ಆರ್‌ಸಿಬಿಗೆ ಕೆಎಲ್ ರಾಹುಲ್ ಫಿಕ್ಸ್ : ಕನ್ನಡಿಗನ ಖರೀದಿಗೆ ಮುಂದಾಯ್ತು ಆರ್‌ಸಿಬಿ

KL Rahul back to RCB : ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ದಿನಗಣನೆ ಆರಂಭ ಆಗುತ್ತಿದ್ದಂತೆಯೇ ಸಾಕಷ್ಟ ಬದಲಾವಣೆಗಳು ನಡೆಯುತ್ತಿದೆ. ಈಗಾಗಲೇ ಐಪಿಎಲ್ ತಂಡಗಳು ಆಟಗಾರರ ವಿನಿಮಯ ಕಾರ್ಯವನ್ನು ಆರಂಭಿಸಿವೆ. ಈ ನಡುವಲ್ಲೇ ಕನ್ನಡಿಗ ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರ್ಪಡೆ ಆಗುವುದು ಫಿಕ್ಸ್ ಆಗಿದೆ.
ಹೌದು, ಐಪಿಎಲ್ 2026ರಲ್ಲಿ ಕನ್ನಡಿಗರ ನೆಚ್ಚಿನ ತಂಡವಾಗಿರುವ ಆರ್‌ಸಿಬಿ ಹೊಸ ಮ್ಯಾನೇಜ್ಮೆಂಟ್‌ನೊಂದಿಗೆ ಕಣಕ್ಕೆ ಇಳಿಯುವುದು ಖಚಿತ. ಈಗಾಗಲೇ ಆರ್‌ಸಿಬಿ ಮಾರಾಟಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ನಡೆಯುತ್ತಿದೆ
ಈ ನಡುವಲ್ಲೇ ಕನ್ನಡಿಗ ಕೆಎಲ್ ರಾಹುಲ್ ಮುಂದಿನ ಐಪಿಎಲ್ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಾಣಿಸಿಕೊಳ್ಳುವುದು ಬಹುತೇಕ ಫಿಕ್ಸ್ ಆಗಿದೆ.
ನಿಖಿಲ್ ಕಾಮತ್ Vs ರಂಜನ್ ಪೈ : ಆರ್‌ಸಿಬಿ ಯಾರ ಸೊತ್ತು ?
ಆರ್‌ಸಿಬಿ ತಂಡವನ್ನು ಖರೀದಿ ಮಾಡಲು ಈಗಾಗಲೇ ಕನ್ನಡಗ ಉದ್ಯಮಿಗಳು ಮುಂದೆ ಬಂದಿದ್ದಾರೆ. ಇಬ್ಬರು ಕನ್ನಡಿಗರು ಸೇರಿದಂತೆ ಒಟ್ಟು ಐದು ಕಂಪೆನಿಗಳು ಆರ್‌ಸಿಬಿ ಖರೀದಿಗೆ ಪೈಪೋಟಿ ನಡೆಸುತ್ತಿವೆ. ಆದರೆ ಜೆರೋಧಾದ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಹಾಗೂ ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಗುಂಪಿನ ಅಧ್ಯಕ್ಷರ ರಂಜನ್ ಪೈ ಕೂಡ ಆರ್‌ಸಿಬಿ ಖರೀದಿಗೆ ಪೈಪೋಟಿ ನೀಡ್ತಾ ಇದ್ದಾರೆ.
ಈ ಬಾರಿ ರಂಜನ್ ಪೈ ಅವರೇ ಆರ್‌ಸಿಬಿ ಮಾಲೀಕರಾಗುವ ಸಾಧ್ಯತೆಯಿದೆ. ಇಬ್ಬರಲ್ಲಿ ಯಾರೇ ತಂಡವನ್ನು ಖರೀದಿಸಿದ್ರೂ ಕೂಡ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದೆ. ಅದ್ರಲ್ಲೂ ಕನ್ನಡಿಗ ರಾಹುಲ್ ಮತ್ತೆ ತವರು ತಂಡಕ್ಕೆ ಮರಳುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ : ಕನ್ನಡಿಗ ಉದ್ಯಮಿ ಪಾಲಾಗುತ್ತಾ ಆರ್‌ಸಿಬಿ ? ರಾಯಲ್ ಚಾಲೆಂಜರ್ಸ್ ಇನ್ಮುಂದೆ ಕನ್ನಡಿಗರ ಸೊತ್ತು
ಕಳೆದ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಹ ಪಾಲುದಾರಿಕೆಯನ್ನು ಹೊಂದಿರುವ ಜೆಎಸ್‌ಡಬ್ಲ್ಯೂ ಕೂಡ ಆರ್‌ಸಿಬಿ ಖರೀದಿಗೆ ಮುಂದಾಗಿದೆ. ಒಂದೊಮ್ಮೆ ಜೆಎಸ್‌ಡಬ್ಲ್ಯೂ ತಂಡವನ್ನು ಖರೀಸಿದ್ರೆ ಡೆಲ್ಲಿ ತಂಡದಿಂದ ರಾಹುಲ್ ಆರ್‌ಸಿಬಿಗೆ ಶಿಫ್ಟ್ ಆಗುವ ಸಾಧ್ಯತೆಯಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ತೊರೆಯುತ್ತಾರಾ ಕೆಎಲ್ ರಾಹುಲ್
ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಾ ಇದ್ದರೂ ಕೂಡ ಪದೇ ಪದೇ ಚಿನ್ನಸ್ವಾಮಿ ಕ್ರೀಡಾಂಗಣವನ್ನೇ ತಮ್ಮ ತವರು ತಂಡ ಎಂದು ಹೇಳುತ್ತಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ರಾಹುಲ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ರೂ ಅಚ್ಚರಿಯಿಲ್ಲ.
ಕೆ.ಎಲ್. ರಾಹುಲ್ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಅವರನ್ನು ಬಿಡುಗಡೆ ಮಾಡಿದ್ರೆ ಮಾತ್ರವೇ ಅವರು ಇನ್ನೊಂದು ತಂಡವನ್ನು ಸೇರುವುದಕ್ಕೆ ಅವಕಾಶವಿದೆ.
ಒಂದೊಮ್ಮೆ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೊತೆಗೆ ಆಟಗಾರರನ್ನು ಪರಸ್ಪರ ವರ್ಗಾಯಿಸಿಕೊಳ್ಳಲು ಅವಕಾಶವಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯಾವ ಆಟಗಾರನನ್ನು ನೀಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಆರ್‌ಸಿಬಿ ಬಿಲಿಯನೇರ್ ಕನ್ನಡಿಗರ ಪ್ರಬಲ ಪೈಪೋಟಿ .! ಯಾರ ಪಾಲಾಗುತ್ತೆ ಬೆಂಗಳೂರು ಟೀಂ ?
ಅಷ್ಟೇ ಅಲ್ಲಾ ಸ್ವತಃ ಕೆಎಲ್ ರಾಹುಲ್ ಕೂಡ ನವೆಂಬರ್ 15 ಒಳಗಾಗಿ ಡೆಲ್ಲಿ ತಂಡಕ್ಕೆ ರಾಜೀನಾಮೆ ನೀಡಿ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ಕೂಡ ಅವಕಾಶವಿದೆ.
ಕರ್ನಾಟಕ ಮೂಲದ ಉದ್ಯಮಿ ರಂಜನ್ ಪೈ ಅವರು ಆರ್‌ಸಿಬಿಯನ್ನು ಖರೀದಿಸುವುದು ಖಚಿತವಾಗಿದೆ. ಒಂದೊಮ್ಮೆ ಈ ಡೀಲ್ ಕುದುರಿದ್ದೇ ಆದ್ರೆ ಕರಾವಳಿ ಮೂಲದ ಆಟಗಾರ ಕೆ.ಎಲ್. ರಾಹುಲ್ 2026 ರ ಋತುವಿನಲ್ಲಿ ಬೆಂಗಳೂರು ತಂಡವನ್ನು ಪ್ರತಿನಿಧಿಸುವುದು ಖಚಿತ.
KL Rahul back to RCB : Karnataka billionaires interest to buy franchise



