Accident – 4 died : ಆಟೋ ಮೇಲೆ ಮರಳು ಡಂಪರ್ ಪಲ್ಟಿ ; 3 ವಿದ್ಯಾರ್ಥಿಗಳು ಸೇರಿ 4 ಮಂದಿ ಸಾವು

ರಾಯಗಢ : (Accident – 4 died )ಮರಳು ತುಂಬಿದ ಡಂಪರ್, ಆಟೋ ರಿಕ್ಷಾ ಮೇಲೆ ಪಲ್ಟಿಯಾದ ಪರಿಣಾಮ ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ನಡೆದಿದೆ. ಮೂವರು ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಆಟೋದಲ್ಲಿ ಮನೆಗೆ ಮರಳುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ರಾಯಗಢದ ಚೋಲೆ ಗ್ರಾಮದಲ್ಲಿ ರಾತ್ರಿ 7.10ರ ಸುಮಾರಿಗೆ ಮೂವರು ವಿದ್ಯಾರ್ಥಿಗಳು ಪರೀಕ್ಷೆಯನ್ನು ಮುಗಿಸಿ ಆಟೋದಲ್ಲಿ ಮನೆಗೆ ತೆರಳುತ್ತಿದ್ದರು. ಈ ಸಮಯದಲ್ಲಿ ಎರಡೂ ವಾಹನಗಳು ಪೊಲಾದ್‌ಪುರ ಕಡೆಗೆ ಹೋಗುತ್ತಿದ್ದವು. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು, ವೇಗವಾಗಿ ಬರುತ್ತಿದ್ದ ಮರಳು ತುಂಬಿದ ಡಂಪರ್ ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಆಟೋ ರಿಕ್ಷಾ ಮೇಲೆ ಪಲ್ಟಿಯಾಗಿದೆ. ಪರಿಣಾಮ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು (Accident – 4 died )ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ .

ಇದನ್ನೂ ಓದಿ : Rape incident : 70 ರ ವೃದ್ದೆ ಮೇಲೆ 28 ರ ಯುವಕನಿಂದ ಅತ್ಯಾಚಾರ

ಇದನ್ನೂ ಓದಿ : The secret of Chandrasekhar’s death : ಪೊಲೀಸರ ಕೈ ಸೇರಿದ ಡಯಾಟಮ್ ವರದಿ : ಬಯಲಾಗುತ್ತಾ ಹೊನ್ನಾಳಿ ಚಂದ್ರಶೇಖರ್ ಸಾವಿನ ರಹಸ್ಯ ?

ಇದನ್ನೂ ಓದಿ : Bus accident: 40 ವಿದ್ಯಾರ್ಥಿಗಳು ಪ್ರವಾಸ ಹೊರಟಿದ್ದ ಖಾಸಗಿ ಬಸ್ ಡಿಕ್ಕಿ; ಚಾಲಕನ ನಿಯಂತ್ರಣ ತಪ್ಪಿ ಅವಘಡ

“ಈ ಪ್ರಕರಣದ ಕುರಿತು ಸಂತಾಪವನ್ನು ವ್ಯಕ್ತಪಡಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ಘೋಷಿಸಿದ್ದಾರೆ” ಎಂದು ರಾಯಗಢ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಕೈಗಾರಿಕಾ ಸಚಿವ ಉದಯ್ ಸಾಮಂತ್ ಹೇಳಿದ್ದಾರೆ

ಈ ಪ್ರಕರಣದ ಕುರಿತು ರಾಯಲಗಢ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತಂತೆ ತನಿಖೆ ನಡೆಯುತ್ತಿದೆ.

(Accident – 4 died) Four people, including three students, were killed when a sand-filled dumper overturned on an auto-rickshaw in Maharashtra’s Raigarh. It is reported that the accident took place when the three students were returning home in an auto after completing their exams.

Comments are closed.