Hijab verdict : ಹಿಜಾಬ್ ತೀರ್ಪಿನಲ್ಲಿ ಹೈಕೋರ್ಟ್ ಪರಿಗಣಿಸಿದ ಅಂಶವೇನು ? ತೀರ್ಪಿನಲ್ಲೇನಿದೆ ? ಇಲ್ಲಿದೆ ವಿವರ

ಬೆಂಗಳೂರು : ಕಳೆದ ಒಂದು ತಿಂಗಳಿನಿಂದ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿದ್ದ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿಗಳನ್ನು ಒಳಗೊಂಡ ತ್ರೀಸದಸ್ಯ ಪೀಠ ಮಹತ್ವದ ತೀರ್ಪು (Hijab verdict) ಪ್ರಕಟಿಸಿದೆ. ಮುಖ್ಯನ್ಯಾಯಮೂರ್ತಿಗಳಾದ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಜೈಬುನ್ನಿಸಾ ಖಾಜಿ ಒಳಗೊಂಡ ತ್ರೀ ಸದಸ್ಯ ಪೀಠ ಈ ಅದೇಶ ಹೊರಡಿಸಿದೆ‌.

ಇನ್ನೂ ದೇಶದ ಗಮನವನ್ನು ಸೆಳೆದಿದ್ದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಬೇಕೆಂಬ ವಾದದ ಅರ್ಜಿ ವಿಚಾರಣೆ ಇಂದು ಒಂದು ತಾರ್ಕಿಕ ಅಂತ್ಯಕಂಡಿದ್ದು, ಹೈಕೋರ್ಟ್ ವಾದ ಪ್ರತಿ ವಾದ ಆಲಿಸಿದ ಬಳಿಕ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಇನ್ನು ಹೈಕೋರ್ಟ್ ನ ತ್ರೀ ಸದಸ್ಯ ಪೀಠ ನೀಡಿದ ಆದೇಶದಲ್ಲೇನಿದೆ ಅನ್ನೋದನ್ನು ನೋಡೋದಾದರೇ, ಸ್ವತಃ ನ್ಯಾಯಮೂರ್ತಿಗಳೇ ಈ ಬಗ್ಗೆ ತೀರ್ಪಿನಲ್ಲಿ ವಿವರಣೆ ನೀಡಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ ನಾವು ಕೆಲವೊಂದು ಪ್ರಶ್ನೆಗಳನ್ನು ಹಾಕಿಕೊಂಡಿದ್ದೇವು. ಅವುಗಳಿಗೆ ಉತ್ತರ ಪಡೆದುಕೊಂಡಿದ್ದೇವೆ ಎಂದ ನ್ಯಾಯಮೂರ್ತಿಗಳು ಹಿಜಾಬ್ ತೀರ್ಪನ್ನು ಓದಿದ್ದಾರೆ.

Hijab ವಿಚಾರಣ ವೇಳೆ ಕೋರ್ಟ್ ಹಾಕಿಕೊಂಡ ಪ್ರಶ್ನೆಗಳು ಇಂತಿವೆ.

  • ಹಿಜಾಬ್ ಧರಿಸೋದು ಇಸ್ಲಾಂ‌ನಂಬಿಕೆಯ ಪ್ರಕಾರ ಅತ್ಯಗತ್ಯ ಆಚರಣೆಯೇ ?
  • ಸರ್ಕಾರದ ಆದೇಶ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವೇ? ಅಥವಾ ಉಲ್ಲಂಘನೆಯೇ ?
  • ಸರ್ಕಾರದ ಆದೇಶ ಆರ್ಟಿಕಲ್ 14/15 ರ ಉಲ್ಲಂಘನೆಯೇ
  • ಉಡುಪಿ ಕಾಲೇಜಿನ ಬಗ್ಗೆ ಶಿಸ್ತು ತನಿಖೆಯ ಅಗತ್ಯವಿದೆಯೇ ?

Hijab ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿರುವುದಾಗಿ ಘೋಷಿಸಿದ ನ್ಯಾಯಪೀಠ ಘೋಷಿಸಿದ ತೀರ್ಪು ಹೀಗಿದೆ.

  • ಹಿಜಾಬ್ ಅತ್ಯಗತ್ಯ ಧಾರ್ಮಿಕ‌ ಆಚರಣೆಯಲ್ಲ
  • ಸರ್ಕಾರದ ಸಮವಸ್ತ್ರ ನೀತಿ ಕಾನೂನು ಬದ್ಧವಾಗಿದೆ. ಕಾಲೇಜುಗಳ ಸಮವಸ್ತ್ರ ನೀತಿ ಪ್ರಶ್ನಿಸುವಂತಿಲ್ಲ.
  • ಸರ್ಕಾರದ ಆದೇಶ ಕಾನೂನು ಬದ್ಧವಾಗಿಯೇ ಇದೆ.
  • ಉಡುಪಿ ಕಾಲೇಜಿನ ವಿರುದ್ದ ಯಾವುದೇ ತನಿಖೆಯ ಅಗತ್ಯವಿಲ್ಲ.

11 ದಿನಗಳ ಕಾಲ ಹಿಜಾಬ್ ಪರ ವಕೀಲರು, ಶಾಲಾ ಆಡಳಿತ ಮಂಡಳಿ ಪರ ವಕೀಲರು, ಸರ್ಕಾರದ ಪರ ವಕೀಲರು ನಡೆಸಿದ ವಾದ ಹಾಗೂ ಪ್ರತಿ ವಾದ ವನ್ನು ಆಲಿಸಿದ ನ್ಯಾಯಾಲಯ, ವಿಚಾರಣೆ ಮುಗಿದು 18 ದಿನಗಳ ಬಳಿಕ ಈ ತೀರ್ಪನ್ನು ಪ್ರಕಟಿಸಿದೆ. ಅರ್ಜಿದಾರ ಪರ ದೇವದತ್ ಕಾಮತ್, ಮಹಮ್ಮದ್ ತಾಹೀರ್, ರವಿ ವರ್ಮ ಕುಮಾರ್, ಎ ಎಂಧರ್, ವಿನೋದ್ ಕುಲಕರ್ಣಿ ಸೇರಿದಂತೆ 8 ಕ್ಕೂ ಹೆಚ್ಚು ವಕೀಲರು ವಾದ ಮಂಡಿಸಿದ್ದರೇ, ಸರ್ಕಾರದ ಪರ ‌ಎಜಿ ಪ್ರಭುಲಿಂಗ್ ನಾವದಗಿ, ಶಾಲಾ ಆಡಳಿತ ಮಂಡಳಿ ಪರ ಸಜ್ಜನ್ ಪೂವಯ್ಯ ವಾದ ಮಂಡಿಸಿದ್ದರು.

ಇದನ್ನೂ ಓದಿ : Hijab Judgement ವಿರುದ್ಧ ಸುಪ್ರೀಂ ಮೊರೆ ಹೋಗಲು ಚಿಂತನೆ: ವಕ್ಪ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಾದಿ

ಇದನ್ನೂ ಓದಿ : ಹೈಕೋರ್ಟ್‌ ಐತಿಹಾಸಿಕ ತೀರ್ಪು, ಶಾಲೆಗಳಲ್ಲಿ ಹಿಜಾಬ್‌ ನಿಷೇಧ : ಹಿಜಾಬ್‌ ಇಸ್ಲಾಂನ ಅತ್ಯಗತ್ಯ ಭಾಗ ಅಲ್ಲ

( What is the High Court consideration of the Hijab verdict ? What’s in the judgment ? Here’s the detail )

Comments are closed.