ಕೋವಿಡ್ 19 ವಿರುದ್ಧ ಮೂರು ಲಸಿಕೆಗಳನ್ನು ಪಡೆದಿರುವ ಜನರ ದೇಹದಲ್ಲಿ ಉತ್ತಮ ಗುಣಮುಟ್ಟದ ಆ್ಯಂಟಿಬಾಡಿಗಳು ಉತ್ಪಾದನೆಯಾಗುತ್ತದೆ, ಇದು ಓಮಿಕ್ರಾನ್ ರೂಪಾಂತರಿಯನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ (Triple vaccinated can fight Omicron) ಎಂದು ಅಧ್ಯಯನವೊಂದು ಹೇಳಿದೆ. ಮೂರು ಬಾರಿ ಕೊರೊನಾ ಸೋಂಕಿಗೆ ಒಳಗಾದವರಿಗೆ, ಕೊರೊನಾದಿಂದ ಗುಣಮುಖರಾಗಿ ಬಳಿಕ ಎರಡು ಡೋಸ್ ಲಸಿಕೆಯನ್ನು ಪಡೆದವರಿಗೆ, ಕೋವಿಡ್ ಡಬಲ್ ಡೋಸ್ ಲಸಿಕೆ ಪಡೆದು ಬಳಿಕ ಕೊರೊನಾ ಸೋಂಕಿಗೆ ಒಳಗಾದವರಿಗೂ ಇದು ಅನ್ವಯಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ನೇಚರ್ ಮೆಡಿಸಿನ್ ಜರ್ನಲ್ನಲ್ಲಿ ಇತ್ತೀಚಿಗೆ ಪ್ರಕಟವಾದ ಅಧ್ಯಯನದಲ್ಲಿ ಕೊರೊನಾ ಲಸಿಕೆಯನ್ನು ಸ್ವೀಕರಿಸಿದವರು ಹಾಗೂ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಉತ್ಪತ್ತಿಯಾದ ಆ್ಯಂಟಿಬಾಡಿಗಳ ಬಗ್ಗೆ ಸಂಶೋಧನೆಯ ನಡೆಸಲಾಗಿದೆ. 98 ಮಂದಿ ಕೊರೊನಾದಿಂದ ಚೇತರಿಸಿಕೊಂಡವರು ಹಾಗೂ 73 ಮಂದಿ ಕೊರೊನಾ ಸೋಂಕಿ ಹೊಂದಿರದವರಿಗೆ ಎಂಆರ್ಎನ್ಎ ಆಧರಿತ ಫೈಜರ್ ಲಸಿಕೆಯನ್ನು ನೀಡಲಾಯಿತು.
ಜರ್ಮನಿಯ ಟೆಕ್ನಿಕಲ್ ಯೂನಿವರ್ಸಿಟಿ ಆಫ್ ಮ್ಯೂನಿಚ್ ಸಂಶೋಧಕರು ಕೊರೊನಾ ಮೂರು ಡೋಸ್ ಲಸಿಕೆಗಳು ಓಮಿಕ್ರಾನ್ ರೂಪಾಂತರಿಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಅಲ್ಲದೇ ಡಬಲ್ ಡೋಸ್ ಕೊರೊನಾ ಲಸಿಕೆ ಪಡೆದು ಬಳಿಕ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡವರಲ್ಲಿಯೂ ಇದೇ ರೀತಿಯ ಬೆಳವಣಿಗೆಯು ಕಂಡುಬಂದಿದೆ. ಕೊರೊನಾ ಲಸಿಕೆಯ ಮೂಲಕ ಬಲಪಡಿಸಲಾದ ರೋಗ ನಿರೋಧಕ ಶಕ್ತಿಯು ಕೊರೊನಾ ವೈರಸ್ನ ಭವಿಷ್ಯದ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿಯಾದ ರಕ್ಷಣೆಯನ್ನು ನೀಡಬಲ್ಲದು ಎಂದು ಟಿಯುಎಂ ಪ್ರಾಧ್ಯಾಪಕ ಪರ್ಸಿ ನೋಲ್ಲೆ ಹೇಳಿದ್ದಾರೆ.
ಇದನ್ನು ಓದಿ : ಏಷ್ಯಾದ ಅತೀ ಶ್ರೀಮಂತ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಗೌತಮ್ ಅದಾನಿ
ಇದನ್ನೂ ಓದಿ : ಬೈಂದೂರಲ್ಲಿ ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದ 300 ವಿದ್ಯಾರ್ಥಿಗಳು : ಕರಾವಳಿಯಲ್ಲಿ ಮುಂದುವರಿದ ಹಿಜಬ್ – ಕೇಸರಿ ಶಾಲು ವಿವಾದ
Triple vaccinated can fight Omicron variant efficiently: Study