The Kashmiri Files selected: ಸ್ವಿಟ್ಜರ್ಲೆಂಡ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ದಿ ಕಾಶ್ಮೀರಿ ಫೈಲ್ಸ್‌ ಆಯ್ಕೆ

(The Kashmiri Files selected) ವಿವೇಕ್‌ ಅಗ್ನಿಹೋತ್ರಿ ಅವರ ವಂಡರ್‌ ದಿ ಕಾಶ್ಮೀರಿ ಫೈಲ್ಸ್‌ ಚಿತ್ರ ಬಾಕ್ಸ್‌ ಆಫಿಸ್‌ ನಲ್ಲಿ ಮಿಂಚಿತ್ತು. ಈ ಚಿತ್ರವು ತೆರೆ ಕಂಡು ಒಂದು ವರ್ಷವಾಗುತ್ತಾ ಬಂದರೂ ಕೂಡ ಇನ್ನೂ ತನ್ನ ಮೈಲಿಗಲ್ಲನ್ನು ಸಾಧಿಸುತ್ತಿದೆ. ಹಲವಾರು ಜಾಗತಿಕ ನಾಮನಿರ್ದೇಶನಗಳೊಂದಿಗೆ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ ಚಿತ್ರ ಇದೀಗ ಪ್ರತಿಷ್ಠಿತ ಸ್ವಿಟ್ಜರ್ಲೆಂಡ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ‘ಅಧಿಕೃತ ಆಯ್ಕೆ’ ವಿಭಾಗದಲ್ಲಿ ಆಯ್ಕೆಯಾಗಿದೆ.

ದಿ ಕಾಶ್ಮೀರಿ ಫೈಲ್ಸ್‌ (The Kashmiri Files selected) ಚಿತ್ರವು ಒಂದು ಹೃದಯ ವಿದ್ರಾವಕ ಕಥೆಯಾಗಿದ್ದು, ಕಾಶ್ಮೀರಿ ಪಂಡಿತ್ ಸಮುದಾಯ 1990 ರಲ್ಲಿ ನಡೆಸಿದ ಹೋರಾಟ, ನೋವು ಸಂಕಟಗಳನ್ನು ಸೆರೆ ಹಿಡಿದಿದೆ. ಚಲನಚಿತ್ರವು ನೈಜ ಘಟನೆಗಳನ್ನು ಆಧರಿಸಿದ್ದು ಸೃಜನಾತ್ಮಕ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ. ವಿಶ್ವದಾದ್ಯಂತ ಈ ಚಿತ್ರವು ಭರ್ಜರಿ ಪ್ರದರ್ಶನವನ್ನು ಕಂಡಿದ್ದು, 340.92 ಕೋಟಿಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ವಿವೇಕ್ ರಂಜನ್ ಅಗ್ನಿಹೋತ್ರಿ ಅವರು “ಪ್ರತಿಷ್ಠಿತ ಸ್ವಿಟ್ಜರ್ಲೆಂಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ‘ಅಧಿಕೃತ ಆಯ್ಕೆ’ ವಿಭಾಗದಲ್ಲಿ #TheKashmirFiles ಆಯ್ಕೆಯಾಗಿದೆ ಎಂದು ತಿಳಿಸಲು ಸಂತೋಷವಾಗಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ವಿವೇಕ್‌ ಅಗ್ನಿಹೋತ್ರಿ ಅವರ ಕಠಿಣ ಪರಿಶ್ರಮದ ಪಲಿತಾಂಶವೇ ಪ್ರತಿಷ್ಠಿತ ಸ್ವಿಟ್ಜರ್ಲೆಂಡ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ‘ಅಧಿಕೃತ ಆಯ್ಕೆ’ ವಿಭಾಗದಲ್ಲಿ ಆಯ್ಕೆಯಾಗಲು ಕಾರಣವಾಗಿದೆ.

ಇದರ ಹೊರತಾಗಿ ಪವರ್‌ಹೌಸ್‌ ಚಲನಚಿತ್ರ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಹಾಗೂ ಪಲ್ಲವಿ ಜೋಶಿ ಇದೀಗ ದಿ ವ್ಯಾಕ್ಸಿನ್‌ ಚಿತ್ರಕ್ಕೆ ಸಜ್ಜಾಗುತ್ತಿದ್ದು, ಈ ಚಲನಚಿತ್ರವು ವೈದ್ಯಕೀಯ ಭ್ರಾತೃತ್ವದ ಬೆಂಬಲ ಮತ್ತು ಸಮರ್ಪಣೆಗೆ ಗೌರವವಾಗಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : Rashmika Instagram: ಇನ್ ಸ್ಟಾಗ್ರಾಂ ಖಾತೆಯಲ್ಲಿ ರಶ್ಮಿಕಾ ಮಂದಣ್ಣ ಹೆಸರೇ ಉಲ್ಟಾ ಆಗೋಯ್ತು; ಏನಿದರ ಸೀಕ್ರೆಟ್?

ಇದನ್ನೂ ಓದಿ : Ram Charan – Upasana : ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಮ್‌ ಚರಣ್‌ ಮತ್ತು ಉಪಾಸನ

ಇದನ್ನೂ ಓದಿ : Pathan Movie Song : ದಾಖಲೆ ಬರೆದ “ಪಠಾಣ್” ಸಿನಿಮಾದ “ಬೇಷರಂ ರಂಗ್” ಹಾಡು

(The Kashmiri Files selected) Vivek Agnihotri’s wonder film The Kashmiri Files was brilliant at the box office. Even after a year of its release, the film is still achieving its milestone. The film, which has made the country proud with several global nominations, has now been selected in the ‘Official Selection’ category of the prestigious Switzerland International Film Festival.

Comments are closed.