suicide : ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮಕ್ಕಳ ಜೊತೆ ಪತ್ನಿ ನೇಣಿಗೆ ಶರಣು

ಮೈಸೂರು : suicide : ವೈವಾಹಿಕ ಸಂಬಂಧ ಎನ್ನುವುದು ಎಷ್ಟು ಪವಿತ್ರವೋ ಇಲ್ಲಿ ಮೂರನೇ ವ್ಯಕ್ತಿಯ ಎಂಟ್ರಿ ಆಯ್ತು ಅಂದರೆ ಇದೇ ಸಂಬಂಧ ಜೀವನವನ್ನೇ ನಾಶ ಮಾಡಿ ಬಿಡುತ್ತದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ಮೈಸೂರಿನಲ್ಲಿ ಅಕ್ರಮ ಸಂಬಂಧಕ್ಕೆ ಮೂವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ತಿ,ನರಸೀಪುರ ತಾಲೂಕಿನ ರಾಮೇಗೌಡನಪುರ ಎಂಬ ಗ್ರಾಮದಲ್ಲಿ ಗಂಡನ ಅಕ್ರಮ ಸಂಬಂಧದಿಂದ (husband’s illicit affair) ಬೇಸತ್ತಿದ್ದ 32 ವರ್ಷದ ಸರೋಜಾ ಎಂಬಾಕೆ ತನ್ನ ಮಕ್ಕಳಾದ 4 ವರ್ಷದ ಕುಸುಮಾ ಹಾಗೂ 6 ವರ್ಷದ ಗೀತಾಳಿಗೆ ನೇಣು ಬಿಗಿದು ಸಾಯಿಸಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ .

ತಿ,ನರಸೀಪುರ ತಾಲೂಕಿನ ಮಾವಿನಹಳ್ಳಿ ಎಂಬ ಗ್ರಾಮದ ನಿಂಗರಾಜು ಎಂಬಾತನ ಜೊತೆಯಲ್ಲಿ ಸರೋಜಾ ಎಂಬಾಕೆಯ ವಿವಾಹವಾಗಿತ್ತು, ಇವರಿಬ್ಬರ ದಾಂಪತ್ಯದಿಂದ ಇಬ್ಬರು ಹೆಣ್ಣು ಮಕ್ಕಳು ಸಹ ಜನಿಸಿದ್ದರು. ಆದರೆ ನಿಂಗರಾಜುವಿನ ಅಕ್ರಮ ಸಂಬಂಧದಿಂದಾಗಿ ಇವರ ದಾಂಪತ್ಯದಲ್ಲಿ ವಿರಸ ಮೂಡಿತ್ತು. ಪದೇ ಪದೇ ಈ ವಿಚಾರವಾಗಿ ನಿಂಗರಾಜು ಹಾಗೂ ಸರೋಜಾ ಗಲಾಟೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಗಂಡನ ಅಕ್ರಮ ಸಂಬಂಧಗಳಿಂದ ಬೇಸತ್ತಿದ್ದ ಸರೋಜಾ ತನ್ನ ಇಬ್ಬರು ಮಕ್ಕಳಾದ ಗೀತಾ ಹಾಗೂ ಕುಸುಮಾ ಜೊತೆಯಲ್ಲಿ ರಾಮೇನಗೌಡನಪುರದಲ್ಲಿರುವ ತನ್ನ ತವರು ಮನೆಗೆ ಆಗಮಿಸಿದ್ದಳು. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಸರೋಜಾ ತನ್ನ ಇಬ್ಬರು ಮಕ್ಕಳಿಗೆ ನೇಣು ಬಿಗಿದು ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ್ದಾಳೆ. ಮೂವರ ಮೃತದೇಹಗಳಲ್ಲಿ ತಿ, ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ತಿ,ನರಸೀಪುರ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : India Vs England test : ಭಾರತವನ್ನು ಸೋಲಿಸುವುದು ಸುಲಭವಲ್ಲ.. ಇಂಗ್ಲೆಂಡ್ ಎಚ್ಚರಿಕೆ ಕೊಟ್ಟ ಸ್ವಂತ ಆಟಗಾರ

ಇದನ್ನು ಓದಿ : Ek Villain Returns : ಮತ್ತೆ ಬರಲಿದೆ “ಏಕ್ ವಿಲನ್ ರಿಟರ್ನ್ಸ್”

ಇದನ್ನೂ ಓದಿ : India vs South Africa T20 : ಜುಲೈ 1, 2, 3ರಂದು ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯದ ಟಿಕೆಟ್ ಹಣ ವಾಪಸ್

A wife and two children have committed suicide due to their husband’s illicit affair

Comments are closed.