ಮಂಗಳೂರು : ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ವ್ಯಕ್ತಿಯ ಚಿತ್ರ ಸಿಸಿಟಿವಿಯನ್ನು ಸೆರೆಯಾಗಿದೆ.

ಏರ್ ಪೋರ್ಟ್ ನ ಟಿಕೆಟ್ ಕೌಂಟರ್ ಬಳಿಯಲ್ಲಿ ಲ್ಯಾಪ್ ಟಾಪ್ ಬ್ಯಾಗ್ ಇರಿಸಿ ವಾಪಾಸಾಗುತ್ತಿರುವುದು. ವಿಮಾನ ನಿಲ್ದಾಣಕ್ಕೆ ಬರಲು ಬಳಸಿದ ಆಟೋದ ದೃಶ್ಯ ಕೂಡ ವಿಮಾನ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ.

ಶಂಕಿತ ವ್ಯಕ್ತಿ ಮಂಗಳೂರಿನಿಂದ ವಿಮಾನ ನಿಲ್ದಾಣದ ವರೆಗೂ ಬಸ್ ನಲ್ಲಿಯೇ ಬಂದಿದ್ದ, ಅಲ್ಲದೇ ಅದೇ ಆಟೋದಲ್ಲಿಯೇ ವಾಪಾಸಾಗಿ ನಂತರ ಬಸ್ ನಲ್ಲಿಯೇ ಪ್ರಯಾಣಿಸಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಶಂಕಿತನ ಪೋಟೋವನ್ನು ಪೊಲೀಸರು ರಾಜ್ಯದ ಎಲ್ಲಾ ಠಾಣೆಗಳಿಗೂ ರವಾನಿಸಿದ್ದಾರೆ. ಅಲ್ಲದೇ ಮಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಂಡಿದ್ದಾರೆ.
ಆರೋಪಿ ವಿಮಾನ ನಿಲ್ದಾಣದಲ್ಲಿ ಅಲೆದಾಡಿರೋ ಸಿಸಿ ಕ್ಯಾಮರಾ ವಿಡಿಯೋ :