ಮಹಿಳೆಯೊಂದಿಗೆ ಅಣ್ಣಪರಾರಿ: 16 ವರ್ಷ ತಂಗಿಯ ಮೇಲೆ 8 ಮಂದಿಯಿಂದ ಅತ್ಯಾಚಾರ

ಲಕ್ನೋ : ವ್ಯಕ್ತಿಯೋರ್ವ ಮಹಿಳೆಯೊಂದಿಗೆ ಪರಾರಿಯಾಗಿದ್ದಾನೆ. ಇತ್ತ ಅಣ್ಣನ ಮೇಲಿನ ದ್ವೇಷಕ್ಕಾಗಿ 16 ವರ್ಷದ ತಂಗಿಯ ಮೇಲೆ 8 ಮಂದಿ ಕಾಮುಕರು ಪೋಷಕರ ಎದುರಲ್ಲೇ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇಶದ ಅಮ್ರೋಹ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಜೂನ್ 27ರಂದು ಪ್ರೇಮಿಗಳಿಬ್ಬರು ಓಡಿ ಹೋಗಿ ಮದುವೆಯಾಗಿದ್ದರು. ಆದರೆ ಮನೆಯವರಿಗೆ ಈ ಮದುವೆ ಇಷ್ಟವಿರಲಿಲ್ಲ. ಅಲ್ಲದೇ ಹುಡುಗಿಯ ಕಡೆಯವರು ಹುಡುಗ ಬಲವಂತವಾಗಿ ಮದುವೆ ಯಾಗಿದ್ದಾನೆ ಅಂತಾ ಆರೋಪಿಸಿದ್ದಾರೆ. ಪ್ರೇಮಿಗಳನ್ನು ಹುಡುಕುವ ಸಲುವಾಗಿ ಹುಡಗನ ಅಪ್ಪ, ಅಮ್ಮ ಹಾಗೂ ತಂಗಿಯನ್ನು ತಮ್ಮ ಮನೆಗೆ ಕರೆಯಿಸಿಕೊಂಡಿದ್ದಾರೆ. ಈ ವೇಳೆಯಲ್ಲಿ ಮಹಿಳೆಯೊಂದಿಗೆ ಓಡಿ ಹೋಗಿರುವ ಯುವಕನ ತಂಗಿಯ ಮೇಲೆ ಮಹಿಳೆಯ ತಂದೆ, ಸಹೋದರರು ಹಾಗೂ ಚಿಕ್ಕಪ್ಪಂದಿರು ಸೇರಿದಂತೆ ಒಟ್ಟು 8 ಮಂದಿ ಸೇರಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಪೋಷಕರ ಎದುರಲ್ಲೇ ಕಾಮುಕರು ದುಷ್ಕೃತ್ಯವೆಸಗಿದ್ರೂ ಕೂಡ ತಂದೆ ತಾಯಿಗೆ ಏನೂ ಮಾಡೋದಕ್ಕೂ ಸಾಧ್ಯವಾಗಿಲ್ಲ. ಕೂಡಲೇ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ರೂ ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳಲಿಲ್ಲ. ಬಾಲಕಿ ತನ್ನ ಮೇಲೆ ನಡೆದಿದ್ದ ಭಯಾನಕ ಚಿತ್ರಹಿಂಸೆಯನ್ನು ವಿವರಿಸಿದಾಗ ಅಂತಿಮವಾಗಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್‍ಗಳ ಅಡಿ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Comments are closed.