ಐಸಿಸಿ ಟಿ 20 ವಿಶ್ವಕಪ್​ ಟೂರ್ನಿಯಿಂದ ಆಸ್ಟ್ರೇಲಿಯಾ ಹೊರಕ್ಕೆ : ಅಭಿಮಾನಿಗಳಿಗೆ ಆಘಾತ

ಐಸಿಸಿ ಟಿಂ 20 ವಿಶ್ವಕಪ್​​ ಪಂದ್ಯಾವಳಿಯ ಜಿಂಬಾಬ್ವೆ ಮತ್ತು ಐರ್ಲೆಂಡ್​ ನಡುವಿನ ಪಂದ್ಯವು ಮಳೆಯಿಂದ ರದ್ದಾಗಿದ್ದು ಆಸ್ಟ್ರೇಲಿಯಾ ತಂಡವು ಇದರ ಬೆಲೆ ತೆರುವಂತಾಗಿದೆ. ಪಂದ್ಯ ರದ್ದಾದ ಕಾರಣ ಎರಡೂ ತಂಡಗಳಿಗೆ ಒಂದೊಂದು ಅಂಕ ದೊರಕಿದೆ. ಇದರಿಂದಾಗಿ ಸೂಪರ್​ 8 ಹಂತಕ್ಕೆ ಜಿಂಬಾಬ್ವೆ ನೇರ ಅರ್ಹತೆ ಪಡೆದುಕೊಂಡಿದ್ದು ಅಚ್ಚರಿಯ ಬೆಳವಣಿಗೆಯಲ್ಲಿ ಆಸ್ಟ್ರೇಲಿಯಾ ಈ ಟೂರ್ನಿಯಿಂದ ಹೊರಬಿದ್ದಿದೆ.
ಶ್ರೀಲಂಕಾ ಈಗಾಗಲೇ ಸೂಪರ್​ 8 ಹಂತ ತಲುಪಿದೆ. ಆಸ್ಟ್ರೇಲಿಯಾ ಬಳಿ ಕೇವಲ 2 ಅಂಕ ಮಾತ್ರವಿತ್ತು . ಆದರೆ ಜಿಂಬಾಬ್ವೆ 5 ಅಂಕಗಳನ್ನು ಗಳಿಸಲು ಶಕ್ತರಾದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡವು ವಿಶ್ವಕಪ್​ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಇತ್ತ 2 ಅಂಕ ಹೊಂದಿರುವ ಐರ್ಲೆಂಡ್ ಕೂಡ ವಿಶ್ವಕಪ್​ ಟೂರ್ನಿಯಿಂದ ಹೊರಗುಳಿದಿದೆ.

ಇದನ್ನೂ ಓದಿ: IND vs PAK T20 World Cup results: ಸೂರ್ಯನ ಶಾಖಕ್ಕೆ ಪಾಕಿಸ್ತಾನ ಭಸ್ಮ: ಭಾರತಕ್ಕೆ 61 ರನ್‌ಗಳ ಭರ್ಜರಿ ಜಯ

ಕ್ರಿಕೆಟ್​ ಇತಿಹಾಸದಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಆಸ್ಟ್ರೇಲಿಯಾ ಟೂರ್ನಿಯಿಂದಲೇ ಹೊರಬಿದ್ದಿರುವುದು ಅಭಿಮಾನಿಗಳಿಗೂ ಆಘಾತ ತಂದಿದೆ. ಇತ್ತ ಜಿಂಬಾಬ್ವೆ ಮುಂದಿನ ಹಂತದಲ್ಲಿ ಟೀಂ ಇಂಡಿಯಾವನ್ನು ಎದುರಿಸಲಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories