ಕೊರೊನಾ ವೈರಸ್ ಸೋಂಕಿಗೆ ಲಸಿಕೆ ಸಿದ್ದಪಡಿಸಲಾಗುತ್ತಿದೆ. ವಿಶ್ವದ ಹಲವು ರಾಷ್ಟ್ರಗಳು ಲಸಿಕೆಯನ್ನು ಸಂಶೋಧಿಸಿವೆ. ಇದೀಗ ಕೊರೊನಾ ಲಸಿಕೆ ಪಡೆದುಕೊಂಡವರು ಮದ್ಯಪಾನ ಮಾಡುವಂತಿಲ್ಲ ಅನ್ನೋ ಮಾಹಿತಿ ಹೊರಬಿದ್ದಿದೆ.
ರಷ್ಯಾ ಸಿದ್ದಪಡಿಸಿರುವ ಸ್ಪುಟ್ನಿಕ್ ವಿ ಕೊರೊನಾ ಲಸಿಕೆಯನ್ನು ಪಡೆದುಕೊಂಡ ವ್ಯಕ್ತಿಗಳು ಕನಿಷ್ಟ 2 ತಿಂಗಳ ಕಾಲ ಮದ್ಯಪಾನ ಮಾಡುವಂತಿಲ್ಲ ಎಂದು ಅಧಿಕಾರಿಗಳು ನಾಗರೀಕರಿಗೆ ಈಗಾಗಲೇ ಸಲಹೆಯನ್ನು ನೀಡಿದ್ದಾರೆ.
ಕೊರೊನಾ ವೈರಸ್ ಸೋಂಕಿನ ವಿರುದ್ದ ಪರಿಣಾಮಕಾರಿಯಾಗಿ ಹೋರಾಟ ನಡೆಸಬೇಕೆಂದರೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕೊರೊನಾ ಲಸಿಕೆಯನ್ನು ಪಡೆದುಕೊಂಡವರು ಜನಸಂದಣಿ ಇರುವ ಪ್ರದೇಶಗಳಲ್ಲಿ ನಿಲ್ಲುವಂತಿಲ್ಲ. ಅಲ್ಲದೇ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಕೆಯನ್ನು ಮಾಡಲೇ ಬೇಕು.
ಯಾವುದೇ ಕಾರಣಕ್ಕೂ ಆಲ್ಕೋ ಹಾಲ್ ಬಳಕೆಯನ್ನು ಮಾಡುವಂತಿಲ್ಲ ಎಂದು ರಷ್ಯಾದ ಪ್ರಧಾನಿ ಟಟಿಯಾನಾ ಗೋಲಿಕೋವಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.