Suresh Raina played Gully cricket : ಹುಟ್ಟೂರಲ್ಲಿ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಸುರೇಶ್ ರೈನಾ

ಗಾಝಿಯಾಬಾದ್ : ಸುರೇಶ್ ರೈನಾ (Suresh Raina played Gully cricket) ಭಾರತದ ಅತ್ಯುತ್ತಮ ಎಡಗೈ ದಾಂಡಿಗರಲ್ಲೊಬ್ಬರು. 2011ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ರೂವಾರಿಯಲ್ಲೊಬ್ಬರದ ಸುರೇಶ್ ರೈನಾ, 13 ವರ್ಷಗಳ ಕಾಲ ಟೀಮ್ ಇಂಡಿಯಾ ಪರ ಆಡಿದ್ದಾರೆ. ಕೆಳ ಮಧ್ಯಮ ಕ್ರಮಾಂಕದಲ್ಲಿ ಹಲವು ಸ್ಮರಣೀಯ ಇನ್ನಿಂಗ್ಸ್’ಗಳನ್ನು ಆಡಿದ್ದಾರೆ.

2020ರಲ್ಲಿ ಮಹೇಂದ್ರ ಸಿಂಗ್ ಧೋನಿ ಜೊತೆ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಘೋಷಿಸಿದ್ದ ಸುರೇಶ್ ರೈನಾ, ಇತ್ತೀಚೆಗಷ್ಟೇ ಐಪಿಎಲ್’ಗೂ ಗುಡ್ ಬೈ ಹೇಳಿದ್ದರು. ನಂತರ ದುಬೈ ಟಿ10 ಲೀಗ್’ನಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ಪರ ಆಡಿದ್ದ 36 ವರ್ಷದ ಲೆಫ್ಟ್ ಹ್ಯಾಂಡರ್, ತಂಡ ಸತತ 2ನೇ ಬಾರಿ ಚಾಂಪಿಯನ್ ಆಗಲು ಕಾರಣರಾಗಿದ್ದರು.ಇದೀಗ ವೃತ್ತಿಪರ ಕ್ರಿಕೆಟ್’ನಿಂದ ಬಿಡುವು ಪಡೆದಿರುವ ಸುರೇಶ್ ರೈನಾ ತಮ್ಮ ಹುಟ್ಟೂರು ಗಾಝಿಯಾಬಾದ್’ನ ಮುರಾದ್’ನಗರದಲ್ಲಿ ಗಲ್ಲಿ ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ.

ಹುಟ್ಟೂರ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡುತ್ತಿರುವ ವೀಡಿಯೊವನ್ನು ಸುರೇಶ್ ರೈನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. “ನನ್ನ ಕ್ರಿಕೆಟ್ ಪ್ರಯಾಣ ಇಲ್ಲಿಂದಲೇ ಶುರುವಾಗಿತ್ತು. ಗಲ್ಲಿ ಕ್ರಿಕೆಟ್, ಬಾಲ್ಯದ ದಿನಗಳು, ಹಳ್ಳಿ” ಎಂದು ಬರೆದುಕೊಂಡಿದ್ದಾರೆ. 2005ರಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಸುರೇಶ್ ರೈನಾ, ಟೀಮ್ ಇಂಡಿಯಾ ಪರ ಒಟ್ಟು 226 ಏಕದಿನ ಪಂದ್ಯಗಳನ್ನಾಡಿದ್ದು, 5 ಶತಕ, 36 ಅರ್ಧಶತಕಗಳ ಸಹಿತ 5615 ರನ್ ಗಳಿಸಿದ್ದಾರೆ.

ಇದನ್ನೂ ಓದಿ : India Vs Bangladesh test series : ಬಾಂಗ್ಲಾ ವಿರುದ್ಧ ಭಾರತಕ್ಕೆ 188 ರನ್ ಜಯ, ರಾಹುಲ್ ಟೆಸ್ಟ್ ನಾಯಕತ್ವಕ್ಕೆ ಮೊದಲ ಗೆಲುವು

ಇದನ್ನೂ ಓದಿ : India vs Bangladesh test : ಭಾರತದ ಗೆಲುವಿಗೆ 4 ವಿಕೆಟ್ ಬಾಕಿ, ಬಾಂಗ್ಲಾ ಗೆಲುವಿಗೆ ಬೇಕು 241 ರನ್

ಇದನ್ನೂ ಓದಿ : Ranji Trophy Karnataka: ಸರ್ವಿಸಸ್ ವಿರುದ್ಧದ ಪಂದ್ಯ ಡ್ರಾ, 3 ಅಂಕಕ್ಕೆ ತೃಪ್ತಿ ಪಟ್ಟ ಕರ್ನಾಟಕ

2010ರಲ್ಲಿ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ರೈನಾ, ಆಡಿದ ಮೊದಲ ಟೆಸ್ಟ್’ನಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದರು. ಟೀಮ್ ಇಂಡಿಯಾ ಪರ 18 ಟೆಸ್ಟ್ ಪಂದ್ಯಗಳನ್ನಾಡಿ 1 ಶತಕ, 7 ಅರ್ಧಶತಕಗಳ ಸಹಿತ 768 ರನ್ ಗಳಿಸಿರುವ ರೈನಾ, 78 ಏಕದಿನ ಪಂದ್ಯಗಳಿಂದ 1 ಶತಕ ಹಾಗೂ 5 ಅರ್ಧಶತಕಗಳೊಂದಿಗೆ 1605 ರನ್ ಕಲೆ ಹಾಕಿದ್ದಾರೆ. ಸುರೇಶ್ ರೈನಾ ಕ್ರಿಕೆಟ್ ಜಗತ್ತು ಕಂಡ ಅದ್ಭುತ ಫೀಲ್ಡರ್’ಗಳಲ್ಲಿ ಒಬ್ಬರು.ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 13 ವರ್ಷಗಳ ಕಾಲ ಆಡಿರುವ ಸುರೇಶ್ ರೈನಾ, CSK ತಂಡ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

Suresh Raina played gully cricket with the boys in his hometown

Comments are closed.