ಅಭಿನಯ ಚಕ್ರವರ್ತಿಗೆ ದಾದಾ ಸಾಹೇಬ್ ಪಾಲ್ಕೆ ಅಂತರಾಷ್ಟ್ರೀಯ ಪುರಸ್ಕಾರ

0

ಸಿನಿಮಾ ಕ್ಷೇತ್ರದಲ್ಲಿ ಅದ್ವಿತೀಯಾ ಸಾಧನೆ ಮಾಡಿದ ಸಾಧಕರಿಗೆ ಕೊಡ ಮಾಡುವ ದಾದಾ ಸಾಹೇಬ್ ಪಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಈ ಬಾರಿ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ, ಬಾದ್ ಷಾ ಕಿಚ್ಚ ಸುದೀಪ್ ಅವರಿಗೆ ಒಲಿದಿದೆ. ದಬಾಂಗ್-3 ಸಿನಿಮಾದ ನಟನೆಗೆ ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್- 2020 ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಫೆಬ್ರವರಿ 20ರಂದು ಮುಂಬೈನ ಖಾಸಗಿ ಹೋಟೆಲ್ ನಲ್ಲಿ ದಾದಾ ಸಾಹೇಬ್ ಪಾಲ್ಕೆ ಮತ್ತು ಮಹಾತ್ಮ ಗಾಂಧಿ ಅವರ 150 ನೇ ವರ್ಷದ ಜನ್ಮದಿನೋತ್ಸವ ಅಂಗವಾಗಿ ಸಮಾರಂಭ ನಡೆಯುತ್ತಿದ್ದು, ಈ ಸಮಾರಂಭದಲ್ಲಿ ಅಭಿನಯ ಚಕ್ರವರ್ತಿಗೆ ದಾದಾ ಸಾಹೇಬ್ ಪಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ನ್ನು ಮಹಾರಾಷ್ಟ್ರದ ರಾಜ್ಯಪಾಲರು ನೀಡಲಿದ್ದಾರೆ.

ಕಿಚ್ಚ ಸುದೀಪ್ ಸದ್ಯ ಸದ್ಯ ಬಿಗ್ ಬಾಸ್ ಮತ್ತು ಕೋಟಿಗೊಬ್ಬ-3 ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ, ಇದೀಗ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿರೋದು ಕಿಚ್ಚನ ಅಭಿಮಾನಿಗಳಿಗೆ ಮತ್ತು ಕನ್ನಡ ಜನತೆಗೆ ಖುಷಿ ನೀಡಿದೆ. ಕಿಚ್ಚ ಸುದೀಪ್ ಅವರು ಇತ್ತೀಚಿಗೆ ಸೈರಾ, ದಬಾಂಗ್ -3 ಸೇರಿದಂತೆ ಹಲವು ಪರಭಾಷಾ ಸಿನಿಮಾಗಳಲ್ಲಿ ಮಿಂಚು ಹರಿಸಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ್ದರು. ದಾದಾ ಸಾಹೇಬ್ ಪಾಲ್ಕೆ ಅಂತರಾಷ್ಟ್ರೀಯ ಪುರಸ್ಕಾರ ಬಂದಿರೋದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ.

ದಬಾಂಗ್ -3 ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ

ದಾದಾ ಸಾಹೇಬ್ ಪಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ನ ಜ್ಯೂರಿ ಅಧ್ಯಕ್ಷ ಹಾಗೂ ದಾದಾ ಸಾಹೇಬ್ ಪಾಲ್ಕೆ ಅವರ ಮೊಮ್ಮಗ ಚಂದ್ರಶೇಖರ್ ಪುಸಲ್ಕರ್ ಈ ಪ್ರಶಸ್ತಿ ಬಗ್ಗೆ ಖಚಿತಪಡಿಸಿದ್ದಾರೆ.

Leave A Reply

Your email address will not be published.