ಬೆಂಗಳೂರು : ಕಲ್ಕೆರೆ ಕೆರೆಯಲ್ಲಿ ನಾಪತ್ತೆಯಾಗಿರುವ ಟೆಕ್ಕಿಗಾಗಿ ಎರಡನೇ ದಿನವೂ ಶೋಧಕಾರ್ಯ ಮುಂದುವರಿದಿದೆ. ಎಸ್ ಡಿಆರ್ ಎಫ್ ಹಾಗೂ ಅಗ್ನಿಶಾಮಕದಳ ಸಿಬ್ಬಂದಿಗಳು ಜಂಟಿಯಾಗಿ ಕೆರೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದ್ರೆ ಇನ್ನೂ ಸಚಿನ್ ಪತ್ತೆಯಾಗಿಲ್ಲ.

ಕಲ್ಕೆರೆಯಲ್ಲಿ ತಡರಾತ್ರಿ ವಿಹಾರಕ್ಕೆ ತೆರಳಿದ್ದ ಉಲ್ಲಾಸ್ ಹಾಗೂ ಸಚ್ಚಿನ್ ಎಂಬವರು ಆಯತಪ್ಪಿ ತೆಪ್ಪ ಮಗುಚಿ ಕೆರೆಯಲ್ಲಿ ಬಿದ್ದಿದ್ರು, ಈ ವೇಳೆ ಉಲ್ಲಾಸ್ ಈಜಿ ದಡ ಸೇರಿದ್ದಾರೆ. ಆದರೆ ಟೆಕ್ಕಿ ಸಚಿನ್ ಕರೆಯ ಮಧ್ಯದಿಂದ ಕಣ್ಮರೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಎಸ್ ಡಿಆರ್ ಎಫ್ ಹಾಗು ಅಗ್ನಿಶಾಮಕದಳ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.

ಆದರೆ ಸಂಜೆವರೆಗೂ ನಡೆದ ಕಾರ್ಯಾಚರಣೆಯಲ್ಲಿ ಮುಳುಗಡೆಯಾಗಿದ್ದ ತೆಪ್ಪ ಪತ್ತೆಯಾಗಿತ್ತು, ಆದರೆ ಸಚಿನ್ ಮಾತ್ರ ಪತ್ತೆಯಾಗಿರಲಿಲ್ಲ. ಕತ್ತಲಾಗುತ್ತಿದ್ದಂತೆಯೇ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಆದ್ರೀಗ ಎರಡನೇ ದಿನವಾದ ಇಂದು ಬೆಳಗ್ಗೆ 6 ಗಂಟೆಯಿಂದಲೇ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.