ವಿರಾಟ್ ಕಿಂಗ್.. ಪಡಿಕ್ಕಲ್ ಸಿಂಹ ! IPL ಉದ್ಘಾಟನಾ ಪಂದ್ಯದಲ್ಲೇ ದಾಖಲೆಗಳ ಪುಡಿಪುಡಿ ಮಾಡಿದ RCB
ಟಾಪ್ ಆರ್ಡರ್ ಬ್ಯಾಟರ್‌ಗಳ ನಿರ್ಗಮನದ ನಂತರ ಕ್ರೀಸ್‌ಗೆ ಬಂದ ರಜತ್ ಪಟಿದಾರ್, ಕೇವಲ 12 ಎಸೆತಗಳಲ್ಲಿ 31 ರನ್ ಸಿಡಿಸಿ ಪಂದ್ಯವನ್ನು ಫಿನಿಶ್ ಮಾಡಿದರು. ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆಗೈದ ಪಟಿದಾರ್, ನಾಯಕನ ಜವಾಬ್ದಾರಿಯುತ ಆಟ ಪ್ರದರ್ಶಿಸಿ ಅಭಿಮಾನಿಗಳನ್ನು ರಂಜಿಸಿದರು.

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಹದಿನೆಂಟನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಕ್ಷರಶಃ ಅಬ್ಬರಿಸಿದೆ. ಸನ್ ರೈಸರ್ಸ್ ಹೈದರಾಬಾದ್ (SRH) ನೀಡಿದ್ದ ಬೃಹತ್ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿದ ಕೊಹ್ಲಿ ಪಡೆ, 6 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಈ ಗೆಲುವಿನೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ 200+ ರನ್ ಚೇಸ್ ಮಾಡಿದ ಹೊಸ ದಾಖಲೆಯನ್ನು ಆರ್‌ಸಿಬಿ ತನ್ನ ಹೆಸರಿಗೆ ಬರೆದುಕೊಂಡಿದೆ.
ಕೊಹ್ಲಿ-ಪಡಿಕ್ಕಲ್ ಸ್ಪೋಟಕ ಆರಂಭ
ಸನ್ ರೈಸರ್ಸ್ ಹೈದರಾಬಾದ್ ತಂಡ ನೀಡಿದ್ದ 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿಗೆ ಆರಂಭಿಕ ಜೋಡಿ ಭದ್ರ ಬುನಾದಿ ಹಾಕಿಕೊಟ್ಟಿತು. ಕಿಂಗ್ ವಿರಾಟ್ ಕೊಹ್ಲಿ ಕೇವಲ 38 ಎಸೆತಗಳಲ್ಲಿ 69 ರನ್ ಚಚ್ಚಿದರೆ, ಯುವ ಬ್ಯಾಟರ್ ದೇವದತ್ತ ಪಡಿಕ್ಕಲ್ ಕೇವಲ 26 ಎಸೆತಗಳಲ್ಲಿ 61 ರನ್ ಬಾರಿಸುವ ಮೂಲಕ ಹೈದರಾಬಾದ್ ಬೌಲರ್‌ಗಳನ್ನು ಕಂಗೆಡಿಸಿದರು. ಇವರಿಬ್ಬರ ಅರ್ಧಶತಕದ ನೆರವಿನಿಂದ ತಂಡ ಕೇವಲ 15.4 ಓವರ್‌ಗಳಲ್ಲಿ ಗುರಿ ತಲುಪಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿತು.
ಇದನ್ನೂ ಓದಿ : IPL 2026 jiohotstar : ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್ ! ಜಿಯೋ-ಹಾಟ್‌ಸ್ಟಾರ್‌ನಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್ ವೀಕ್ಷಿಸುವುದು ಹೇಗೆ ?
ರಜತ್ ಪಟಿದಾರ್ ಅಬ್ಬರ; ನಾಯಕನ ಆಟ
ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಆರ್‌ಸಿಬಿ ಬ್ಯಾಟರ್‌ಗಳು ಎದುರಾಳಿ ತಂಡಕ್ಕೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ.
ಕಾಲ್ತುಳಿತದಲ್ಲಿ ಮಡಿದವರಿಗೆ ಸ್ಮರಣೆ: ಭಾವುಕ ಕ್ಷಣ
ಪಂದ್ಯದ ಆರಂಭಕ್ಕೂ ಮುನ್ನ ಕ್ರೀಡಾಂಗಣದಲ್ಲಿ ಒಂದು ಭಾವುಕ ಕ್ಷಣ ಕಂಡುಬಂದಿತು. ಕಳೆದ ಬಾರಿಯ ಐಪಿಎಲ್ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ಅಭಿಮಾನಿಗಳ ನೆನಪಿಗಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಆಟಗಾರರು ಮತ್ತು ಅಭಿಮಾನಿಗಳು ಮೃತರ ಆತ್ಮಕ್ಕೆ ಶಾಂತಿ ಕೋರಿ ಗೌರವ ಸಲ್ಲಿಸಿದರು.
ಇದನ್ನೂ ಓದಿ : IPL 2026: ದಿನೇಶ್ ಕಾರ್ತಿಕ್ ಟೀಂ ಇಂಡಿಯಾದ ಮುಂದಿನ ಹೆಡ್ ಕೋಚ್ ?
ಐಪಿಎಲ್‌ನಲ್ಲಿ ಹೊಸ ಮೈಲಿಗಲ್ಲು
ಆರ್‌ಸಿಬಿ ಹಾಗೂ ಸನ್‌ರೈಸಸ್ ಹೈದ್ರಾಬಾದ್ ಪಂದ್ಯ ಐಪಿಎಲ್ ಇತಿಹಾಸದ ಪುಟಗಳಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಬರೋಬ್ಬರಿ 200ಕ್ಕೂ ಅಧಿಕ ರನ್‌ಗಳನ್ನು ಕೇವಲ 16 ಓವರ್‌ಗಳ ಒಳಗೆ ಚೇಸ್ ಮಾಡುವುದು ಯಾವುದೇ ತಂಡಕ್ಕೆ ಸವಾಲಿನ ಕೆಲಸ. ಆದರೆ, ಇಂದಿನ ಪಂದ್ಯದಲ್ಲಿ ಬೆಂಗಳೂರು ತಂಡದ ಬ್ಯಾಟಿಂಗ್ ವೈಖರಿ ನೋಡಿದರೆ ಈ ಬಾರಿ ‘ಈ ಸಲ ಕಪ್ ನಮ್ದೇ’ ಅನ್ನೋ ಅಭಿಮಾನಿಗಳ ಆಶಯಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.
rcb wins ipl opening match against srh record chase kohli padikkal-heroics



