Omicron Lockdown : ರಾಜ್ಯದಲ್ಲಿ ಜಾರಿಯಾಗುತ್ತಾ ಲಾಕ್ ಡೌನ್ : ನಾಳೆ ಸಿಎಂ ಸಭೆಯಲ್ಲಿ ನಿರ್ಧಾರವಾಗಲಿದೆ ಭವಿಷ್ಯ

ಬೆಂಗಳೂರು : ರಾಜ್ಯಕ್ಕೆ ಮತ್ತೆ ಕೊರೋನಾ ಹಾಗೂ ಓಮೈಕ್ರಾನ್ ಆತಂಕ (Omicron Lockdown)‌ ಎದುರಾಗಿದೆ. ಈಗಾಗಲೇ 33 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾದ ಬೆನ್ನಲ್ಲೇ ಎರಡು ಸಾವಿರಕ್ಕೂ ಹೆಚ್ಚು ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ನೈಟ್ ಕರ್ಪ್ಯೂ ಹಾಗೂ ಲಾಕ್ ಡೌನ್ ಭೀತಿ ಸೃಷ್ಟಿಯಾಗಿದ್ದು ನಾಳೆ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ರಾಜ್ಯಕ್ಕೆ ವಿದೇಶಿಗರು ಕಂಟಕವಾಗಿ ಪರಿಣಮಿಸಿದ್ದಾರೆ. ಹೈರಿಸ್ಕ್ ದೇಶದಿಂದ ಬಂದವರಿಂದ ಓಮೈಕ್ರಾನ್ ಹಾಗೂ ಕೊರೋನಾ ಸೋಂಕು ಹಬ್ಬುತ್ತಿದೆ. ಹೀಗಾಗಿ ಈಗಾಗಲೇ ಹೈರಿಸ್ಕ್ ದೇಶದಿಂದ ಬಂದವರ ಮೇಲೆ ಕಣ್ಣಿಡಲಾಗಿದ್ದು, ಆರು ಹಂತಗಳಲ್ಲಿ ಪರೀಕ್ಷೆ ನಡೆಸಿ ನೆಗೆಟಿವ್ ಬಂದರಷ್ಟೇ ಹೊರಕ್ಕೆ ಕಳುಹಿಸಲಾಗುತ್ತಿದೆ.

ಈ ಮಧ್ಯೆ ದೇಶದಲ್ಲೂ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಹೀಗಾಗಿ ರಾಜ್ಯಗಳಲ್ಲಿ ಎಚ್ಚರಿಕೆ ವಹಿಸುವಂತೆ ಹಾಗೂ ಕಠಿಣ ನಿಯಮಗಳನ್ನು ಪಾಲಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೂಚನೆ ರವಾನಿಸಿದ್ದಾರೆ. ಡಿಸೆಂಬರ್ ಅಂತ್ಯ ಹಾಗೂ ಹೊಸ ವರ್ಷ ಸಮೀಪಿಸುತ್ತಿರುವುದರಿಂದ ಸೋಂಕು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಸಿಎಂ‌ಬೊಮ್ಮಾಯಿ ನೇತೃತ್ವದಲ್ಲಿ ನಾಳೆ ತಾಂತ್ರಿಕ ಸಮಿತಿ, ಸಚಿವರುಗಳು ಹಾಗೂ ತಜ್ಞರ ಸಭೆ ನಡೆಯಲಿದ್ದು ಸಭೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಂತಿಮ ತೀರ್ಮಾನ‌ಕೈಗೊಳ್ಳಲಿದ್ದಾರೆ.ಮೂಲಗಳ ಮಾಹಿತಿ ಪ್ರಕಾರ ಕೇಂದ್ರದ ಸೂಚನೆಯಂತೆ ರಾಜ್ಯದಲ್ಲೂ ನೈಟ್ ಕರ್ಪ್ಯೂ ಜಾರಿ ಬಹುತೇಕ ಖಚಿತವಾಗಿದೆ. ಅದರ ಜೊತೆಗೆ ಮದುವೆ, ಸಾವು,ಸಮಾರಂಭ ಸೇರಿದಂತೆ ಕಾರ್ಯಕ್ರಮಗಳಿಗೆ ಕಠಿಣ ನಿಯಮ ಜಾರಿಯಾಗಲಿದೆ.

ಶಾಲೆಗಳಲ್ಲೂ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಶಾಲೆಗಳಲ್ಲಿ ಭೌತಿಕ ತರಗತಿ ನಡೆಸಬೇಕೋ ಬೇಡವೋ ಎಂಬುದರ ಬಗ್ಗೆಯೂ ನಾಳೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿ ದ್ದಾರೆ. ಇನ್ನು ಪರಿಸ್ಥಿತಿಯನ್ನು ಆರಂಭದಲ್ಲೇ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿಗೆ ಸರ್ಕಾರ ಒಲವು ತೋರುತ್ತಿದ್ದು, ಲಾಕ್ ಡೌನ್ ಜಾರಿ ಮೂಲಕ ಓಮೈಕ್ರಾನ್ ಹರಡುವುದನ್ನು ತಪ್ಪಿಸುವುದು ಹಾಗೂ ಆ ಮೂಲಕ ಸಾವು ನೋವಿನ ಪ್ರಮಾಣ ಕ್ಕೆ ಕಡಿವಾಣ ಹಾಕಬಹುದು ಎಂಬುದು ಸರ್ಕಾರದ ಚಿಂತನೆ. ಹೀಗಾಗಿ ನಾಳೆ ನಡೆಯಲಿರುವ ಸಿಎಂ ನೇತ್ರತ್ವದ ಸಭೆ ಸಾಕಷ್ಟು ಕುತೂಹಲ‌ ಮೂಡಿಸಿದ್ದು ರಾಜ್ಯದ ಲಾಕ್ ಡೌನ್ ಹಾಗೂ ನೈಟ್ ಕರ್ಪ್ಯೂ ಭವಿಷ್ಯ ತೀರ್ಮಾನವಾಗಲಿದೆ.

ಇದನ್ನೂ ಓದಿ : ಓಮೈಕ್ರಾನ್‌ ಬೆನ್ನಲ್ಲೇ ಮಾರಣಾಂತಿಕ ಡೆಲ್ಮಿಕ್ರಾನ್ ಪತ್ತೆ : ಏನಿದರ ರೋಗ ಲಕ್ಷಣ

ಇದನ್ನೂ ಓದಿ : ಮೋದಿ ಸೂಚನೆ ಇದ್ದರೂ ಡೋಂಟ್ ಕೇರ್ : ನಿದ್ರೆ ಯಲ್ಲಿದೆ ಬಿಬಿಎಂಪಿ ಹೆಲ್ಪ್ ಲೈನ್ ಸೆಂಟರ್

( Omicron Lockdown being implemented in the Karnataka state, will be decided at tomorrow’s CM Basavaraj Bommai meeting)

Comments are closed.