COVID booster doses : ಜು. 15ರಿಂದ 75 ದಿನಗಳ ಕಾಲ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್​ ಬೂಸ್ಟರ್​ ಡೋಸ್​ ಉಚಿತ

ದೆಹಲಿ : COVID booster doses : ಜುಲೈ 15 ರಿಂದ 18 ರಿಂದ 59 ವರ್ಷದೊಳಗಿನ ವ್ಯಕ್ತಿಗಳಿಗೆ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಕೋವಿಡ್-19 ಬೂಸ್ಟರ್​ ಡೋಸ್​ಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಕೇಂದ್ರ ಸಚಿವ ಅನುರಾಗ್​ ಠಾಕೂರ್​ ಘೋಷಣೆ ಮಾಡಿದ್ದಾರೆ. ಕೋವಿಡ್​ 19 ಬೂಸ್ಟರ್​ ಡೋಸ್​ಗಳ ಸ್ವೀಕಾರಕ್ಕೆ ವೇಗವನ್ನು ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರವು ಹೊಂದಿದ್ದು ಜುಲೈ 15ರಿಂದ ಮುಂದಿನ 75 ದಿನಗಳ ಕಾಲ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್​ ಸಂಪೂರ್ಣ ಉಚಿತವಾಗಿ ಸಿಗಲಿದೆ.


ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರವು ಆಜಾದಿ ಕಾ ಅಮೃತ್​​ ಮಹೋತ್ಸವವನ್ನು ಆಚರಿಸುವ ನಿಟ್ಟಿನಲ್ಲಿ 75 ದಿನಗಳ ಕಾಲ ದೇಶದ ಜನತೆಗೆ ಬೂಸ್ಟರ್​ ಡೋಸ್​ಗಳನ್ನು ಉಚಿತವಾಗಿ ನೀಡುವ ನಿರ್ಧಾರಕ್ಕೆ ಬಂದಿದೆ.


ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ. ಆಜಾದಿ ಅಮೃತ್​ ಮಹೋತ್ಸವದ ಸಂದರ್ಭದಲ್ಲಿ ಜುಲೈ 15ರಿಂದ ಮುಂದಿನ 75 ದಿನಗಳವರೆಗೆ 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಉಚಿತವಾಗಿ ಕೋವಿಡ್​ ಬೂಸ್ಟರ್​ ಡೋಸ್​ಗಳನ್ನು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್​ ಠಾಕೂರ್​ ಹೇಳಿದರು.


ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ವಾರ ಕೋವಿಡ್​ 19 ಲಸಿಕೆಯ ಎರಡನೇ ಹಾಗೂ ಬೂಸ್ಟರ್​ ಡೋಸ್​​ಗಳ ನಡುವಿನ ಅಂತರವನ್ನು 18 ವರ್ಷ ಮೇಲ್ಪಟ್ಟವರಿಗೆ 9 ತಿಂಗಳಿನಿಂದ ಆರು ತಿಂಗಳಿಗೆ ಇಳಿಕೆ ಮಾಡಿತ್ತು.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಆಡಳಿತಾಧಿಕಾರಿಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​, ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಜಿಐ) ಶಿಫಾರಸಿನ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.


ವಿಕಸನಗೊಳ್ಳುತ್ತಿರುವ ವೈಜ್ಞಾನಿಕ ಪುರಾವೆಗಳು ಮತ್ತು ಜಾಗತಿಕ ಅಭ್ಯಾಸಗಳ ದೃಷ್ಟಿಯಿಂದ, ಇಮ್ಯೂನಿಟಿ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ನ ‘ಸ್ಥಾಯಿ ತಾಂತ್ರಿಕ ಉಪ ಸಮಿತಿ’ (ಎಸ್‌ಟಿಎಸ್‌ಸಿ) ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕೆ ಡೋಸ್ ನಡುವಿನ ಅವಧಿಯನ್ನು ಅಸ್ತಿತ್ವದಲ್ಲಿರುವ 9 ತಿಂಗಳುಗಳಿಂದ ಅಥವಾ 39 ರಿಂದ ಪರಿಷ್ಕರಿಸಲು ಶಿಫಾರಸು ಮಾಡಿದೆ ಎಂದು ಹೇಳಲಾಗಿತ್ತು

ಇದನ್ನು ಓದಿ : Virat Kohli Mets Childhood Friend : ‘’ಚಿರು ಹೇಗಿದ್ದೀಯಾ ?’’ 18 ವರ್ಷಗಳ ಹಿಂದಿನ ಗೆಳೆಯನನ್ನು ಇಂಗ್ಲೆಂಡ್’ನಲ್ಲಿ ಭೇಟಿ ಮಾಡಿದ ಕೊಹ್ಲಿ, ಖುಷಿ ಹಂಚಿಕೊಂಡ ಸ್ನೇಹಿತ..!

ಇದನ್ನೂ ಓದಿ : Manish Pandey Shreyas Iyer :ಮತ್ತೊಬ್ಬ ಮನೀಶ್ ಪಾಂಡೆ ಆಗಲಿದ್ದಾರಾ ಟೀಮ್ ಇಂಡಿಯಾದ ಈ ಆಟಗಾರ !

People aged between 18 and 59 to get free COVID booster doses from July 15 at govt centres

Comments are closed.