Chandra Grahan 2022 : ಇಂದು ಚಂದ್ರಗ್ರಹಣ : ಈ ದೇವಾಲಯಗಳಲ್ಲಿ ಪೂಜೆ, ಸೇವೆ ಬಂದ್‌

ಸೂರ್ಯಗ್ರಹಣದ ಮುಗಿದ 15 ದಿನದಲ್ಲೇ ಚಂದ್ರಗ್ರಹಣ (Chandra Grahan 2022)ಸಂಭವಿಸಲಿದೆ. ಇದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಆಗಿರುತ್ತದೆ. ನವೆಂಬರ್‌ 8 ರಂದು ಗ್ರಸ್ತೋದು ಖಗ್ರಾಸ ಚಂದ್ರಗ್ರಹಣ ಹಿನ್ನಲೆಯಲ್ಲಿ ರಾಜ್ಯದ ಹಲವೆಡೆ ಹಲವು ಪ್ರಮುಖ ದೇವಾಲಯಗಳ ಬಾಗಿಲು ಮುಚ್ಚಿರುತ್ತದೆ.ಯಾವ ದೇವಾಲಯಗಳು ಬಂದ್‌ ಆಗಿರುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಗೋಕರ್ಣ ಮಹಾಬಲೇಶ್ವರ ದೇವಸ್ಥಾನ :

ಚಂದ್ರಗ್ರಹಣ ಹಿನ್ನಲೆಯಲ್ಲಿ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ದರ್ಶನ ಮಾತ್ರವಿರುತ್ತದೆ. ಆದರೆ ಪೂಜೆ, ಅನ್ನಸಂತರ್ಪಣೆ ವ್ಯವಸ್ಥೆಯಿರುವುದಿಲ್ಲ. ಚಂದ್ರಗ್ರಹಣ ಹಿನ್ನಲೆಯಲ್ಲಿ ಕೆಲವು ದೇವಸ್ಥಾನದಲ್ಲಿ ದರ್ಶನ ವೇಳೆಯಲ್ಲಿ ಕೂಡ ಬದಲಾವಣೆ ಮಾಡಲಾಗಿರುತ್ತದೆ. ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಚಂದ್ರಗ್ರಹಣದ ಹಿನ್ನಲೆಯಲ್ಲಿ ನವೆಂಬರ್‌ 8 ಮಂಗಳವಾರ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಹಾಗೆ ಮಧ್ಯಾಹ್ನ 2.30ರಿಂದ ಸಂಜೆ 6.30ರವರೆಗೆ ಅಂದರೆ ಗ್ರಹಣ ಕಾಲದಲ್ಲೂ ಭಕ್ತರಿಗೆ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಿದ್ದಾರೆ. ಆದರೆ ಈ ದಿನ ಮಧ್ಯಾಹ್ನ ಮತ್ತು ಸಂಜೆ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯಿರುವುದಿಲ್ಲ.

ಮುರುಡೇಶ್ವರ ದೇವಸ್ಥಾನ :

ಗ್ರಹಣ ಹಿನ್ನಲೆಯಲ್ಲಿ ಮುರುಡೇಶ್ವರ ದೇವಸ್ಥಾನದಲ್ಲಿ ಮಂಗಳವಾರದಂದು ಬೆಳಗ್ಗೆ 6ರಿಂದ ಮಧ್ಯಾಹ್ನ 1ಗಂಟೆಯವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 8.30ರವರಗೆ ದರ್ಶನಕ್ಕೆ ಮಾತ್ರ ಅವಕಾಶವಿರುತ್ತದೆ. ಹಾಗೆ ಗ್ರಹಣ ಮುಗಿದ ನಂತರ ಮಹಾಪೂಜೆ, ತೀರ್ಥ, ಪ್ರಸಾದ ವಿತರಣೆ ಇರುತ್ತದೆ. ಆದರೆ ಈ ದಿನದಂದು ಪೂಜೆ ಮತ್ತು ಅನ್ನಸಂತರ್ಪಣೆ ಇರುವುದಿಲ್ಲ.

ಇಡಗುಂಜಿ ಮಹಾಗಣಪತಿ ದೇವಸ್ಥಾನ :

ಚಂದ್ರಗ್ರಹಣ ಹಿನ್ನಲೆಯಲ್ಲಿ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಬೆಳಗ್ಗೆ 10ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲ್ಪಡುತ್ತದೆ. ಆದರೆ ಸಂಜೆ ಗ್ರಹಣ ಮುಗಿದ ನಂತರ ದೇವಸ್ಥಾನದ ಬಾಗಿಲನ್ನು ತೆರೆಯಲಾಗುವುದು. ಈ ಸಮಯದಲ್ಲಿ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಪೂಜೆ ಹಾಗೂ ಅನ್ನಪ್ರಸಾದವಿರುವುದಿಲ್ಲ.

ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನ :

ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಬೆಳಗ್ಗೆ 8ಗಂಟೆಗೆ ಮಾರಿಕಾಂಬೆಗೆ ಮಹಾಪೂಜೆ ನಡೆಯುತ್ತದೆ. ಇದರ ಜೊತೆಯಲ್ಲಿ ಬೆಳಗ್ಗೆ 11ಗಂಟೆಯವರೆಗೂ ದೇವಿಯ ದರ್ಶನಕ್ಕೆ ಅವಕಾಶವಿರುತ್ತದೆ. 11ಗಂಟೆಯ ನಂತರ ಗ್ರಹಣ ಮೋಕ್ಷ ಆಗುವವರೆಗೂ ದೇವಸ್ಥಾನ ಮುಚ್ಚಿರುತ್ತದೆ. ನಂತರ ರಾತ್ರಿ 9ಗಂಟೆಗೆ ಮಹಾಪೂಜೆ ನಡೆಯುತ್ತದೆ.

ಇದನ್ನೂ ಓದಿ : Chandra Grahan 2022 : ಕುಕ್ಕೆಸುಬ್ರಹ್ಮಣ್ಯದಲ್ಲಿ ಚಂದ್ರಗ್ರಹಣ ಹಿನ್ನೆಲೆ ಪೂಜೆ ಅನ್ನದಾನ ಸೇವೆ ಬಂದ್

ಇದನ್ನೂ ಓದಿ : Lunar Eclipse 2022 :ಕಾರ್ತಿಕ ಮಾಸದಲ್ಲೇ  ಚಂದ್ರಗ್ರಹಣ : ಎಲ್ಲೆಲ್ಲಿ ಗೋಚರ ? ಏನು ಮಾಡಬೇಕು ? ಏನು ಮಾಡಬಾರದು ? ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ : Chandra Grahan 2022 : ಚಂದ್ರ ಗ್ರಹಣ 2022: ಯಾವ ರಾಶಿಯವರ ಮೇಲೆ ಪ್ರಭಾವ ಹೆಚ್ಚು…

ಇದನ್ನೂ ಓದಿ : Lunar Eclipse: ನಭೋಮಂಡಲದಲ್ಲಿಂದು ರಕ್ತ ಚಂದ್ರ ಗ್ರಹಣದ ಚಮತ್ಕಾರ

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ :

ಚಂದ್ರಗ್ರಹಣ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಮತ್ತು ಅನ್ನದಾನ ನವೆಂಬರ್‌ 8ರಂದು ಇರುವುದಿಲ್ಲ. ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ದೇವರ ದರ್ಶನದ ಸಮಯದಲ್ಲಿ ಬೆಳಗ್ಗೆ 9ರಿಂದ 11.30ರ ತನಕ ದರ್ಶನಕ್ಕೆ ಅವಕಾಶವಿರುತ್ತದೆ. ಹಾಗೆ ಗ್ರಹಣ ಮುಗಿದ ನಂತರ 7.30ರಿಂದ 9ರ ತನಕ ಶ್ರೀ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ.

Chandra Grahan 2022 : Chandra Grahan today : Pooja, Seva Bandh in these temples

Comments are closed.