ರಾಜ್ಯದಲ್ಲಿ 31 ಪ್ರತಿಶತ ಐಸಿಯು ಪ್ರಕರಣಗಳಿಗೆ ಓಮಿಕ್ರಾನ್​ ಕಾರಣ : ಬಿಬಿಎಂಪಿ

ಬೆಂಗಳೂರು : ಕೊರೊನಾ ಮೂರನೇ ಅಲೆಯಲ್ಲಿ ಬಹುಪಾಲು ಕೊರೊನಾ ವೈರಸ್​ ರೋಗದ ತೀವ್ರತೆಗೆ ಡೆಲ್ಟಾ ರೂಪಾಂತರಿ ಕೂಡ ಕಾರಣವಾಗಿದೆ. ಆದರೂ ಸದ್ಯ ನಡೆಸಲಾಗುತ್ತಿರುವ ಪ್ರಾಥಮಿಕ ಅಧ್ಯಯನದ ಪ್ರಕಾರ ಓಮಿಕ್ರಾನ್​ ರೂಪಾಂತರಿ (Omicron responsible) ಕೂಡ ತೀವ್ರ ಅನಾರೋಗ್ಯವನ್ನುಂಟು ಮಾಡಲು ಕಾರಣವಾಗಬಹುದು ಎಂದು ನಿರ್ಧರಿಸಲಾಗಿದೆ.

ಭಾನುವಾರದಂದು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯು ಎಷ್ಟು ಮಂದಿ ಓಮಿಕ್ರಾನ್​ ಸೋಂಕಿನಿಂದ ಬಳಲುತ್ತಿರುವವರು ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿದುಕೊಳ್ಳಲು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯುವಿನಲ್ಲಿರುವ ರೋಗಿಗಳಿಗೆ ಎಸ್​ ಜೀನ್​ ಟಾರ್ಗೆಟ್​ ಫೇಲ್ಯೂರ್​​ ಪರೀಕ್ಷೆಯನ್ನು ಮಾಡುವಂತೆ ಹೇಳಿತ್ತು. ಬಿಬಿಎಂಪಿಗೆ ಈವರೆಗೆ ಆಸ್ಪತ್ರೆಗಳಿಂದ ನೀಡಲಾದ ಮಾಹಿತಿಯ ಪ್ರಕಾರ 28 ಮಾದರಿಗಳಲ್ಲಿ 31 ಪ್ರತಿಶತ ಸೋಂಕಿತರು ಓಮಿಕ್ರಾನ್​​ ಹೊಂದಿರುವುದನ್ನು ಕಂಡು ಅಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದಾರೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ. ತ್ರಿಲೋಕ್​ ಚಂದ್ರ ಹೇಳಿದ್ದಾರೆ.

ಓಮಿಕ್ರಾನ್​ ಕೂಡ ಇಷ್ಟೊಂದು ತೀವ್ರತೆಗೆ ಕಾರಣವಾಗುತ್ತದೆಯೇ ಎಂಬುದನ್ನು ಕಂಡು ಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ. ಇವರೆಲ್ಲರಿಗೆ ಲಸಿಕೆಯನ್ನು ನೀಡಲಾಗಿತ್ತೇ ಅಥವಾ ಇಲ್ಲವೇ ಎಂಬುದನ್ನು ನಾವು ತಿಳಿದುಕೊಳ್ಳುತ್ತಿದ್ದೇವೆ ಎಂದು ಡಾ. ಚಂದ್ರ ಹೇಳಿದ್ದಾರೆ. ಕೊರೊನಾ ವೈರಸ್​​ ಸಾಂಕ್ರಾಮಿಕವು ಹಲವಾರು ಜೀನ್​ಗಳನ್ನು ಹೊಂದಿದೆ. M, N, E, ORF1a, Orf1b ಮತ್ತು S, ಇದು ಸ್ಪೈಕ್ ಪ್ರೋಟೀನ್ ಅನ್ನು ಎನ್ಕೋಡ್ ಮಾಡುತ್ತದೆ.RT-PCR ಕಿಟ್‌ಗಳು ವೈರಸ್‌ನ ನ್ಯೂಕ್ಲಿಯಿಕ್ ಆಮ್ಲವನ್ನು ಇನ್ನೂ ಎರಡು ಜೀನ್‌ಗಳು ಅಥವಾ ಸೈಟ್‌ಗಳಲ್ಲಿ ಗುರಿಯಾಗಿಸಲು ಎರಡು ಅಥವಾ ಹೆಚ್ಚಿನ ಪ್ರೈಮರ್‌ಗಳ ಸಂಯೋಜನೆಯನ್ನು ಬಳಸುತ್ತವೆ.

ಓಮಿಕ್ರಾನ್​ ರೂಪಾಂತರಿಯ ಲಕ್ಷಣಗಳು ಸೌಮ್ಯವಾಗಿ ಇರುತ್ತವೆ ಎಂಬ ಭಾವನೆಯಲ್ಲಿ ಪ್ರಾಥಮಿಕ ಸಂಶೋಧನೆಗಳು ಹೆಚ್ಚಾಗಿ ನಡೆಯುತ್ತಿಲ್ಲ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಈಗ ಕಡಿಮೆಯಾಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಎ.ಎಸ್​ ಬಾಲಸುಂದರ್​ ಹೇಳಿದ್ದಾರೆ.

ಇದನ್ನು ಓದಿ : Army Uniform : ಸೇನಾ ಸಮವಸ್ತ್ರ ಧರಿಸಿದ್ದ ಪ್ರಧಾನಿ ಮೋದಿಗೆ ಕೋರ್ಟ್​ನಿಂದ ನೋಟಿಸ್​​

ಇದನ್ನೂ ಓದಿ : ಮತ್ತೆ ಬಣ್ಣ ಹಚ್ಚಲು ಸಿದ್ಧವಾದ್ರು ರಮ್ಯ : ಮಾರ್ಚ್ ನಲ್ಲಿ ಅನೌನ್ಸ್ ಆಗುತ್ತೆ ಸ್ಯಾಂಡಲ್ ವುಡ್ ಕ್ವಿನ್ ಸಿನಿಮಾ

ಇದನ್ನೂ ಓದಿ : ಆತಂಕ ಹೆಚ್ಚಿಸಿರುವ ನಿಯೋಕೋವ್​ ವೈರಸ್​ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ

Omicron responsible for 31% ICU cases in Karnataka

Comments are closed.