Karnataka record covid-19 cases : ಕರ್ನಾಟಕದಲ್ಲಿಂದು 52 ಮಂದಿ ಸಾವು, 24 ಗಂಟೆಯಲ್ಲಿ 41,400 ಕೋವಿಡ್-19 ಪ್ರಕರಣ ದೃಢ

ಬೆಂಗಳೂರು : ಕರ್ನಾಟಕದಲ್ಲಿ ದಿನ ಕಳೆದಂತೆ ದಾಖಲೆಯ ಪ್ರಮಾಣದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಕರಣಗಳು ದಾಖಲಾಗುತ್ತಿದೆ. ರಾಜ್ಯದಲ್ಲಿಂದು ಬರೋಬ್ಬರಿ 41,400 ಹೊಸ ಕೋವಿಡ್ -19 ಪ್ರಕರಣ (Karnataka record covid-19 cases) ದಾಖಲಾಗಿದ್ದು, ಕೊರೊನಾ ಹೆಮ್ಮಾರಿಯ ಆರ್ಭಟಕ್ಕೆ 52 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಆರ್ಭಟಿಸುತ್ತಿ ದ್ದರೂ ಕೂಡ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 53,093 ಮಂದಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಪಾಸಿಟಿವ್‌ ದರ ಸೋಮವಾರ 32.95% ರಿಂದ 26.70% ಕ್ಕೆ ಇಳಿದಿದೆ. ಇನ್ನು ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಇಂದು ಬೆಂಗಳೂರಲ್ಲಿ 19,105 ಹೊಸ ಕೋವಿಡ್‌ ಪ್ರಕರಣ ದಾಖಲಾಗಿದೆ. ಇನ್ನು ತುಮಕೂರು, ಕೋಲಾರದಲ್ಲಿ ಎರಡು ಸಾವಿರಕ್ಕೂ ಅಧಿಕ ಕೋವಿಡ್‌ ಪ್ರಕರಣ ದಾಖಲಾಗಿದ್ರೆ, ಹಾಸನ, ಧಾರವಾಡ, ಮಂಡ್ಯ, ಉಡುಪಿ, ಉತ್ತರ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ಉಳಿದಂತೆ ದಕ್ಷಿಣ ಕನ್ನಡ, ಬಳ್ಳಾರಿ, ಬೆಳಗಾವಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕಲಬುರಗಿ ಜಿಲ್ಲೆಗಳಲ್ಲಿಂದು ಐನ್ನೂರಕ್ಕೂ ಅಧಿಕ ಹೊಸ ಕೋವಿಡ್‌ ಸೋಂಕಿತ ಪ್ರಕರಣ ದೃಢಪಟ್ಟಿದೆ.

ರಾಜ್ಯದಲ್ಲಿ ಓಮಿಕ್ರಾನ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಸರಿ ಸುಮಾರು 3,50,742 ಸಕ್ರೀಯ ಪ್ರಕರಣ ದಾಖಲಾಗಿದೆ. ಇದುವರೆಗೆ ರಾಜ್ಯದಲ್ಲಿ 38,666 ಮಂದಿ ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದಾರೆ.

ಮುಂದಿನ ವಾರದಿಂದ ರದ್ದಾಗಲಿದ್ಯಾ ಟಫ್ ರೂಲ್ಸ್

ಕಳೆದ ಎರಡು ವರ್ಷಗಳಲ್ಲಿ ಕೊರೋನಾ ಎರಡು ಅಲೆಯಿಂದಾಗಿ ಜನಜೀವನ ಅಕ್ಷರಷಃ ಕುಸಿದು ಹೋಗಿದೆ .‌ಜನರು ವ್ಯಾಪಾರ ವಹಿವಾಟಿನ ಮೇಲೆ ಕೊರೋನಾದಿಂದಾದ ವ್ಯತಿರಿಕ್ತ ಪರಿಣಾಮ ತಡೆಯಲಾರದೇ ಕಂಗಲಾಗಿದ್ದಾರೆ. ಈ ಮಧ್ಯೆ ರಾಜ್ಯಕ್ಕೆ ಕೊರೋನಾ ಮೂರನೇ ಅಲೆ ಕಾಲಿಟ್ಟಿರೋದು ಜನರ ಆತಂಕಕ್ಕೆ‌ಕಾರಣವಾಗಿತ್ತು. ಹೀಗಾಗಿ ಸರ್ಕಾರವೂ ಮೂರನೆ ಅಲೆಯ ಪ್ರಾರಂಭದಲ್ಲೇ ಸಾವು ನೋವಿನ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಕಠಿಣ ರೂಲ್ಸ್ ಜಾರಿಗೆ ತಂದಿದೆ.

ಸದ್ಯಕ್ಕೆ ವೀಕೆಂಡ್ ಕರ್ಪ್ಯೂ ರದ್ದುಗೊಳಿಸಲಾಗಿದ್ದರೂ ನೈಟ್ ಕರ್ಪ್ಯೂ ಜಾರಿಯಲ್ಲಿದೆ. ಈ ನೈಟ್ ಕರ್ಪ್ಯೂನಿಂದ ಬಾರ್ ರೆಸ್ಟೋರೆಂಟ್ ಹಾಗೂ ಹೊಟೇಲ್ ಮಾಲೀಕರು ವ್ಯಾಪಾರ ವಹಿವಾಟು ಕುಸಿಯುವ ಭೀತಿಯಲ್ಲಿದ್ದಾರೆ. ಈ ಮಧ್ಯೆ ಜನರಿಗೆ ಬಿಡುಗಡೆಯಾಗಿರುವ ಕೊರೋನಾದ ಅಂಕಿಅಂಶ ಕೊಂಚ ನೆಮ್ಮದಿ ತಂದಿದೆ. ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆಗಿಂತ ಆಸ್ಪತ್ರೆಗೆ ದಾಖಲಾಗುವವರ ಆಧಾರದ ಮೇಲೆ ಟಫ್ ರೂಲ್ಸ್ ತರಲು ಸರ್ಕಾರ ತೀರ್ಮಾನಿಸಿದೆ.

ಹೀಗಾಗಿ ರಾಜ್ಯದಲ್ಲಿ ಸದ್ಯ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಇರೋದರಿಂದ ಸದ್ಯದಲ್ಲೇ ಜನರಿಗೆ ಟಫ್ ರೂಲ್ಸ್ ಗಳಿಂದ ಮುಕ್ತಿ ಸಿಗೋ ಸಾಧ್ಯತೆ ಇದೆ. ಕೊರೋನಾ ಮೂರನೇ ಅಲೆ ರಾಜ್ಯಕ್ಕೆ ಕಾಲಿಟ್ಟರೂ ಕೇವಲ ಶೀತ,ಜ್ವರ,ಗಂಟಲುನೋವು,ಮೈಕೈನೋವಿಗಷ್ಟೇ ಸೀಮಿತವಾಗುತ್ತಿದೆ. ಅದನ್ನು ಹೊರತುಪಡಿಸಿ ಯಾವುದೇ ಗಂಭೀರ ಪ್ರಮಾಣದ ಪ್ರಭಾವ ಬೀರಿಲ್ಲ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 50 ಸಾವಿರದ ಗಡಿದಾಟಿದರೂ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಕಡಿಮೆ‌ ಇದೆ.

ಇದನ್ನೂ ಓದಿ : ಕೊರೋನಾ ಆತಂಕಕ್ಕೆ ಎದುರಾಯ್ತು ಅಂತ್ಯ: ಆರೋಗ್ಯ ಸಚಿವರು ಕೊಟ್ರು ಸಿಹಿಸುದ್ದಿ

ಇದನ್ನೂ ಓದಿ : COVID-19 : ಈ ಸ್ಮಾರ್ಟ್​ಫೋನ್​ ಆಧಾರಿತ ಟೆಸ್ಟ್​ ಮೂಲಕ 20 ನಿಮಿಷಗಳಲ್ಲಿ ಸಿಗಲಿದೆ ಕೋವಿಡ್​ ವರದಿ

(Karnataka record 41,400 covid-19 cases, 52 death in 24 hours)

Comments are closed.