ದಿನಭವಿಷ್ಯ 28 ಡಿಸೆಂಬರ್‌ 2023 : ಇಂದ್ರ ಯೋಗದಿಂದ ಈ ರಾಶಿಯವರಿಗೆ ಆರ್ಥಿಕ ಲಾಭ

Horoscope Today : ದಿನಭವಿಷ್ಯ 28 ಡಿಸೆಂಬರ್‌ 2023ಗುರುವಾರ. ಜ್ಯೋತಿಷ್ಯದ ಪ್ರಕಾರ, ದ್ವಾದಶ ರಾಶಿಗಳ ಮೇಲೆ ಪುನರ್ವಸು ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಚಂದ್ರನು ಕರ್ಕಾಟಕ ರಾಶಿಯಲ್ಲಿ ಸಾಗುತ್ತಾನೆ. ಇಂದ್ರ ಯೋಗ (Indra Yoga) ಕೆಲವು ರಾಶಿಗಳಿಗೆ ಆರ್ಥಿಕವಾಗಿ ಲಾಭವನ್ನು ತರಲಿದೆ.

Horoscope Today : ದಿನಭವಿಷ್ಯ 28 ಡಿಸೆಂಬರ್‌ 2023ಗುರುವಾರ. ಜ್ಯೋತಿಷ್ಯದ ಪ್ರಕಾರ, ದ್ವಾದಶ ರಾಶಿಗಳ ಮೇಲೆ ಪುನರ್ವಸು ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಚಂದ್ರನು ಕರ್ಕಾಟಕ ರಾಶಿಯಲ್ಲಿ ಸಾಗುತ್ತಾನೆ. ಇಂದ್ರ ಯೋಗ (Indra Yoga) ಕೆಲವು ರಾಶಿಗಳಿಗೆ ಆರ್ಥಿಕವಾಗಿ ಲಾಭವನ್ನು ತರಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶರಾಶಿಗಳ ಇಂದಿನ ದಿನ ಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಕೆಲವು ಯೋಜನೆಗಳು ಇಂದು ಯಶಸ್ವಿ ಆಗಲಿವೆ. ಕುಟುಂಬ ಸದಸ್ಯರಿಗಾಗಿ ಸಮಯ ನೀಡಲು ಸಾಧ್ಯವಾಗದೇ ಇರಬಹುದು. ಆಸ್ತಿ ವ್ಯವಹಾರಗಳಲ್ಲಿ ಎಚ್ಚರವಾಗಿ ಇರುವುದು ಒಳಿತು. ನೀವು ಮೋಸ ಹೋಗುವ ಸಾಧ್ಯತೆಯಿದೆ. ವಿದೇಶಗಳಿಂದ ನೀವಿಂದು ಶುಭ ಸುದ್ದಿಯೊಂದನ್ನು ಕೇಳುವಿರಿ.

ವೃಷಭರಾಶಿ ದಿನಭವಿಷ್ಯ
ವ್ಯವಹಾರದಲ್ಲಿ ಶತ್ರುಗಳನ್ನು ಸೋಲಿಸುವಲ್ಲಿ ಯಶಸ್ವಿ ಆಗುತ್ತೀರಿ. ಸಂಗಾತಿಗೆ ವಿಶೇಷವಾದ ಸಮಯವನ್ನು ನೀಡಿದೆ. ಕುಟುಂಬದ ಸದಸ್ಯರ ಜೊತೆಗೆ ಧಾರ್ಮಿಕ ಕ್ಷೇತ್ರಗಳ ಭೇಟಿ ಸಾಧ್ಯತೆ. ನಕಾರಾತ್ಮಕ ಯೋಚನೆಗಳನ್ನು ದೂರ ಮಾಡಿ. ಪ್ರೇಮ ಜೀವನವು ಸುಖಮಯವಾಗಿ ಇರಲಿದೆ.

ಮಿಥುನರಾಶಿ ದಿನಭವಿಷ್ಯ
ಸಂಗಾತಿಯ ಸಂಪೂರ್ಣ ಬೆಂಬಲ ದೊರೆಯಲಿದೆ. ಆರ್ಥಿಕವಾಗಿ ಇಂದು ಲಾಭದಾಯಕವಾದ ದಿನ. ಕೌಟುಂಬಿಕ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ವ್ಯವಹಾರ ಕ್ಷೇತ್ರದಲ್ಲಿ ವಿಶೇಷವಾದ ಕಾಳಜಿ ವಹಿಸಿ. ವಿದ್ಯಾರ್ಥಿಗಳಿಗೆ ಕುಟುಂಬಸ್ಥರ ಬೆಂಬಲ ದೊರೆಯಲಿದೆ.

ಕರ್ಕಾಟಕರಾಶಿ ದಿನಭವಿಷ್ಯ
ಲಾಟರಿಯಿಂದ ಹಣ ಪಡೆಯುವ ಸಾಧ್ಯತೆಯಿದೆ. ಬುದ್ದಿವಂತಿಕೆಯಿಂದ ಶತ್ರುಗಳನ್ನು ಸೋಲಿಸುವಿರಿ. ಪಾಲುದಾರಿಕೆಯ ವ್ಯವಹಾರದಿಂದ ಅಧಿಕ ಲಾಭ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮಾನಸಿಕವಾದ ನೆಮ್ಮದಿ ದೊರೆಯಲಿದೆ.

Horoscope Today 28 December 2023 Zodiac Sign Indra Yoga
Image Credit to Original Source

ಸಿಂಹರಾಶಿ ದಿನಭವಿಷ್ಯ
ಹೊಸ ವ್ಯವಹಾರ ಆರಂಭಿಸಿದ್ರೆ ಯಶಸ್ಸು ಖಚಿತ. ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ. ಪೋಷಕರ ಸಲಹೆಯ ಮೇರೆಗೆ ವ್ಯವಹಾರವನ್ನು ಮುನ್ನೆಡೆಸಿ. ದೂರದ ಬಂಧುಗಳ ಭೇಟಿಯಿಂದ ನೆಮ್ಮದಿ. ಧಾರ್ಮಿಕ ಕ್ಷೇತ್ರಗಳ ಭೇಟಿ.

ಕನ್ಯಾರಾಶಿ ದಿನಭವಿಷ್ಯ
ತಾಯಿಯ ಆರೋಗ್ಯದ ಬಗ್ಗೆ ಜಾಗರೂಕರಾಗಿ ಇರಿ. ಸರಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತೆ ಶುಭ ಸುದ್ದಿಯನ್ನು ಕೇಳುವಿರಿ. ವಿದೇಶ ವ್ಯಾಪಾರದಿಂದ ಶುಭ ಸುದ್ದಿ. ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ.

ಇದನ್ನೂ ಓದಿ : ಲಕ್ನೋ ಸೂಪರ್‌ ಜೈಂಟ್ಸ್‌ ಮೂಲಕ ಐಪಿಎಲ್‌ 2024ಗೆ ಎಂಟ್ರಿ ಕೊಟ್ಟ ಸುರೇಶ್‌ ರೈನಾ

ತುಲಾರಾಶಿ ದಿನಭವಿಷ್ಯ
ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರಲಿದೆ. ಪ್ರೇಮ ಜೀವನ ಖುಷಿಯನ್ನು ಕೊಡಲಿದೆ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳಬೇಡಿ. ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ. ನಿಮ್ಮ ಒಳ್ಳೆಯ ತನ ಇತರರಿಗೆ ಖುಷಿಯನ್ನು ಕೊಡಲಿದೆ.

ವೃಶ್ಚಿಕರಾಶಿ ದಿನಭವಿಷ್ಯ
ಆರ್ಥಿಕವಾಗಿ ಲಾಭದಾಯಕವಾದ ದಿನ. ಸಂಗಾತಿಯೊಂದಿಗೆ ದೂರ ಪ್ರಯಾಣ. ಖರ್ಚು ವೆಚ್ಚಗಳ ಮೇಲೆ ಹಿಡಿತ ಇರಲಿ. ಭವಿಷ್ಯದ ಹಣ ಹೂಡಿಕೆಯ ಮೇಲೆ ಎಚ್ಚರಿಕೆಯನ್ನು ವಹಿಸಿ. ವ್ಯಾಪಾರಿಗಳಿಗೆ ಹಣದ ಕೊರತೆ ಉಂಟಾಗಲಿದೆ.

ಧನಸ್ಸುರಾಶಿ ದಿನಭವಿಷ್ಯ
ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಸಾಮಾಜಿಕ ಕಾರ್ಯಗಳಿಂದ ನೆಮ್ಮದಿ ದೊರೆಯಲಿದೆ. ಕುಟುಂಬ ಸದಸ್ಯರ ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವಿರಿ. ಸ್ನೇಹಿತರ ಜೊತೆ ಸಮಯ ಕಳೆಯುವಿರಿ.

ಇದನ್ನೂ ಓದಿ : ಅದಾ ಶರ್ಮಾ ಹೊಸವರ್ಷದ ನಿರ್ಧಾರವೇನು ಗೊತ್ತಾ ? ಕೇಳಿದ್ರೇ ಅಚ್ಚರಿ ಆಗ್ತೀರಾ !

ಮಕರರಾಶಿ ದಿನಭವಿಷ್ಯ
ಶಿಕ್ಷಕರಿಂದ ಮಕ್ಕಳಿಗೆ ಬೆಂಬಲ ದೊರೆಯಲಿದೆ. ಮಕ್ಕಳ ಬಗ್ಗೆ ಚಿಂತೆ ನಿಮ್ಮನ್ನು ಕಾಡಲಿದೆ. ಅವಿವಾಹಿತರಿಗೆ ಮದುವೆಗೆ ಇದ್ದ ಅಡೆ ತಡೆಗಳು ನಿವಾರಣೆ ಆಗಲಿದೆ. ಆರೋಗ್ಯದ ಸಮಸ್ಯೆಗೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಕೆಲವೊಂದು ವಿಚಾರಗಳು ನಿಮಗೆ ಒತ್ತಡವನ್ನು ತರಲಿದೆ.

ಕುಂಭರಾಶಿ ದಿನಭವಿಷ್ಯ
ನಿಮ್ಮ ಆತ್ಮವಿಶ್ವಾಸ ಹೆಚ್ಚಳವಾಗಲಿದೆ. ವ್ಯವಹಾರಿಕವಾಗಿ ಕೆಲವೊಂದು ವಿಚಾರಗಳು ಸಮಸ್ಯೆಯನ್ನು ತರಲಿದೆ. ಉದ್ಯೋಗದ ಕಾರ್ಯವನ್ನು ಪೂರ್ಣಗೊಳಿಸಿ. ರಾಜಕೀಯವಾಗಿ ಕೆಲಸ ಕಾರ್ಯಗಳನ್ನು ಮಾಡುವವರಿಗೆ ಯಶಸ್ಸು ದೊರೆಯಲಿದೆ.

ಇದನ್ನೂ ಓದಿ :  ಹೊಸ ವರ್ಷ 2024: ಹೊಸ ವರ್ಷಕ್ಕೆ ಹೊಸ ರೂಲ್ಸ್‌ : ಜನವರಿ 1 ರಿಂದ ಈ ನಿಯಮಗಳಲ್ಲಿ ಬದಲಾವಣೆ

ಮೀನರಾಶಿ ದಿನಭವಿಷ್ಯ
ವ್ಯವಹಾರಿಕವಾಗಿ ಅಭಿವೃದ್ದಿ. ಸಾಮಾಜಿಕವಾಗಿ ಕೀರ್ತಿ ಗೌರವ ಹೆಚ್ಚಲಿದೆ. ಪೂರ್ವಜನರ ಆಸ್ತಿಯನ್ನು ಸಂಪಾದನೆ ಮಾಡುವಿರಿ. ವ್ಯವಹಾರಿಕವಾದ ಅಪಾಯವನ್ನು ದೂರ ಮಾಡಿಕೊಳ್ಳಿ. ಮನೆಯಲ್ಲಿ ಪೂಜೆ ಹವನಗಳು ನಡೆಯಲಿದೆ. ವಾದ ವಿವಾದಿಗಳಿಂದ ನೀವಿಂದು ದೂರವಿರಿ.

Horoscope Today 28 December 2023 Zodiac Sign Indra Yoga

Comments are closed.