ಗುಂಡು ತಗುಲಿ 7 ವರ್ಷದ ಬಾಲಕ ಸಾವು: ಇಬ್ಬರು ಪೊಲೀಸರ ವಶಕ್ಕೆ

ರಾಮನಗರ: (7 year boy died) ಆಕಸ್ಮಿಕವಾಗಿ ಗುಂಡು ತಗುಲಿ 7 ವರ್ಷದ ಬಾಲಕನೋರ್ವ ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ. ಶಮಾ(7 ವರ್ಷ) ಗುಂಡು ತಗುಲಿ ಸಾವನ್ನಪ್ಪಿರುವ ಬಾಲಕ.

ಇಬ್ಬರು ಸಹೋದರರು ಬಂದೂಕು ಹಿಡಿದು ಆಟವಾಡುತ್ತಿದ್ದರು. ಈ ವೇಳೆ ಮೃತ ಬಾಲಕನ ಸಹೋದರ ಸಾಜೀದ್(16ವರ್ಷ) ಆಕಸ್ಮಿಕವಾಗಿ ಬಂದೂಕಿನ ಟ್ರಿಗರ್‌ ಒತ್ತಿದ್ದಾನೆ. ಈ ವೇಳೆ ಗುಂಡು ಮೃತ ಬಾಲಕನ ಕಣ್ಣಿಗೆ ತಾಕಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ (7 year boy died) .ಮೃತ ಬಾಲಕನ ಕುಟುಂಬದವರು ಉತ್ತರ ಪ್ರದೇಶ ಮೂಲದವರು ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶ ಮೂಲದವರಾದ ಇವರು ಕೂಲಿ ಕೆಲಸಕ್ಕೆಂದು ಕೆಲವು ದಿನಗಳ ಹಿಂದಷ್ಟೇ ರಾಮನಗರಕ್ಕೆ ಬಂದಿದ್ದು, ಮಲ್ಲೇಶ್‌ ಎಂಬಾತನ ಜಮೀನಿನಲ್ಲಿ ಕೆಲಸಕ್ಕಿದ್ದರು.

ಮೃತ ಬಾಲಕನ ತಂದೆ ತಾಯಿ ಇಬ್ಬರು ತೋಟದಲ್ಲಿ ಕೆಲಸ ಮಾಡುವಾಗ ಇಬ್ಬರು ಮಕ್ಕಳು ಬಂದೂಕು ಹಿಡಿದು ಆಟವಾಡುತ್ತಿದ್ದರು. ಈ ವೇಳೆ ಮೃತ ಬಾಲಕನ ಸಹೋದರ ಆಕಸ್ಮಿಕವಾಗಿ ಬಂದೂಕಿನ ಟ್ರಿಗರ್‌ ಒತ್ತಿದ್ದಾನೆ. ಆಕಸ್ಮಿಕವಾಗಿ ಹಾರಿದ ಗುಂಡು ಬಾಲಕನ ಕಣ್ಣಿಗೆ ನುಗ್ಗಿದೆ. ಬಾಲಕ ಸ್ಥಳದಲ್ಲೆ ಮೃತಪಟ್ಟಿದ್ದು, ಗುಂಡು ಹಾರಿಸಿದ ಮೃತ ಬಾಲಕನ ಸಹೋದರ ಸಾಜೀದ್‌ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೆ ಮನೆಯಲ್ಲಿ ಬಂದೂಕು ಇಟ್ಟುಕೊಂಡಿದ್ದ ಜಮೀನಿನ ಮಾಲಿಕ ಮಲ್ಲೇಶ್‌ ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಇದೀಗ ಕೋಡಿಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Mumbai Fire disaster: ಪಿಜ್ಜಾ ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಘಡ : 1 ಸಾವು, ಇಬ್ಬರಿಗೆ ಗಾಯ

ಇದನ್ನೂ ಓದಿ : ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ: 9 ತಿಂಗಳ ಮಗು ಸೇರಿ ಇಬ್ಬರು ಸಾವು

ಇದನ್ನೂ ಓದಿ : Unethical Police Giri: ಮೂಲ್ಕಿಯಲ್ಲಿ ಯುವಕನಿಗೆ ಮಾರಣಾಂತಿಕ ಹಲ್ಲೆ

The incident in which a 7-year-old boy died after being hit by a bullet accidentally took place in Kanakpur taluk of Ramanagara district. Shama (7 years) is a boy who died due to bullet injury.

Comments are closed.