Indian Cricket team : ಭಾರತ vs ಇಂಗ್ಲೆಂಡ್‌ ಕೊನೆಯ ಪಂದ್ಯ : ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಮೇಲೆ ಬಿಸಿಸಿಐ ಕಣ್ಣು

ಭಾರತೀಯ ಕ್ರಿಕೆಟ್ ತಂಡ ( Indian Cricket team)  ಐರ್ಲೆಂಡ್‌ ( Irland) ವಿರುದ್ದ ಸರಣಿ ಸೋಲು, ಇಂಗ್ಲೆಂಡ್‌ ವಿರುದ್ದದ ಹೀನಾಯ ಪ್ರದರ್ಶನದ ಬೆನ್ನಲ್ಲೇ ಬಿಸಿಸಿಐ ಭಾರತೀಯ ಕ್ರಿಕೆಟ್‌ ಆಟಗಾರರ ಮೇಲೆ ಕಣ್ಣಿಟ್ಟಿದೆ. ಆಟಗಾರರ ಪ್ರದರ್ಶನದ ವಿಮರ್ಶೆಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮುಂದಾಗಿದೆ.

India vs England : ಭಾರತ ಕ್ರಿಕೆಟ್‌ ತಂಡ ( Indian cricket Team)  ಇಂದು ಇಂಗ್ಲೆಂಡ್‌ ವಿರುದ್ದ ಕೊನೆಯ ಟಿ20 ಪಂದ್ಯವನ್ನು ಆಡಲಿದೆ. ಕೊನೆಯ ಪಂದ್ಯದಲ್ಲಿ ಆಡುವ ಬಳಗದಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ. ಇಂದಿನ ಪಂದ್ಯವನ್ನೂ ಸೋತರೆ ಭಾರತ ಸತತ ಕ್ಲೀನ್‌ ಸ್ವೀಪ್‌ ಸೋಲಿನ ಸುಳಿಗೆ ಸಿಲುಕಲಿದೆ. ಭಾರತದ ಆಟಗಾರರ ಪ್ರದರ್ಶನದಿಂದ ಬೇಸತ್ತ ಬಿಸಿಸಿಐ ಇದೀಗ ಪ್ರದರ್ಶನದ ವಿಮರ್ಶೆಗೆ ಮುಂದಾಗಿದೆ.

ಟಿ20 ವಿಶ್ವಕಪ್‌ ಗೆದ್ದು ಬೀಗಿರುವ ಭಾರತ ತಂಡದಲ್ಲಿ ಸದ್ಯ ಯಾವುದೂ ಸರಿಯಿಲ್ಲ ಅನ್ನೋದು ಖಚಿತವಾಗಿದೆ. ಸೂರ್ಯಕುಮಾರ್‌ ಯಾದವ್‌ ( Suryakumar yadav) ಅವರಿಂದ ನಾಯಕತ್ವವನ್ನು ಶ್ರೇಯಸ್‌ ಅಯ್ಯರ್‌ ( Shreyas Iyer)  ಹಸ್ತಾಂತರಿಸಿದ ಬಳಿಕ ತಂಡ ಪತನದ ಹಾದಿಯನ್ನೇ ಹಿಡಿದಿದೆ. ಐರ್ಲೆಂಡ್‌ ವಿರುದ್ದದ ಎರಡು ಪಂದ್ಯಗಳ ಸರಣಿಯನ್ನು ಕೈ ಚೆಲ್ಲಿದ ಬಳಿಕ, ಇದೀಗ ಇಂಗ್ಲೆಂಡ್‌ ( England) ವಿರುದ್ದದ ಐದು ಪಂದ್ಯದ ಸರಣಿಯಲ್ಲಿಯೂ ಸತತ ಮೂರು ಸೋಲು ಕಂಡಿದೆ.

ಭಾರತ ಕ್ರಿಕೆಟ್‌ ತಂಡ ಇಷ್ಟೊಂದು ವೈಫಲ್ಯ ಅನುಭವಿಸೋದಕ್ಕೆ ಕಾರಣವೇನು ಅನ್ನೋ ಕುರಿತು ವಿಮರ್ಶೆ ನಡೆಸೋದಕ್ಕೆ ಬಿಸಿಸಿಐ ಇದೀಗ ಮುಂದಾಗಿದೆ. ಇಂಗ್ಲೆಂಡ್‌ ನಲ್ಲಿ ಏನೆಲ್ಲಾ ತಪ್ಪಾಗಿದೆ ಎಂದು ಚರ್ಚಿಸುವ ಸಲುವಾಗಿಯೇ ತಂಡದ ಪ್ರಮುಖ ಆಟಗಾರರ ಜೊತೆಗೆ ಪರಿಶೀಲನಾ ಸಭೆ ನಡೆಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ತಿಳಿಸಿದ್ದಾರೆ. ಈ ಕುರಿತು ಕ್ರಿಕ್‌ ಬುಜ್‌ ವರದಿಯನ್ನು ಮಾಡಿದೆ.

India vs England BCCI to conduct a review of Indian cricket team performance Kannada Newsಇಂಡಿಯನ್‌ ಪ್ರೀಮಿಯರ್‌ ಲೀಗ್‌ ( Indian Premier Leauge) ಬೆನ್ನಲ್ಲೇ ಭಾರತ ಕ್ರಿಕೆಟ್‌ ತಂಡ ಐರ್ಲೆಂಡ್‌ ಸರಣಿಯನ್ನು ಕಳೆದುಕೊಂಡಿತ್ತು. ನಂತರ ಇಂಗ್ಲೆಂಡ್‌ ವಿರುದ್ದದ ಮೂರನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಉಳಿದ ಪಂದ್ಯವನ್ನು ಭಾರತ ಗೆಲ್ಲುತ್ತೆ ಅನ್ನೋ ವಿಶ್ವಾಸವೇ ಇಲ್ಲದಂತಾಗಿದೆ.

ಸ್ವದೇಶಿ ನೆಲದಲ್ಲಿ ಆರ್ಭಟಿಸುತ್ತಿದ್ದ ಆಟಗಾರರು ಇದೀಗ ಇಂಗ್ಲೆಂಡ್‌ ವಿರುದ್ದದ ಪಂದ್ಯದಲ್ಲಿ ಸಂಪೂರ್ಣವಾಗಿ ಮಂಕಾಗಿದ್ದಾರೆ. ಅದ್ರಲ್ಲೂ ಐಪಿಎಲ್‌ನಲ್ಲಿ ಆರೆಂಜ್‌ ಕ್ಯಾಪ್‌ ಹೋಲ್ಡರ್‌ ಆಗಿದ್ದ ವೈಭವ್‌ ಸೂರ್ಯವಂಶಿ ಇಂಗ್ಲೆಂಡ್‌ ವಿರುದ್ದ ಕಣಕ್ಕೆ ಇಳಿದಿದ್ದರೂ ಕೂಡ ಒಂದೇ ಒಂದು ಪಂದ್ಯದಲ್ಲಿ ಮಿಂಚೋದಕ್ಕೆ ಸಾಧ್ಯವಾಗಿಲ್ಲ. ಪ್ಲಾಟ್‌ ಪಿಚ್‌ಗಳಲ್ಲಿ ರನ್‌ ಹೊಳೆಯನ್ನೇ ಹರಿಸಿರುವ ವೈಭವ್‌ ಸೂರ್ಯವಂಶಿ ( Vaibhav Suryavamshi) ಇಂಗ್ಲೆಂಡ್‌ ನೆಲದಲ್ಲಿ ನೆಲಕಚ್ಚಿ ಆಡುವಲ್ಲಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದಾರೆ.

ಭಾರತಕ್ಕೆ ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದ ಸೂರ್ಯಕುಮಾರ್‌ ಯಾದವ್‌, ಐಪಿಎಲ್‌ನಲ್ಲಿ ಫಾರ್ಮ್‌ನಲ್ಲಿ ಇರಲಿಲ್ಲ ಅನ್ನೋ ಕಾರಣಕ್ಕೆ ಅವರನ್ನು ಕೈಬಿಟ್ಟು ಶ್ರೇಯಸ್‌ ಅಯ್ಯರ್‌ ಗೆ ನಾಯಕತ್ವ ನೀಡಲಾಗಿತ್ತು. ಆದರೆ ಶ್ರೇಯಸ್‌ ನಾಯಕತ್ವ ಭಾರತ ಒಂದೇ ಒಂದು ಪಂದ್ಯದಲ್ಲಿಯೂ ಗೆಲುವು ಕಂಡಿಲ್ಲ. ಅದ್ರಲ್ಲೂ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಆಡಿರುವ ಭಾರತ ತಂಡ ಐದು ಪಂದ್ಯದಲ್ಲಿ ಸೋಲನ್ನು ಕಂಡಿದ್ದು, ಒಂದು ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ.

ಟಿ20 ಸರಣಿಯ ಬೆನ್ನಲ್ಲೇ ಏಕದಿನ ಸರಣಿ ನಡೆಯಲಿದ್ದು, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ಕೆಎಲ್‌ ರಾಹುಲ್‌ ಪಂದ್ಯವನ್ನಾಡಲಿದ್ದಾರೆ. ಏಕದಿನ ಸರಣಿ ಮುಕ್ತಾಯದ ಬಳಿಕ ಬಿಸಿಸಿಐ ಪರಿಶೀಲನಾ ಸಭೆಯನ್ನು ನಡೆಸಲಿದೆ ಎಂದು ಸೈಕಿಯಾ ತಿಳಿಸಿದ್ದಾರೆ.

India vs England BCCI to conduct a review of Indian cricket team performance Kannada News

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »