Accident News : ಟಿಪ್ಪರ್ ಗೆ ಕಾರು ಢಿಕ್ಕಿ : ನಾಲ್ವರು ದುರ್ಮರಣ

ಸಕಲೇಶಪುರ : ಟಿಪ್ಪರ್‌ ಹಾಗೂ ಕಾರು ಮುಖಾಮುಖಿ ಢಿಕ್ಕಿಯಾಗಿ ನಾಲ್ವರು (Accident News) ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಈಶ್ವರಹಳ್ಳಿ ಕೂಡಿಗೆ ಬಳಿಯಲ್ಲಿ ನಡೆದಿದೆ.

ತಟ್ಟೆಕೆರೆಯ ಪುರುಷೋತ್ತಮ್‌, ಚಿಗಳೂರಿನ ದಿನೇಶ್‌, ಕುಪ್ಪಹಳ್ಳಿಯ ಚೇತನ್‌, ಗುಡ್ಡೇನಹಳ್ಳಿಯ ಅಶೋಕ್‌ ಮೃತಪಟ್ಟವರು. ಟೊಯೊಟಾ ಇನ್ನೋವಾ ಕಾರನ್ನು ಹಿಂದಿಕ್ಕುವ ಭರದಲ್ಲಿ ಕಾರನ್ನು ಓವರ್‌ ಟೇಕ್‌ ಮಾಡಿದ್ದಾರೆ. ಈ ವೇಳೆಯಲ್ಲಿ ಎದುರಿನಿಂದ ಬಂದ ಟಿಪ್ಪರ್‌ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ನಾಲ್ವರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : Jammu and Kashmir : ಭಾರೀ ಮಳೆ, ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್

ಇದನ್ನೂ ಓದಿ : Murder Case : ಪ್ರೀತಿಸಿದ್ದೇ ತಪ್ಪಾಯ್ತು ! ಅಕ್ಕನ ಶಿರಚ್ಚೇಧ ಮಾಡಿ ತಲೆಯನ್ನು ಪೊಲೀಸ್‌ ಠಾಣೆಗೆ ಕೊಂಡೊಯ್ದ ತಮ್ಮ

ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಕ್ರೇನ್‌ ಸಹಾಯದಿಂದ ಟಿಪ್ಪರ್‌ ಹಾಗೂ ಕಾರನ್ನು ಬೇರ್ಪಡಿಸಲಾಗಿತ್ತು. ಘಟನೆಯ ಕುರಿತು ಸಕಲೇಶಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.

Accident News: Car collides with tipper: Four die

Comments are closed.