COVID-19 : ಅಮೆರಿಕದಲ್ಲಿರುವ ಸಂಶೋಧಕರು ಕೋವಿಡ್ 19 ಸೋಂಕನ್ನು ಪತ್ತೆ ಹಚ್ಚಲು ಕಡಿಮೆ ವೆಚ್ಚದಲ್ಲಿ ಸ್ಮಾರ್ಟ್‌ಫೋನ್ ಆಧಾರಿತ ಡಯಾಗ್ನೋಸ್ಟಿಕ್ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಪಿಸಿಆರ್ ಟೆಸ್ಟ್ಗಳಷ್ಟೇ ನಿರ್ದಿಷ್ಟವಾಗಿ ಹಾಗೂ ಅತ್ಯಂತ ವೇಗವಾಗಿ ಕೋವಿಡ್ ಸೋಂಕು ಇರುವ ಅಥವಾ ಇಲ್ಲಿದಿರುವ ಬಗ್ಗೆ ಮಾಹಿತಿ ನೀಡುತ್ತದೆ. ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಪಡಿಸಿರುವ ಹಾರ್ಮನಿ ಕೋವಿಡ್ 19 ಟೆಸ್ಟ್ ಕೋವಿಡ್ 19 ವೈರಸ್ನ ಜೆನೆಟಿಕ್ ವಸ್ತುಗಳನ್ನು ಪತ್ತೆ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಸಾಮಾನ್ಯವಾಗಿ ಕೊರೊನಾ ಪರೀಕ್ಷೆಗಳನ್ನು ಮಾಡಲು ಬಳಕೆ ಮಾಡುವ ಆರ್ಟಿ ಪಿಸಿಆರ್ ವಿಧಾನವು ಫಲಿತಾಂಶವನ್ನು ನೀಡಲು ಗಂಟೆಗಟ್ಟಲೇ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ಹಾರ್ಮನಿ ಕಿಟ್ ಕೇವಲ 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಆರ್ಟಿ ಪಿಸಿಆರ್ ಪರೀಕ್ಷೆಯ ಫಲಿತಾಂಶದಷ್ಟೇ ನಿಖರವಾಗಿ ರಿಸಲ್ಟ್ ನೀಡುತ್ತದೆ.
ನಾವು ಕಡಿಮೆ ವೆಚ್ಚದಲ್ಲಿ ಕೋವಿಡ್ ಪರೀಕ್ಷೆಯನ್ನು ಮಾಡಲು ಹಾಗೂ ಎಲ್ಲಿ ಬೇಕಾದರೂ ಬಳಕೆ ಮಾಡಲು ಅನುಕೂಲವಾಗುವಂತೆ ಅತ್ಯಂತ ಸರಳವಾದ ಸಾಧನವನ್ನು ಸಿದ್ಧಪಡಿಸಿದ್ದೇವೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಬ್ಯಾರಿ ಲುಟ್ಜ್ ಹೇಳಿದ್ದಾರೆ.
ಈ ಸಾಧನವು ಕಡಿಮೆ ವೆಚ್ಚವನ್ನು ಹೊಂದಿರುವುದರಿಂದ ಆದಷ್ಟು ಬೇಗ ಇದು ಪ್ರಪಂಚಾದ್ಯಂತ ಬಳಕೆ ಬರುತ್ತದೆ ಎಂದು ನಾವು ನಂಬಿದ್ದೇವೆ ಎಂದು ಜರ್ನಲ್ ಅಡ್ವಾನ್ಸಸ್ನಲ್ಲಿ ಪ್ರಕಟವಾದ ಸಂಶೋಧನಾ ವರದಿಯಲ್ಲಿ ಹಿರಿಯ ಲೇಖಕ ಲುಟ್ಜ್ ಹೇಳಿದ್ದಾರೆ.
ಸಣ್ಣ, ಕಡಿಮೆ-ವೆಚ್ಚದ ಡಿಟೆಕ್ಟರ್‌ನ ಸಹಾಯದಿಂದ ಮೂಗಿನ ಸ್ವ್ಯಾಬ್ ಮಾದರಿಯಲ್ಲಿ SARS-CoV-2 RNA ಜೀನೋಮ್ ಇರುವಿಕೆಯನ್ನು ಪತ್ತೆಹಚ್ಚಲು ಪರೀಕ್ಷೆಯು “PCR-ತರಹದ” ವಿಧಾನವನ್ನು ಬಳಸುತ್ತದೆ.
ಡಿಟೆಕ್ಟರ್ ಅನ್ನು ನಿಯಂತ್ರಿಸಲು ಮತ್ತು ಫಲಿತಾಂಶಗಳನ್ನು ತಿಳಿಯಲು ಸ್ಮಾರ್ಟ್‌ಫೋನ್ ಅನ್ನು ಬಳಸಲಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಡಿಟೆಕ್ಟರ್ ಒಂದು ಸಮಯದಲ್ಲಿ ನಾಲ್ಕು ಮಾದರಿಗಳನ್ನು ನಿಭಾಯಿಸಬಲ್ಲದು ಎಂದು ಸಂಶೋಧಕರು ಹೇಳಿದ್ದಾರೆ.
THIS smartphone based test can accurately detect COVID-19 in 20 minutes
ಇದನ್ನು ಓದಿ : relaxation in Karnataka : ಮೂರನೇ ಅಲೆಯಲ್ಲಿ ಜನರಿಗೆ ಕೊಂಚ ರಿಲ್ಯಾಕ್ಸ್: ಮುಂದಿನ ವಾರದಿಂದ ರದ್ದಾಗಲಿದ್ಯಾ ಟಫ್ ರೂಲ್ಸ್ ?
ಇದನ್ನೂ ಓದಿ : non ISI helmet : ಬೆಂಗಳೂರಿನಲ್ಲಿ ಇನ್ಮೇಲೆ ಈ ರೀತಿಯ ಹೆಲ್ಮೆಟ್ ಧರಿಸಿದರೆ ಬೀಳುತ್ತೆ ದಂಡ