Covid-19 precautionary dose : ಕೋವಿಡ್​ 19 ಬೂಸ್ಟರ್​ ಡೋಸ್​ ನಡುವಿನ ಅಂತರ ಇಳಿಕೆ ಮಾಡಿದ ಕೇಂದ್ರ

ದೆಹಲಿ : Covid-19 precautionary dose: ದೇಶದಲ್ಲಿ ದೈನಂದಿನ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಕ್ರಮೇಣವಾಗಿ ಏರಿಕೆ ಕಂಡು ಬರುತ್ತಿದ್ದು ಕೊರೊನಾ ನಾಲ್ಕನೇ ಅಲೆಯ ಭೀತಿ ಕೂಡ ಕಾಡಲು ಆರಂಭಿಸಿದೆ. ಹೀಗಾಗಿ ಈ ಸಂದರ್ಭದಲ್ಲಿ ಕೊರೊನಾ ಲಸಿಕೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವೈಜ್ಞಾನಿಕ ಅಧ್ಯಯನಗಳ ಪುರಾವೆಗಳನ್ನು ಪರಿಗಣನೆಗೆ ತೆಗೆದುಕೊಂಡ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೊರೊನಾ ಬೂಸ್ಟರ್​ ಡೋಸ್​ಗಳ ನಡುವಿನ ಅಂತರವನ್ನು ಒಂಬತ್ತು ತಿಂಗಳಿನಿಂದ ಆರು ತಿಂಗಳುಗಳಿಗೆ ಇಳಿಕೆ ಮಾಡುವಂತೆ ನಿರ್ದೇಶನ ನೀಡಿದೆ.

ವಿಕಸನಗೊಳ್ಳುತ್ತಿರುವ ವೈಜ್ಞಾನಿಕ ಪುರಾವೆಗಳು ಮತ್ತು ಜಾಗತಿಕ ಅಭ್ಯಾಸಗಳ ದೃಷ್ಟಿಯಿಂದ, “ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಶನ್” (ಎನ್‌ಟಿಜಿಐ) ಯ “ಸ್ಥಾಯಿ ತಾಂತ್ರಿಕ ಉಪ ಸಮಿತಿ” (STSC) 2 ನೇ ಡೋಸ್ ಮತ್ತು ಬೂಸ್ಟರ್​ ಡೋಸ್ ನಡುವಿನ ಅಂತರವನ್ನು ಪ್ರಸ್ತುತ ಜಾರಿಯಲ್ಲಿರುವ 9 ತಿಂಗಳು ಅಥವಾ 39 ವಾರಗಳಿಂದ ಆರು ತಿಂಗಳು ಅಥವಾ 26 ವಾರಗಳಿಗೆ ಪರಿಷ್ಕರಿಸಲು ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಹಾಗೂ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್​ 19 2ನೇ ಡೋಸ್​ ಲಸಿಕೆ ಸ್ವೀಕರಿಸಿದ ಆರು ತಿಂಗಳುಗಳ ಬಳಿಕ ಮೂರನೇ ಡೋಸ್​ ಕೋವಿಡ್​ ಲಸಿಕೆಯನ್ನು ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ಕೊರೊನಾ ಬೂಸ್ಟರ್​ ಡೋಸ್ ವಿತರಣೆಗೆ ಅನುಕೂಲವಾಗುವಂತೆ ಕೋವಿನ್​ ಆ್ಯಪ್​ನಲ್ಲಿ ಅಗತ್ಯವಾದ ಬದಲಾವಣೆಗಳನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗುತ್ತದೆ ಹಾಗೂ ಈ ವಿಚಾರವನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತದೆ. ಬೂಸ್ಟರ್​ ಡೋಸ್​ ಪ್ರಯೋಜನ ಹೆಚ್ಚೆಚ್ಚು ಸಿಗುವಂತೆ ಮಾಡಲು ನಿಮ್ಮ ಬೆಂಬಲ ಹಾಗೂ ನಾಯಕತ್ವವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಭೂಷಣ್​ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : Chandrasekhar Guruji : ಚಂದ್ರಶೇಖರ್​ ಗುರೂಜಿ ಯಾರು : ಇವರ ಹಿನ್ನೆಲೆ ಏನು, ಇಲ್ಲಿದೆ ಮಾಹಿತಿ

ಇದನ್ನೂ ಓದಿ : Karnataka Cricket : ಕೋಚ್‌ಗಳನ್ನು ಬದಲಿಸಲಿದ್ದರೆ ಕರ್ನಾಟಕ ರಣಜಿ ತಂಡಕ್ಕೆ ಉಳಿಗಾಲವಿಲ್ಲ !

Union Health Ministry reduces gap for Covid-19 precautionary dose to 6 months

Comments are closed.