Ellyse Perry : ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲೂ ಆಡಿದ್ದಾಳೆ ರಾಯಲ್ ಚಾಲೆಂಜರ್ಸ್ ತಂಡದ ಈ ಮೋಹಕ ಚೆಲುವೆ

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ (Women’s Premier League) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಪರ ಆಡುತ್ತಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಎಲೀಸ್ ಪೆರಿ (Ellyse Perry) ಕ್ರಿಕೆಟ್ ಮಾತ್ರವಲ್ಲ, ಫುಟ್ಬಾಲ್ ವಿಶ್ವಕಪ್’ನಲ್ಲೂ ಆಡಿರುವ ವಿಶೇಷ ಪ್ರತಿಭೆ. ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಎಲೀಸ್ ಪೆರಿ, ಭಾನುವಾರ ಮುಂಬೈನ ಬ್ರೆಬೋರ್ನ್ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 19 ಎಸೆತಗಳಲ್ಲಿ 31 ರನ್ ಗಳಿಸಿ ಗಮನ ಸೆಳೆದಿದ್ದರು.

ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ಆಟಗಾರ್ತಿಯಾಗಿರುವ 32 ವರ್ಷದ ಎಲೀಸ್ ಪೆರಿ (Ellyse Perry), ಕೇವಲ 16ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆಸೀಸ್ ಪರ ಪರ ಐಸಿಸಿ ಏಕದಿನ ಹಾಗೂ ಟಿ20 ವಿಶ್ವಕಪ್’ಗಳನ್ನು ಗೆದ್ದಿರುವ ಎಲೀಸ್ ಪೆರಿ, ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮಹತ್ವದ್ದ ಪಾತ್ರ ನಿಭಾಯಿಸಿದ್ದರು.

2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಎಲೀಸ್ ಪೆರಿ, ಐಸಿಸಿ ಕ್ರಿಕೆಟ್ ವಿಶ್ವಕಪ್ ಮತ್ತು ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ಜಗತ್ತಿನ ಏಕೈಕ ಕ್ರೀಡಾತಾರೆ ಎಂಬ ವಿಶೇಷ ದಾಖಲೆ ಹೊಂದಿದ್ದಾರೆ. 2011ರಲ್ಲಿ ಜರ್ಮನಿಯಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಎಲೀಸ್ ಪೆರಿ, ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲ, ಸ್ವೀಡನ್ ವಿರುದ್ಧದ ಪಂದ್ಯದಲ್ಲಿ ಒಂದು ಗೋಲನ್ನೂ ಗಳಿಸಿ ಗಮನ ಸೆಳೆದಿದ್ದರು.

2011-12ನೇ ಸಾಲಿನ W-leagueನಲ್ಲಿ ಕ್ಯಾನ್’ಬೆರಾ ತಂಡದ ಪರ ಆಡಿದ್ದ ಎಲೀಸ್ ಪೆರಿ, ಅದೇ ವರ್ಷ W-leagueನ ಪ್ರತಿಭಾನ್ವಿತ ಯುವ ಆಟಗಾರ್ತಿ ಪ್ರಶಸ್ತಿ ಪಡೆದಿದ್ದರು. ಮಹಿಳಾ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಲ್ರೌಂಡರ್’ಗಳಲ್ಲಿ ಒಬ್ಬರಾಗಿರುವ ಎಲೀಸ್ ಪೆರಿ,ಆಸ್ಟ್ರೇಲಿಯಾ ಪರ ಒಟ್ಟು 10 ಟೆಸ್ಟ್ ಪಂದ್ಯಗಳನ್ನಾಡಿದ್ದು, 75ರ ಸರಾಸರಿಯಲ್ಲಿ 2 ಶತಕಗಳ ಸಹಿತ 752 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, 37 ವಿಕೆಟ್’ಗಳನ್ನೂ ಪಡೆದಿದ್ದಾರೆ.

131 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಪೆರಿ, 49.79ರ ಸರಾಸರಿಯಲ್ಲಿ 2 ಶತಕ ಹಾಗೂ 29 ಅರ್ಧಶತಕಗಳೊಂದಿಗೆ 3,386 ರನ್ ಮತ್ತು 161 ವಿಕೆಟ್ ಪಡೆದಿದ್ದಾರೆ. 139 ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ 7 ಅರ್ಧಶತಕಗಳ ಸಹಿತ 1,535 ರನ್ ಹಾಗೂ 122 ವಿಕೆಟ್’ಗಳನ್ನು ಕಬಳಿಸಿದ್ದಾರೆ.

ಇದನ್ನೂ ಓದಿ : Karnataka Vs USA Cricket match: ಚಿನ್ನಸ್ವಾಮಿಯಲ್ಲಿ ನಾಳೆಯಿಂದ ಕರ್ನಾಟಕ Vs ಅಮೆರಿಕ ಮ್ಯಾಚ್, ಕ್ರಿಕೆಟ್ ಪ್ರಿಯರಿಗೆ ಫ್ರೀ ಎಂಟ್ರಿ

ಇದನ್ನೂ ಓದಿ : Irani Cup : ಕನ್ನಡಿಗ ಮಯಾಂಕ್ ಸಾರಥ್ಯದಲ್ಲಿ ಇರಾನಿ ಕಪ್ ಗೆದ್ದ ರೆಸ್ಟ್ ಆಫ್ ಇಂಡಿಯಾ

Comments are closed.