Anekal accident case: ಕಾರ್ಮಿಕರಿಗೆ ಈಚರ್ ವಾಹನ ಡಿಕ್ಕಿ: ಮೂವರು ಸಾವು

ಆನೆಕಲ್: (Anekal accident case) ರಸ್ತೆ ಬಳಿ ನಡೆದುಕೊಂಡು ಹೊಗುತ್ತಿದ್ದ ಕೂಲಿ ಕಾರ್ಮಿಕರಿಗೆ ವಾಹನ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆನೇಕಲ್‌ ತಾಲೂಕಿನ ಅತ್ತಿಬೆಲೆ ಮುಖ್ಯರಸ್ತೆಯ ಮಾಲಾಸಂದ್ರದ ಬಳಿ ನಡೆದಿದೆ. ಕೆಲಸ ಮುಗಿಸಿಕೊಂಡು ಕೂಲಿ ಕಾರ್ಮಿಕರು ಮನೆಗೆ ವಾಪಾಸಾಗುತ್ತಿದ್ದ ವೇಳೆ ಘಟನೆ ನಡೆದಿದೆ. ಮೃತರನ್ನು ಅಸ್ಸಾಂ ಮೂಲದವರು ಎಂದು ಗುರುತಿಸಲಾಗಿದೆ.

ರಸ್ತೆಬದಿಯಲ್ಲಿ ಕಾರ್ಮಿಕರು ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಈಚರ್‌ ವಾಹನವೊಂದು ಕಾರ್ಮಿಕರಿಗೆ ಡಿಕ್ಕಿ (Anekal accident case) ಹೊಡೆದಿದೆ. ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ನಡೆಸಿ ಈಚರ್‌ ವಾಹನ ಚಾಲಕ ವಾಹನದ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ವಾಹನದ ಮುಂದಿನ ಬಿಡಿಭಾಗಗಳು ಸ್ಥಳದಲ್ಲಿ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಕೂಡಲೆ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು, ಅಪಘಾತ ನಡೆಸಿ ವಾಹನದ ಸಮೇತ ಪರಾರಿಯಾದ ಚಾಲಕನನ್ನು ಬಂಧಿಸಲು ಬಲೆ ಬೀಸಿದ್ದಾರೆ.

ಇದನ್ನೂ ಓದಿ : Japanese encephalitis: ಮೆದುಳು ಜ್ವರದ ಲಸಿಕೆ ಪಡೆದ ಬಾಲಕ ಸಾವು

ಇದನ್ನೂ ಓದಿ : Ragging case: ರ್ಯಾಗಿಂಗ್ ಕೇಸ್ ಭೇದಿಸಲು ಸ್ಟೂಡೆಂಟ್ ಆಗಿ ಕಾಲೇಜಿಗೆ ಎಂಟ್ರಿ ಕೊಟ್ಟ ಲೇಡಿ ಕಾನ್ ಸ್ಟೇಬಲ್; ಮುಂದೇನಾಯ್ತು..?

ಇದನ್ನೂ ಓದಿ : Boy suicide case: ಮಹಿಳೆಯರ ಒಳಉಡುಪು ಧರಿಸಿದ್ದ ಬಾಲಕ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಮೃತರ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಮೃತ ಕಾರ್ಮಿಕರು ಅಸ್ಸಾಂ ಮೂಲದವರಾಗಿದ್ದು, ಅವರ ಸಂಬಂಧಿಕರು ಸಿಕ್ಕ ಬಳಿಕ ಅವರ ಬಗ್ಗೆ ಮಾಹಿತಿ ಸಿಗಬೇಕಾಗಿದೆ.

(Anekal accident case) The incident took place near Malasandra on Attibele main road of Anekal taluk when a vehicle collided with the laborers who were smoking while walking near the road and three died on the spot. The incident took place when the laborers were returning home after finishing work. The deceased has been identified as a native of Assam.

Comments are closed.