ಮಂಗಳವಾರ, ಏಪ್ರಿಲ್ 29, 2025
HomeCrimeArchitect Suresh suicide : ವಿದೇಶಕ್ಕೆ ತೆರಳುವುದಾಗಿ ಹೇಳಿದ್ದ ಆರ್ಕಿಟೆಕ್ಟ್ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ

Architect Suresh suicide : ವಿದೇಶಕ್ಕೆ ತೆರಳುವುದಾಗಿ ಹೇಳಿದ್ದ ಆರ್ಕಿಟೆಕ್ಟ್ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ

- Advertisement -

ಮಂಗಳೂರು : ವಿದೇಶಕ್ಕೆ ತೆರಳುವುದಾಗಿ ಪತ್ನಿ ಮಕ್ಕಳಲ್ಲಿ ತಿಳಿಸಿದ್ದ ಆರ್ಕಿಟೆಕ್ಟ್ ಓರ್ವರು ಅರಬ್ಬಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಹೊರದಲಯದ ಸೋಮೇಶ್ವರ ಕಡಲ ಕಿನಾರೆಯಲ್ಲಿ ನಡೆದಿದೆ. ಆರ್ಕಿಟೆಕ್ಟ್ ಸುರೇಶ್‌ ಸಾಲಿಯಾನ್‌ (48 ವರ್ಷ) (Architect Suresh suicide) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೊರವಲಯದ ಕುತ್ತಾರು ತೇವುಲ ನಿವಾಸಿಯಾಗಿರುವ ಸುರೇಶ್‌ ಕಳೆದ ಹಲವು ವರ್ಷಗಳಿಂದ ತೊಕ್ಕೊಟ್ಟಿನಲ್ಲಿ ಪ್ಲ್ಯಾನಿಂಗ್‌ ಪ್ಯಾಲೇಸ್‌ ಸಂಸ್ಥೆಯ ಮೂಲಕ ಆರ್ಕಿಟೆಕ್ಟ್, ಭೂ ವ್ಯವಹಾರ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಮನೆಯಲ್ಲಿ ತಾನು ವಿದೇಶಕ್ಕೆ ತೆರಳುವುದಾಗಿ ತಿಳಿಸಿ ಮನೆಯಿಂದ ಹೊರಗೆ ತೆರಳಿದ್ದ ಸುರೇಶ್‌ ನೇರವಾಗಿ ಸೋಮೇಶ್ವರದ ಕಡಲ ಕಿನಾರೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಸುರೇಶ್‌ ತನ್ನ ಕಾರು ಹಾಗೂ ಚಿನ್ನವನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದರು. ಆದರೆ ಮನೆಯವರು ಸುರೇಶ್‌ ಅವರಿಗೆ ಕರೆ ಮಾಡಿದಾಗ ಪೋನ್‌ ಸ್ವಿಚ್‌ ಆಫ್‌ ಆಗಿತ್ತು. ಅಲ್ಲದೇ ಸೋಮೇಶ್ವರ ಕಡಲ ಕಿನಾರೆಯಲ್ಲಿ ಸುರೇಶ್‌ ಅವರ ಚಪ್ಪಲಿ ಹಾಗೂ ಬಟ್ಟೆ ದೊರಕಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಕರಾವಳಿ ರಕ್ಷಣ ಪಡೆಯ ಸ್ಥಳೀಯ ಜೀವರಕ್ಷಕ ಅಶೋಕ್‌ ಸೋಮೇಶ್ವರ, ಕಿರಣ್‌ ಆ್ಯಂಟೋನಿ, ಯತೀಶ್‌ ಕುಮಾರ್‌ ಅವರಿಗೆ ಮೃತದೇಹ ಕಂಡು ಬಂದಿದ್ದು, ಅಶೋಕ್‌ ಅವರು ತಕ್ಷಣ ಈಜಿ ಮೃತದೇಹವನ್ನು ದಡಕ್ಕೆ ತಂದಿದ್ದಾರೆ. ಇನ್ನು ಸುರೇಶ್ ಸಂಜೆಯ ತನಕ ಗೆಳೆಯರೊಂದಿಗೆ ಮಾತನಾಡಿದ್ದ ಅವರು ರಾತ್ರಿಯೂ ತನ್ನ ಕೊಲ್ಯದ ಭೂವ್ಯಹಾರಕ್ಕೆ ಸಂಬಂಧಪಟ್ಟ ಪಾಲುದಾರರಲ್ಲಿ ಮಾತನಾಡಿದ್ದರು. ತಡರಾತ್ರಿ ತನ್ನ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ ನಾನು ದೂರ ಹೋಗುತ್ತೇನೆ ನಿಮಗೆ ಸಿಗುವುದಿಲ್ಲ ಎಂದು ಕರೆ ಮಾಡಿದ್ದರು. ನಂತರ ಬಳಿಕ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಿದೀಗ ಉಳ್ಳಾಲ ಠಾಣೆಯ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕೇರಳ ಚಿನ್ನ ಸಾಗಣೆ ಪ್ರಕರಣದಲ್ಲಿ ಮತ್ತೊಂದು ತಿರುವು : ಶಿವಶಂಕರ್​ ವಿರುದ್ಧ ಆಕ್ರೋಶ ಹೊರಹಾಕಿದ ಸ್ವಪ್ನಾ

ಇದನ್ನೂ ಓದಿ : ಮಹಿಳೆಯರಿಗೆ ಕಿರುಕುಳ ನೀಡುವುದನ್ನು ಮೊದಲು ನಿಲ್ಲಿಸಿ ’ : ಪ್ರಿಯಾಂಕ ಗಾಂಧಿ ವಾದ್ರಾ ಕಿಡಿ

( Architect Suresh suicide Someshwar Beach near Mangalore )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular