KMF Nandini Milk Price Hiked : ನಂದಿನಿ ಹಾಲಿನ ದರ 3 ರೂಪಾಯಿ ಏರಿಕೆ, ಬುಗಿಲೆದ್ದ ಜನಾಕ್ರೋಶ

ಬೆಂಗಳೂರು : ರಾಜ್ಯದ ಮಾರುಕಟ್ಟೆಯಲ್ಲಿ ದಿನದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಇದೀಗ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ (KMF Nandini Milk Price Hiked) ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿಯಷ್ಟು ಏರಿಕೆ ಮಾಡಲು ನಿರ್ಧರಿಸಿದೆ. ಇನ್ನು ಮಾರುಕಟ್ಟೆಯಲ್ಲಿ ಈ ಹೊಸ ದರವು ಆಗಸ್ಟ್‌ 1 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ಮೊದಲು ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ದಿನಸಿ ವಸ್ತುಗಳ ಬೆಲೆ ಏರಿಕೆ ಕಂಡಿದ್ದು, ಇದೀಗ ಹಾಲಿನ ದರ ಏರಿಕೆಯಿಂದ ರಾಜ್ಯದ ಜನಾಕ್ರೋಶ ಬುಗಿಲೆದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಶುಕ್ರವಾರ ರಾಜ್ಯದಲ್ಲಿನ ಎಲ್ಲಾ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್‌ ಅಧ್ಯಕ್ಷರ ಸಭೆ ನಡೆಸಿ, ಹಾಲಿನ ಬೆಲೆ ಏರಿಕೆ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಕೆಎಂಎಫ್‌ 5 ರೂಪಾಯಿಯಷ್ಟು ಹೆಚ್ಚಳಕ್ಕೆ ಬೇಡಿಕೆ ನೀಡಿದ್ದು, ಸರಕಾರ 3 ರೂಪಾಯಿ ಹೆಚ್ಚಳಕ್ಕೆ ಅನುಮತಿ ನೀಡಿರುತ್ತದೆ.

ಇದನ್ನೂ ಓದಿ : Tomato price : ಗ್ರಾಹಕರಿಗೆ ಗುಡ್‌ ನ್ಯೂಸ್‌ : ಇಂದಿನಿಂದ ಈ ರಾಜ್ಯದಲ್ಲಿ ಟೊಮ್ಯಾಟೊ ಕೆಜಿಗೆ 70 ರೂ.

ಇದನ್ನೂ ಓದಿ : PM Kisan 14th Installment‌ : ಪಿಎಂ ಕಿಸಾನ್ ಯೋಜನೆ : ಶೀಘ್ರದಲ್ಲೇ ರೈತರ ಖಾತೆಗೆ ಜಮೆ ಆಗಲಿದೆ 14 ನೇ ಕಂತು : ಸಂಪೂರ್ಣ ವಿವರಕ್ಕಾಗಿ ಇಲ್ಲಿ ಪರಿಶೀಲಿಸಿ

ಮುಂದಿನ ತಿಂಗಳ ಆರಂಭದಿಂದ ಪ್ರತಿ ಲೀಟರ್‌ಗೆ 3 ರೂ. ದರ ಏರಿಕೆಯಾಗಲಿದ್ದು, ದರ ಏರಿಕೆ ಹಣ ರೈತರಿಗೆ ತಲುಪಿಸಲಾಗುತ್ತದೆ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌ ಸಭೆಯಲ್ಕಿ ಹೇಳಿದರು. ಸದ್ಯ ಕೆಎಂಎಫ್‌ ರೈತರಿಂದ 31.14 ರೂ ಜೊತೆಗೆ ಸರಕಾರದಿಂದ ಐದು ರೂ ಪ್ರೋತ್ಸಾಹ ಧನ ಸೇರಿ 36 ರೂ.ಗೆ ಖರೀದಿ ಮಾಡುತ್ತಿದೆ. ಇನ್ನು ಪ್ರತಿ ಲೀಟರ್‌ಗೆ ಗ್ರಾಹಕರಿಗೆ 39 ರೂಪಾಯಿಗೆ ಮಾರಾಟ ಮಾಡುತ್ತಾರೆ. ಸದ್ಯ ಗ್ರಾಹಕರಿಗೆ ದರ ಹೆಚ್ಚಳ ಮಾಡಿದ್ದರಿಂದ ರೈತರಿಂದ ಖರೀದಿ ಮಾಡುವ ದರವೂ ಹೆಚ್ಚಳವಾಗಲಿದೆ. ಇದು ರೈತರಿಗೆ ಸಂತಸದ ಸುದ್ದಿಯಾಗಲಿದೆ ಎಂದಿದ್ದಾರೆ.

KMF Nandini Milk Price Hiked: Nandini milk price hiked by Rs 3, public outrage erupted

Comments are closed.