ರಾಮೇಶ್ವರಂ ಕಫೆ ಸ್ಪೋಟ ಪ್ರಕರಣ : ತಾಯಿಯ ಒಂದು ಕರೆ ಮಗನ ಜೀವ ಉಳಿಸಿತು …!

Rameswaram cafe blast case: ಬೆಂಗಳೂರು ರಾಮೇಶ್ವರಂ ಕಫೆಯಲ್ಲಿ ನಡೆದ ಸ್ಪೋಟ ಪ್ರಕರಣ ಇದೀಗ ಸಿಲಿಕಾನ್‌ ಸಿಟಿಯನ್ನೇ ಬೆಚ್ಚಿ ಬೀಳಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Rameswaram cafe blast case: ಬೆಂಗಳೂರು ರಾಮೇಶ್ವರಂ ಕಫೆಯಲ್ಲಿ ನಡೆದ ಸ್ಪೋಟ ಪ್ರಕರಣ ಇದೀಗ ಸಿಲಿಕಾನ್‌ ಸಿಟಿಯನ್ನೇ ಬೆಚ್ಚಿ ಬೀಳಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ನಡುವಲ್ಲೇ ತಾಯಿ ಮಾಡಿದ ಪೋನ್‌ ಕರೆ 24 ವರ್ಷದ ಸಾಫ್ಟ್‌ವೇರ್‌ ಇಂಜಿನಿಯರ್‌ ಪ್ರಾಣ ಉಳಿಸಿದೆ.

Rameswaram cafe blast case A mothers call saved her son life
Image Credit to Original Source

ಮಾರ್ಚ್‌ 1 ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಪೋಟದ ಸಂದರ್ಭದಲ್ಲಿ ಸಾಕಷ್ಟು ಮಂದಿ ನೆರೆದಿದ್ದರು. ಕ್ಷಣಾರ್ಧ ದಲ್ಲೇ ಬಾಂಬ್‌ ಸ್ಪೋಟಗೊಂಡಿದ್ದು, ಅಲ್ಲಿದ್ದವರೆಲ್ಲಾ ಧಿಕ್ಕಾಪಾಲಾಗಿ ಓಡಿದ್ದರು. ಘಟನೆ ನಡೆದ ಸ್ಥಳದಲ್ಲಿ ಸಾಕಷ್ಟು ಮಂದಿ ಐಟಿ ಉದ್ಯೋಗಿಗಳು ಇದ್ದರು. ಈ ಪೈಕಿ ಟೆಕ್ಕಿಯೋರ್ವ ಘಟನೆಯನ್ನು ಬಿಚ್ಚಿಟ್ಟಿದ್ದಾನೆ.

ಬಿಹಾರ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಕುಮಾರ್ ಅಲಂಕೃತ್ (24) ಊಟ ಮಾಡೋದಕ್ಕೆ ಅಂತಾ ರಾಮೇಶ್ವರಂ ಕಫೆಗೆ ಬಂದಿದ್ದ. ನಂತರ ಊಟವನ್ನು ಪಡೆದುಕೊಂಡು ಕ್ಯಾಶ್‌ ಟೇಬಲ್‌ ಬಳಿಯಲ್ಲಿದ್ದ ಸಾಮಾನ್ಯ ಸ್ಥಳದಲ್ಲಿ ಕುಳಿತು ಊಟ ಮಾಡುವುದಕ್ಕೆ ಸಿದ್ದನಾಗಿದ್ದ. ಆದರೆ ಇದೇ ವೇಳೆಯಲ್ಲಿ ಆತನ ತಾಯಿ ಕರೆ ಮಾಡಿದ್ದರು. ಹೀಗಾಗಿ ಊಟವನ್ನು ಹಿಡಿದುಕೊಂಡು ಕಫೆಯ ಹೊರ ಭಾಗಕ್ಕೆ ಬಂದಿದ್ದಾನೆ.

ರಾಮೇಶ್ವರಂ ಕಫೆಯಿಂದ ಹೊರಭಾಗಕ್ಕೆ ಟೆಕ್ಕಿ ಕುಮಾರ್ ಅಲಂಕೃತ್ ರುತ್ತಿದ್ದಂತೆಯೇ ಸ್ಪೋಟ ಸಂಭವಿಸಿದೆ. ಅಲ್ಲಿ ಏನಾಗುತ್ತಿದೆ ಅನ್ನೋದು ಅಲ್ಲಿದ್ದವರ ಗಮನಕ್ಕೆ ಬಾರದಾಗಿತ್ತು. ಎಲ್ಲರೂ ಹೋಟೆಲ್‌ನಿಂದ ಹೊರಗೆ ಓಡಿ ಬಂದಿದ್ದಾರೆ. ಒಂದೊಮ್ಮೆ ತಾನು ಕೂಡ ಕಫೆಯ ಒಳಗೆ ಇದ್ದಿದ್ರೆ ಗಾಯಗೊಳ್ಳುತ್ತಿದೆ. ಬಾಂಬ್‌ ಸ್ಪೋಟಗೊಂಡ ಸ್ಥಳದಲ್ಲೇ ನಾನು ಯಾವಾಗಲೂ ಕುಳಿತುಕೊಳ್ಳುತ್ತಿದೆ. ಅದು ನನ್ನ ನೆಚ್ಚಿನ ಸ್ಥಳವಾಗಿತ್ತು ಎಂದು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ : ಭಾರತಕ್ಕೆ ಪತಿಯ ಜೊತೆ ಪ್ರವಾಸಕ್ಕೆ ಬಂದಿದ್ದ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ನಿತ್ಯವೂ ಕರೆ ಮಾಡುತ್ತಿದ್ದ ತಾಯಿ :

ಪ್ರತಿ ನಿತ್ಯವೂ ತನ್ನ ಬಗ್ಗೆ ವಿಚಾರಿಸಲು ತಾಯಿ ಕರೆ ಮಾಡುತ್ತಿದ್ದರಯ. ಸ್ಪೋಟ ಸಂಭವಿಸಿದ ಸ್ಥಳದಿಂದ ನಾನು ಸುಮಾರು 10-15 ಮೀಟರ್ ದೂರ ಹೋಗಿದ್ದೆ, ಹೀಗಾಗಿ ಸ್ಪೋಟದಿಂದ ನಾನು ಬಜಾಚ್‌ ಆಗಿದ್ದೆ. ಆದರೆ ನಾನು ಆ ಘಟನೆಯ ಶಾಕ್‌ನಿಂದ ಹೊರ ಬರಲು ಸ್ವಲ್ಪ ಸಮಯ ಬೇಕಾಯಿತು ಎಂದು ಅಲಂಕೃತ್ ತಿಳಿಸಿದ್ದಾನೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

Rameswaram cafe blast case A mothers call saved her son life
Image Credit to Original Source

ಕುಮಾರ್ ಅಲಂಕೃತ್ ಕಳೆದ ಒಂದು ವರ್ಷದಿಂದಲೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ನಿತ್ಯವೂ ರಾಮೇಶ್ವರಂ ಕಫೆಗೆ ಹೋಗುವುದು ದಿನಚರಿ ಆಗಿತ್ತು. ಆರಂಭದಲ್ಲಿ ಸಿಲಿಂಡರ್‌ ಸ್ಪೋಟ ಸಂಭವಿಸಿದೆ ಎಂದು ಭಾವಿಸಿಕೊಂಡಿದ್ದೇವು. ಘಟನೆಯಲ್ಲಿ ಗಾಯಗೊಂಡವರ ಸಹಾಯಕ್ಕೆ ಧಾವಿಸಿದ್ದೇವು. ನಾನು ಸುಮಾರು 45 ನಿಮಿಷಗಳ ಕಾಲ ಇದ್ದೆ ಎಂದು ಘಟನೆಯನ್ನು ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ : ಈ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮೀ ಯೋಜನೆಯ 6ನೇ ಕಂತಿನ ಹಣ

ರಾಮೇಶ್ವರಂ ಕಫೆಯಲ್ಲಿ ಸ್ಪೋಟ ಸಂಭವಿಸಿದ ಸಂದರ್ಭದಲ್ಲಿ ಸುಮಾರು 100-150ಕ್ಕೂ ಹೆಚ್ಚು ಮಂದಿ ಇದ್ದರು. ಮಾಧ್ಯಮಗಳ ವರದಿಯನ್ನು ನೋಡಿದ ನಂತರ ಅದು ಸಿಲಿಂಡರ್‌ ಸ್ಪೋಟವಲ್ಲ, ಬದಲಾಗಿ ಬಾಂಬ್‌ ಸ್ಪೋಟ ಅನ್ನೋದು ನನಗೆ ತಿಳಿದಿದೆ ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟ ಸಾಧನದಿಂದ (ಐಇಡಿ) ಸ್ಫೋಟ ಸಂಭವಿಸಿದೆ ಎಂದು ದೃಢಪಡಿಸಿದರು.

ಇದನ್ನೂ ಓದಿ : ಭೂಮಿಯಾಳದಿಂದ ಉಕ್ಕುತ್ತಾಳೆ ಗಂಗಾಮಾತೆ – ನೀರು ಕುಡಿದ್ರೆ ಕಿಡ್ನಿ ಸಮಸ್ಯೆ ಮಾಯ

Rameswaram cafe blast case: A mother’s call saved her son’s life…!

Comments are closed.