India squad : ವೈಭವ್ ಸೂರ್ಯವಂಶಿ ಎಂಟ್ರಿ, ಸಂಜು ಸ್ಯಾಮ್ಸನ್‌ಗೆ ಬಿಗ್ ಶಾಕ್: ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ
ಇಂಗ್ಲೆಂಡ್ ವಿರುದ್ದದ ತಂಡದಲ್ಲಿ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಹರ್ಷೀತ್ ರಾಣಾ, ರವಿ ಬಿಷ್ಣೋಯ್, ಪ್ರಸಿದ್ದ ಕೃಷ್ಣ, ಅರ್ಷದೀಪ್ ಸಿಂಗ್ ಮಾತ್ರವಲ್ಲದೇ ಸಂಜು ಸ್ಯಾಮ್ಸನ್ ಅವರಿಗೆ ಕೋಕ್ ನೀಡಲಾಗಿದೆ.

zimbabwe t20 series : ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದು, ಸಂಜು ಸ್ಯಾಮ್ಸನ್ (sanju samson) ಅವರ ಬದಲು ವೈಭವ್ ಸೂರ್ಯವಂಶಿ (vaibhav suryavanshi) ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಉಳಿದಂತೆ ಮಯಾಂಕ್ ಅಗರ್‌ವಾಲ್, ರಿಂಕು ಸಿಂಗ್ ತಂಡಕ್ಕೆ ವಾಪಾಸ್ ಆಗಿದ್ರೆ, ಶ್ರೇಯಸ್ ಅಯ್ಯರ್ ನಾಯಕನಾಗಿ ಮುಂದುವರಿಯಲಿದ್ದಾರೆ.
ಇದೇ ಜುಲೈ 23 ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಮೊದಲ ಟಿ20 ಪಂದ್ಯವನ್ನು ಆಡಲಿದೆ. ಬಿಸಿಸಿಐ 15 ಸದಸ್ಯರ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಇಂಗ್ಲೆಂಡ್ ವಿರುದ್ದದ ತಂಡದಲ್ಲಿ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಹರ್ಷೀತ್ ರಾಣಾ, ರವಿ ಬಿಷ್ಣೋಯ್, ಪ್ರಸಿದ್ದ ಕೃಷ್ಣ, ಅರ್ಷದೀಪ್ ಸಿಂಗ್ ಮಾತ್ರವಲ್ಲದೇ ಸಂಜು ಸ್ಯಾಮ್ಸನ್ ಅವರಿಗೆ ಕೋಕ್ ನೀಡಲಾಗಿದೆ.
ಸಂಜು ಸ್ಯಾಮ್ಸನ್ ಬದಲು ಯುವ ಆಟಗಾರ ವೈಭವ್ ಸೂರ್ಯವಂಶಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಾತ್ರವಲ್ಲ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಇನ್ನು ಅಶೋಕ್ ಶರ್ಮಾ ಹಾಗೂ ಯಶ್ ಠಾಕೂರ್ ಅವರಿಗೆ ಭಾರತ ತಂಡಕ್ಕೆ ಚೊಚ್ಚಲ ಕರೆ ಬಂದಿದೆ. ಇನ್ನು ಐಪಿಎಲ್ ಹಿರೋ ರಿಂಕು ಸಿಂಗ್, ಪ್ರಬ್ಸಿಮ್ರನ್ ಸಿಂಗ್, ಮಯಾಂಕ್ ಅಗರ್‌ವಾಲ್ ಕೂಡ ತಂಡವನ್ನು ಸೇರಿಕೊಂಡಿದ್ದಾರೆ.
ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ಎ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಮುಂಬರುವ ಜಿಂಬಾಬ್ವೆ ಸರಣಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಐಪಿಎಲ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಆಟಗಾರರು ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಅಪ್ಘಾನಿಸ್ತಾನ ವಿರುದ್ದ ಸರಣಿ ಸೋಲು ಜೊತೆ ಇಂಗ್ಲೆಂಡ್ ತಂಡದ ವಿರುದ್ದ ಎರಡು ಸೋಲುಗಳಿಂದ ಕಂಗೆಟ್ಟಿರುವ ಭಾರತ ತಂಡ ಹಲವು ಆಟಗಾರರಿಗೆ ಕೋಕ್ ಕೊಟ್ಟಿದೆ. ಶ್ರೇಯಸ್ ಅಯ್ಯರ್ ನಾಯಕನಾಗಿ ಮುಂದುವರಿದ್ರೆ, ತಿಲಕ್ ವರ್ಮಾ ಉಪನಾಯಕನಾಗಿದ್ದಾರೆ. ಇಂಗ್ಲೆಂಡ್ ಸರಣಿಯಲ್ಲಿರುವ ಅಭಿಷೇಕ್ ಶರ್ಮಾ, ಇಶಾನ್ ಕಿಶಾನ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ಭಾರತ ತಂಡ: ಶ್ರೇಯಸ್ ಅಯ್ಯರ್ (ಸಿ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ವಿಸಿ), ಇಶಾನ್ ಕಿಶನ್ (ವಿಕೆ), ಶಿವಂ ದುಬೆ, ಸೂರ್ಯಾಂಶ್ ಶೆಡ್ಜ್, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಾಯಾಂಕ್ ಯಾದವ್, ಪ್ರಭ್ಸಿಮ್ರಾನ್ ಸಿಂಗ್ (ವಿಕೆ)
ಜಿಂಬಾಬ್ವೆಯ ಭಾರತ ಪ್ರವಾಸ, 2026
23-07-2026 1ನೇ ಟಿ20ಐ ಹರಾರೆ
25-07-2026 2ನೇ ಟಿ20ಐ ಹರಾರೆ
26-07-2026 3ನೇ ಟಿ20ಐ ಹರಾರೆ
vaibhav suryavanshi in sanju samson dropped india squad zimbabwe t20 series

