ಆಕ್ಸಿಜನ್ ಸಿಗದೆ ರಾಜ್ಯದಲ್ಲಿ ನಾಲ್ವರು ಕೊರೊನಾ ಸೋಂಕಿತರ ಸಾವು

ಕೋಲಾರ :  ರಾಜ್ಯದಲ್ಲಿಯೂ ಆಕ್ಸಿಜನ್ ಅಭಾವ ತಲೆದೋರುತ್ತಿದೆ. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಅಕ್ಸಿಜನ್‌ ಸಿಗದೆ ನಾಲ್ವರು ಕರೋನಾ ಸೊಂಕಿತರು ಸಾವನ್ನಪ್ಪಿದ ಘಟನೆ ನಡೆದಿದೆ.

ಕೋಲಾರದ‌ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 15 ಮಂದಿ ಕೊರೊನಾ ಸೋಂಕಿತರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ನಿನ್ನೆ ರಾತ್ರಿ ಆಕ್ಸಿಜನ್ ಸರಬರಾಜು ಮಾಡುವುದನ್ನು ಆಸ್ಪತ್ರೆಯ ಸಿಬ್ಬಂದಿ ಸ್ಥಗಿತಗೊಳಿಸಿ ದ್ದಾರೆ. ಇದರಿಂದಾಗಿ ನಾಲ್ವರು ಕೊರೊನಾ ಸೋಂಕಿತರು ಸಾವನ್ನಪ್ಪಿ ದ್ದಾರೆ ಎಂದು ಮೃತರ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಜೊತೆಗೆ ಆಕ್ಸಿಜನ್ ಸಮಸ್ಯೆಯೂ ಎದುರಾಗಿದೆ. ಇದೀಗ ರಾಜ್ಯದ ನಾಲ್ವರು ಕೊರೊನಾ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಾವನ್ನ ಪ್ಪಿರೋದು ಆತಂಕ ಮೂಡಿಸಿದೆ.

Comments are closed.