Omicron Survey : ಬೆಂಗಳೂರಿನಲ್ಲಿ ಸದ್ದಿಲ್ಲದೇ ಏರುತ್ತಿದೆ ಓಮಿಕ್ರಾನ್‌ ಸೋಂಕಿತರ ಸಂಖ್ಯೆ: ಮನೆ ಮನೆ ಸರ್ವೇಗೆ ಆರೋಗ್ಯ ಇಲಾಖೆ ಆದೇಶ

ಬೆಂಗಳೂರು : ರಾಜ್ಯದಲ್ಲಿ ಓಮೈಕ್ರಾನ್ ಭೀತಿ ಎದುರಾಗಿದೆ.‌ ನಿಧಾನಕ್ಕೆ ಓಮೈಕ್ರಾನ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಓಮೈಕ್ರಾನ್ ಹಾಗೂ ಕೊರೋನಾ ಸೋಂಕು ಏರಿಕೆಯಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ನೈಟ್ ಕರ್ಪ್ಯೂ ಸೇರಿದಂತೆ ಕಠಿಣ ನಿಯಮ ಜಾರಿಗೊಳಿಸಿದೆ. ಆದರೆ ಇವೆಲ್ಲದರ ಮಧ್ಯೆ ರಾಜ್ಯ ರಾಜಧಾನಿಯಲ್ಲಿ ಮಾತ್ರ ಸದ್ದಿಲ್ಲದೇ (Omicron Survey) ಕರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು ಸರ್ಕಾರಕ್ಕೆ ಹಾಗೂ ಸ್ಥಳೀಯ ಆಡಳಿತಕ್ಕೆ ಆತಂಕ ಎದುರಾಗಿದೆ.

ಕೊರೋನಾ ಎರಡನೇ ಅಲೆ ತಣ್ಣಗಾದ ಬಳಿಕ ನಗರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಕುಸಿದಿತ್ತು. ಅಲ್ಲಲ್ಲಿ ಒಂದೋ ಎರಡೋ ಪ್ರಕರಣಗಳು ವರದಿಯಾಗಿದ್ದವು. ಆದರೆ ಈಗ ಓಮೈಕ್ರಾನ್ ನಡುವೆ ಕೊರೋನಾ ಕೂಡಾ ಜಾಸ್ತಿಯಾಗಿದ್ದು, ಪ್ರಕರಣಗಳ ಸಂಖ್ಯೆ ಸಾವಿರದ ಗಡಿದಾಟಿದೆ. ರಾಜಧಾನಿಯಲ್ಲಿ ಡಿಸೆಂಬರ್ ಒಂದು ತಿಂಗಳ ಅಂತರದಲ್ಲಿ 7 ಸಾವಿರ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಕಳೆದ ಐದು ವಾರಗಳಲ್ಲಿ ಏಕಾಏಕಿಯಾಗಿ ಕೊರೋನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗಿದ್ದು ಬಿಬಿಎಂಪಿ ಆತಂಕಕ್ಕೆ ಕಾರಣವಾಗಿದೆ.

ಕಳೆದ ಐದು ವಾರದ ಅಂಕಿ ಅಂಶವನ್ನು ಗಮನಿಸೋದಾದರೇ ಬೆಂಗಳೂರಲ್ಲಿ ಒಟ್ಟು 6,709 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಓಮೈಕ್ರಾನ್ ಭೀತಿಯೂ ಇರೋದರಿಂದ ಬಿಬಿಎಂಪಿ ಎಲ್ಲ ಕೊರೋನಾ ಸೋಂಕಿತರ ಸ್ಯಾಂಪಲ್ಸ್ ಅನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಕಳುಹಿಸಿದೆ. ವರದಿಯ ನೀರಿಕ್ಷೆಯಲ್ಲಿದೆ. ಈ ಮಧ್ಯೆ ನಗರದಲ್ಲಿ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿರುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು, ಇಂದಿನಿಂದ ನಗರದಲ್ಲಿ ಮನೆ ಮನೆ ಗೆ ತೆರಳಿ ಆರೋಗ್ಯ ಪರಿಶೀಲನೆ ನಡೆಸಲು ಆದೇಶಿಸಿದೆ.

ನಾಳೆಯಿಂದ ಜನವರಿ 15ರ ವೇಗೆ ILI & SARI ಪ್ರಕರಣಗಳ ಸರ್ವೇಗೆ ಆದೇಶ ಹೊರಡಿಸಿದ್ದು, ರಾಜ್ಯಾದ್ಯಂತ ಎಲ್ಲಾ ಮನೆಗಳಿಗೆ ಭೇಟಿ ಕೊಟ್ಟು ಈ ಬಗ್ಗೆ ಮಾಹಿತಿ ಕಲೆ ಹಾಕಲು ಆರೋಗ್ಯ ಕಾರ್ಯಕರ್ತರಿಗೆ ಸರ್ಕಾರ ಆದೇಶಿಸಿದೆ. ಆರೋಗ್ಯ ಕಾರ್ಯಕರ್ತರಿಂದ ಮನೆ ಮನೆಗ ಭೇಟಿ ಕೊಟ್ಟು ILI & SARI ಪ್ರಕರಣಗಳನ್ನು ಅಂದ್ರೇ ಸಾಮಾನ್ಯವಾದ ಶೀತ,ಜ್ವರದಿಂದ ಬಳಲುತ್ತಿರುವವರ ಸಂಖ್ಯೆಯನ್ನು ಕಲೆಹಾಕಿದೆ. ಅಗತ್ಯ ಬಿದ್ದಲ್ಲಿ ಅಂತಹ ಪ್ರಕರಣಗಳನ್ನು ಕೊರೋನಾ ಹಾಗೂ ಓಮೈಕ್ರಾನ್ ಟೆಸ್ಟ್ ಗೆ ಕಳುಹಿಸಲು ಆರೋಗ್ಯ ಕಾರ್ಯಕರ್ತರಿಗೆ ಸರ್ಕಾರ ಸೂಚಿಸಿದೆ.

ನಿನ್ನೆಯಿಂದ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಯಾಗಿದ್ದು ಈ 10 ದಿನಗಳ ಅವಧಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಕುಸಿಯುವ ನೀರಿಕ್ಷೆ ಇದ್ದು ಇಲ್ಲವಾದಲ್ಲಿ ಸರ್ಕಾರ ಮತ್ತಷ್ಟು ಕಾಲ ನೈಟ್ ಕರ್ಪ್ಯೂ ಮುಂದುವರೆಸುವ ಸಿದ್ಧತೆಯಲ್ಲಿದೆ.

ಇದನ್ನೂ ಓದಿ : Booster Dose For 60+: 60 ವರ್ಷ ಮೇಲ್ಪಟ್ಟವರ ಬೂಸ್ಟರ್​ ಡೋಸ್​ಗೆ ಬೇಕಿಲ್ಲ ವೈದ್ಯರ ಶಿಫಾರಸ್ಸು..!

ಇದನ್ನೂ ಓದಿ : Corona Vaccine to Children : ಮಕ್ಕಳಿಗೂ ಸಿಗಲಿದೆ ಲಸಿಕೆ: ವಾಕ್ಸಿನ್ ನೀಡಲು ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್

( The number of Omicron infected people hike in Bengaluru, Health Department Start House to house Survey )

Comments are closed.