Adah Sharma : ಹೊಸ ವರ್ಷ ಸಮೀಪಿಸುತ್ತಿದ್ದಂತೆ ಹೊಸ ಹೊಸ ರೆಸ್ಯುಲೇಶನ್ ಗಳೇನು ಅನ್ನೋ ಪ್ರಶ್ನೆ ಮೂಡುತ್ತೆ. ಅದರಲ್ಲೂ ನಟ-ನಟಿಯರಂತೂ ಚಿತ್ರ ವಿಚಿತ್ರ ರೆಶ್ಯುಲೇಶನ್ ಮೂಲಕ ಸುದ್ದಿಯಾಗ್ತಾರೆ. ಇಂತಹುದೇ ಲಿಸ್ಟ್ ನಲ್ಲಿದ್ದಾರೆ ನಟಿ ಅದಾ ಶರ್ಮಾ. ಇಷ್ಟಕ್ಕೂ ಸಖತ್ ಫೇಮಸ್ ನಟಿ ಅದಾ ಹೊಸ ವರ್ಷಕ್ಕೆ ಮಾಡಿರೋ ಪ್ಲ್ಯಾನ್ ಏನು? ಅವರ ಪ್ಲ್ಯಾನ್ ಕೇಳಿದ ಫ್ಯಾನ್ಸ್ ರಿಯಾಕ್ಷನ್ ಏನು? ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ.
ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ನಟಿ ಅದಾ ಶರ್ಮಾಗೆ ಹೆಸರು ತಂದುಕೊಟ್ಟ ಸಿನಿಮಾ ದಿ ಕೇರಳ ಫೈಲ್ಸ್. ಸದ್ಯ ಈ ಸಿನಿಮಾದ ಖುಷಿಯಲ್ಲೇ ಇರುವ ನಟಿ ಅದಾ ಶರ್ಮಾ ಕೇವಲ ಸಿನಿಮಾ ಮಾತ್ರವಲ್ಲ ಸೋಷಿಯಲ್ ಮೀಡಿಯಾದ ಮೂಲಕವೂ ಸಖತ್ ಫೇಮಸ್. ಇನ್ ಸ್ಟಾಗ್ರಾಂ ಸೇರಿದಂತೆ ಸೋಷಿಯಲ್ ಮೀಡಿಯಾದ ಎಲ್ಲ ಫ್ಲ್ಯಾಟ್ ಫಾರ್ಂನಲ್ಲೂ ಬ್ಯುಸಿಯಾಗಿರೋ ತಮ್ಮ ಹೊಸ ವರ್ಷದ ಹೊಸ ನಿರ್ಧಾರ ಏನು ಅನ್ನೋದನ್ನು ಫನ್ನಿ ವಿಡಿಯೋ ವೊಂದರಲ್ಲಿ ಶೇರ್ ಮಾಡಿದ್ದಾರೆ.

ಆ ವಿಡಿಯೋದಲ್ಲಿ ನಟಿ ಅದಾ ಶರ್ಮಾ ರೂಂನಲ್ಲಿರೋ ತಮ್ಮ ವಾರ್ಡ್ ರೋಬ್ ಓಫನ್ ಮಾಡಿದ್ದಾರೆ. ಆಗ ಅವರ ಅಸಂಖ್ಯ ಬಟ್ಟೆಗಳು ವಾರ್ಡ್ ರೋಬ್ ನಿಂದ ಉದುರಿ ಬಿದ್ದಿವೆ. ಅದರ ಮಧ್ಯೆ ಅದಾ ಶರ್ಮಾ ಅಕ್ಷರಷಃ ಮುಚ್ಚಿ ಹೋಗಿದ್ದಾರೆ. ವಾರ್ಡ್ ರೋಬ್ ಬಾಗಿಲು ತೆರೆಯುತ್ತಿದ್ದಂತೆ ಇಂಡಿಯನ್, ವೆಸ್ಟರ್ನ್ ಔಟ್ ಫಿಟ್ ಗಳ ರಾಶಿಯೇ ಕೆಳಕ್ಕೆ ಬಿದ್ದಿದ್ದು, ಬಟ್ಟೆ ರಾಶಿ ಮಧ್ಯೆ ಅದಾ ಕಳೆದು ಹೋದಂತಾಗಿದ್ದಾರೆ.
ಇದನ್ನೂ ಓದಿ : ಶೂಟಿಂಗ್ ಮುಗಿಸಿದ ‘ಝೀಬ್ರಾ : ಶೀಘ್ರದಲ್ಲೇ ತೆರೆಗೆ ಡಾಲಿ-ಸತ್ಯದೇವ್ ಕಾಂಬಿಷೇನ್ ಸಿನಿಮಾ

ಈ ವಿಡಿಯೋದ ಜೊತೆಗೆ ಅದಾ ಫನ್ನಿ ಸಂದೇಶವೊಂದನ್ನು ಶೇರ್ ಮಾಡಿದ್ದಾರೆ. ಈ ಬಟ್ಟೆಗಳನ್ನು ಸರಿಯಾಗಿ ಜೋಡಿಸದೇ ಹೋದಲ್ಲಿ ಮನೆಯಿಂದ ಹೊರಹಾಕುತ್ತೇನೆ ಎಂದು ಅಮ್ಮ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಾನು ಬಟ್ಟೆ ಜೋಡಿಸುವ ಕೆಲಸ ಆರಂಭಿಸಿದ್ದೇನೆ. ಒಂದೊಮ್ಮೆ ನನ್ನ ನ್ನು ಅಮ್ಮ ಮನೆಯಿಂದ ಹೊರಹಾಕಿದ್ರೆ ಅಮ್ಮನೂ ನನ್ನೊಂದಿಗೆ ಬರಬೇಕಾಗುತ್ತೆ. ಯಾಕೆಂದರೇ ನಾನು ಅಮ್ಮನಿಲ್ಲದೇ ಇರೋದಿಲ್ಲ ಎಂದಿದ್ದಾರೆ.

ಇನ್ನು ಅದಾ ನ್ಯೂ ಇಯರ್ ರೆಸ್ಯೂಲೇಶನ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕ್ತಿದ್ದಂತೆ ಅಭಿಮಾನಿಗಳು ಸಖತ್ ಲೈಕ್ಸ್ ಒತ್ತಿದ್ದು ಕಮೆಂಟ್ ಕೂಡ ಮಾಡಿದ್ದಾರೆ.ಇತ್ತೀಚೆಗಷ್ಟೇ ನಟಿ ಅದಾ ಶರ್ಮಾ ಭರತನಾಟ್ಯ ವೇಷಭೂಷಣದಲ್ಲಿ ಕೇರಳದ ದೋಣಿಯೊಂದರಲ್ಲಿ ಕುಳಿತು ಪೋಸ್ ನೀಡಿದ್ದು ಆ ವೇಳೆ ಎಲ್ಲ ಅಭಿಮಾನಿಗಳು ಕೇರಳ ಸ್ಟೋರಿ ಭಾಗ ಎರಡು ತೆರೆಗ ಬರಲಿದ್ಯಾ ಎಂದು ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ : ರಮ್ಯ ಸ್ಪೆಶಲ್ ಬರ್ತಡೇ: ಸ್ಯಾಂಡಲ್ ವುಡ್ ಕ್ವೀನ್ ಗೆ ಜೊತೆಯಾದ ವಿನಯ್ ರಾಜ್ ಕುಮಾರ್

ಆದರೆ ಆ ಪ್ರಶ್ನೆಗೆ ನೇರವಾಗಿ ಉತ್ತರಿಸದ ಅದಾ ಶರ್ಮಾ ಕೇರಳ ಸ್ಟೋರಿ ಒಟಿಟಿ ಗೆ ಯಾವಾಗ ಬರಲಿದೆ ಹಾಗೂ ಕೇರಳ ಸ್ಟೋರಿ ಎರಡನೇ ಭಾಗ ಯಾವಾಗ ಬರಲಿದೆ ಅನ್ನೋದು ನಂಗೇ ಗೊತ್ತಿಲ್ಲ. ಆದರೆ ಈ ನದಿಯಲ್ಲಿ ಹಾವಿದೆ ಅನ್ನೋದು ಮಾತ್ರ ಗೊತ್ತಿದೆ ಎಂದರು. ಒಟ್ಟಿನಲ್ಲಿ ಸದ್ಯ ಕೇರಳ ಸ್ಟೋರಿ ಹಿರೋಯಿನ್ ಪೋಸ್ಟ್ ಹಾಗೂ ಸೋಷಿಯಲ್ ಮೀಡಿಯಾ ಹವಾ ಜೋರಾಗಿದ್ದು ಅಭಿಮಾನಿಗಳ ಮನಗೆದ್ದಿದೆ.
ಇದನ್ನೂ ಓದಿ: ಚಿರು ಸರ್ಜಾ – ರಾಯನ್ ರಾಜ್ ಸರ್ಜಾ ಪ್ರೀತಿಯ ಕುಟ್ಟಿಮಾ : ನಟಿ ಮೇಘನಾ ರಾಜ್ ಕ್ರಿಸ್ಮಸ್ ಸ್ಪೆಶಲ್ ಸೆಲಿಬ್ರೇಶನ್
Adah Sharma New Year New Plan ? You will be surprised to hear