಂದೊಮ್ಮೆ ಇಡೀ ದೇಶವನ್ನಷ್ಟೇ ಅಲ್ಲದೇ ಇಡೀ ಪ್ರಪಂಚವನ್ನೇ ನಡುಗಿಸಿಬಿಟ್ಟಿತ್ತು. ಈ ಕೊರೊಮಾ ಮಹಾಮಾರಿಯಿಂದ ದೇಶದ ಜನತೆ ತತ್ತರಿಸಿ ಹೋಗಿದ್ದರು. ಕೊರೊನಾ ಹೋಯ್ತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಹೊಸ ರೂಪದಲ್ಲಿ ಕೊರೊನಾ ಸೋಂಕುಗಳು ಮತ್ತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸುತ್ತಿವೆ. ಇಲ್ಲಿಯವರೆಗೆ ಕೊರೊನಾ, ನಂತರ ಒಮಿಕ್ರಾನ್‌, ಈಗ H3N2 ಸೋಂಕು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕೊರೊನಾ ದೇಶದ ಮೇಲೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಇದರಿಂದ ಜನತೆ ಮತ್ತೆ ಮತ್ತೆ ಆತಂಕಕ್ಕೆ ಒಳಗಾಗುವಂತಾಗಿದೆ.

ಸಂಶೋಧನೆಯ ಮೂಲಕ ಉಸಿರಾಟದ ವೈರಸ್‌ಗಳಿಂದ ಉಂಟಾಗುವ ಕಾಯಿಲೆಗಳ ಮೇಲೆ ನಿಕಟ ನಿಗಾ ಇಡಲಾಗುತ್ತಿದೆ. ರೋಗನಿರ್ಣಯ ಪ್ರಯೋಗಾಲಯಗಳ ಜಾಲ ವಿಸ್ತರಿಸಲಾಗುತ್ತಿದೆ ಎಂದು ಐಸಿಎಂಆರ್ ಹೇಳಿದೆ. ಅಂತೆಯೇ ವೈರಸ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ಅನುಸರಿಸಬೇಕಾದ ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ಸಹ ಐಸಿಎಂಆರ್ ಬಿಡುಗಡೆ ಮಾಡಿದೆ.

ಇದನ್ನೂ ಓದಿ : Guidelines for H3N2 infection: H3N2 ಸೋಂಕಿನ ಬಗ್ಗೆ ಆತಂಕ ಬೇಡ: ಆರೋಗ್ಯ ಸಚಿವ ಸುಧಾಕರ್‌

ಇದನ್ನೂ ಓದಿ : H3N2 inFluenza A virus: H3N2 ಎಂದರೇನು? ಈ ಸೋಂಕು ಹೇಗೆ ಹರಡುತ್ತದೆ?: ಇದರ ಬಗ್ಗೆ ತಜ್ಷರು ಹೇಳುವುದೇನು ಗೊತ್ತಾ?

ಇದನ್ನೂ ಓದಿ : COVID-19 ಹುಟ್ಟಿಕೊಂಡಿದ್ದು ಎಲ್ಲಿಂದ? ಇಲ್ಲಿದೆ ಸಾಂಕ್ರಾಮಿಕ ರೋಗದ ಬಗ್ಗೆ ಒಂದು ಸಣ್ಣ ನೋಟ

Mask Mandatory: H3N2 virus concerns in the state Background: Masks are mandatory for health workers from today

Comments are closed.