ದಾಖಲೆಗಳ ಸರದಾರ ಸಂಜು ಸ್ಯಾಮ್ಸನ್! ಕೇರಳದ ಕುವರನ ಕ್ರಿಕೆಟ್ ರೋಚಕ ಪಯಣ

T20 World Cup | India vs New Zealand | Sanju Samson biography: ಸಂಜು ಸ್ಯಾಮ್ಸನ್ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ (2024) 3 ಟಿ20 ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಇವರದು. ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಅವರ ಶತಕಗಳು ಭಾರತದ ಸರಣಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಫೈನಲ್‌ನಲ್ಲಿ (T20 World Cup Final) ಸಂಜು ಸ್ಯಾಮ್ಸನ್ (Sanju Samson Biography) ಬ್ಯಾಟಿಂಗ್ ವಿಶ್ವರೂಪ ಪ್ರದರ್ಶಿಸುತ್ತಿದ್ದಾರೆ. ಕೇವಲ 44 ಎಸೆತಗಳಲ್ಲಿ 88 ರನ್ ಗಳಿಸಿರುವ ಸಂಜು, ತಮ್ಮ ಚೊಚ್ಚಲ ವಿಶ್ವಕಪ್ ಫೈನಲ್ ಶತಕದತ್ತ (India vs New Zealand) ದಾಪುಗಾಲು ಹಾಕುತ್ತಿದ್ದಾರೆ.

ರಚಿನ್ ರವೀಂದ್ರ ಅವರ ಓವರ್‌ನಲ್ಲಿ ಸತತ 3 ಸಿಕ್ಸರ್ ಸಿಡಿಸುವ ಮೂಲಕ ಮೈದಾನದಲ್ಲಿ ಸಂಚಲನ ಮೂಡಿಸಿದರು. ಇವರ ಸ್ಫೋಟಕ ಆಟದ ನೆರವಿನಿಂದ ಭಾರತ ತಂಡ 200 ರನ್‌ಗಳ ಗಡಿ ತಲುಪಲು ಸಜ್ಜಾಗಿದೆ. ವಿಶೇಷವೆಂದರೆ, ಸಂಜು ಅವರ ಕೊನೆಯ 38 ರನ್‌ಗಳು ಕೇವಲ 11 ಎಸೆತಗಳಲ್ಲಿ ಬಂದಿವೆ.

ಕೇರಳದ ಕುವರನ ಕ್ರಿಕೆಟ್ ಪಯಣ

ಸಂಜು ಸ್ಯಾಮ್ಸನ್ ನವೆಂಬರ್ 11, 1994 ರಂದು ಕೇರಳದ ತಿರುವನಂತಪುರಂನಲ್ಲಿ ಜನಿಸಿದರು. ಇವರ ತಂದೆ ವಿಶ್ವನಾಥ್ ಅವರು ದೆಹಲಿ ಪೊಲೀಸ್ ಅಧಿಕಾರಿಯಾಗಿದ್ದರು. ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಅವರು ಕೆಲಸಕ್ಕೆ ನಿವೃತ್ತಿ ಘೋಷಿಸಿ ದೆಹಲಿಯಿಂದ ಕೇರಳಕ್ಕೆ ಮರಳಿದ್ದು ಸಂಜು ಬದುಕಿನ ದೊಡ್ಡ ತಿರುವು.

ಹಿಂದುತ್ವವೇ ಜಾತ್ಯತೀತತೆ; ಭಟ್ಕಳದಲ್ಲಿ ಘರ್ಜಿಸಿದ ಹಿಂದೂ ಹುಲಿ ಅನಂತ್‌ ಕುಮಾರ್‌ ಹೆಗಡೆ

ಕೇವಲ 17ನೇ ವಯಸ್ಸಿನಲ್ಲಿ ಕೇರಳ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಂಜು, 2014ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಇವರು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದು, ಮೈದಾನದಲ್ಲಿನ ಅವರ ಶಾಂತ ಸ್ವಭಾವಕ್ಕೆ ಇದೂ ಒಂದು ಕಾರಣ ಎನ್ನಲಾಗುತ್ತದೆ.

ದಾಖಲೆಗಳ ಸರದಾರ ಸ್ಯಾಮ್ಸನ್

ಸಂಜು ಸ್ಯಾಮ್ಸನ್ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ (2024) 3 ಟಿ20 ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಇವರದು. ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಅವರ ಶತಕಗಳು ಭಾರತದ ಸರಣಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.

ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಯಶಸ್ವಿಯಾಗಿರುವ ಸಂಜು, ಅಲ್ಲಿಯೂ 3 ಶತಕ ಸೇರಿದಂತೆ 4,000ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಸದ್ಯ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಆಗಿ ಮಿಂಚುತ್ತಿರುವ ಇವರು, 2024ರ ಟಿ20 ವಿಶ್ವಕಪ್ ಮತ್ತು 2025ರ ಏಷ್ಯಾ ಕಪ್ ವಿಜೇತ ತಂಡದ ಭಾಗವಾಗಿದ್ದರು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories