ಯುವಕನನ್ನು ವಿವಸ್ತ್ರಗೊಳಿಸಿದ ಸುಡುವ ಕೋಲಿನಿಂದ ಥಳಿಸಿದ್ದವರು ಅಂದರ್​

ವ್ಯಕ್ತಿಯೊಬ್ಬ ಕಳ್ಳತನ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ ಗ್ರಾಮಸ್ಥರು ಆತನನ್ನು ವಿವಸ್ತ್ರಗೊಳಿಸಿ ಬೆಂಕಿ ತಾಗಿದ್ದ ಕೋಲಿನಿಂದ ಮನಬಂದಂತೆ (Man stripped naked,) ಬಾರಿಸಿದ ಘಟನೆಯು ಮಧ್ಯ ಪ್ರದೇಶದ ಗುನಾ ಜಿಲ್ಲೆಯಲ್ಲಿ ಸಂಭವಿಸಿದೆ. ಫೆಬ್ರವರಿ ನಾಲ್ಕರಂದು ನಡೆದಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.


ಮಧ್ಯ ಪ್ರದೇಶದ ಗುನಾ ಜಿಲ್ಲೆಯ ವಿಜಯಪುರ ಪೊಲೀಸ್​ ಠಾಣಾ ವ್ಯಾಪ್ತಿಯ ಲಾಡ್​ಪುರ ಗ್ರಾಮದಲ್ಲಿ ಅರವಿಂದ್​ ಕಲಾವತ್​ ಎಂಬ ಹೆಸರಿನ ಯುವಕ ಮೊಬೈಲ್​ ಫೋನ್​ ಕದ್ದಿದ್ದಾನೆ ಎಂದು ಶಂಕಿಸಿದ ಹೇತ್​ರಾಮ್​ ಹಾಗೂ ಗೋಲು ಎಂಬ ಇಬ್ಬರು ಆರೋಪಿಗಳು ಅರವಿಂದ್​ ಕಲಾವತ್​ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.


ಅರವಿಂದ್​ ಕಲಾವತ್​​ನನ್ನು ತಮ್ಮ ತೋಟದ ಮನೆಗೆ ಕರೆದೊಯ್ದ ಹೇತರಾಮ್​ ಹಾಗೂ ಗೋಲು ಆತನನ್ನು ವಿವಸ್ತ್ರಗೊಳಿಸಿದ್ದಾರೆ. ಬಳಿಕ ಕೋಲನ್ನು ಸುಟ್ಟು ಸುಡುತ್ತಿದ್ದ ಕೋಲಿನಿಂದಲೇ ಅರವಿಂದ್​ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗೂ ಈ ಘಟನೆಯ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಈ ವಿಡಿಯೋ ತುಣುಕು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.


ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ​ 324, 323 ಹಾಗೂ ಎಸ್​ಸಿ / ಎಸ್ಟಿ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಹೇತರಾಮನನ್ನು ಪೊಲೀಸರು ಬಂಧಿಸಿದ್ದು ನಾಪತ್ತೆಯಾಗಿರುವ ಗೋಲುವಿಗಾಗಿ ಶೋಧಕಾರ್ಯ ಮುಂದುವರಿದಿದೆ.

Man stripped naked, thrashed with burning stick on suspicion of theft in Madhya Pradesh’s Guna

ಇದನ್ನು ಓದಿ : ಶಾಂತಿ ಕಾಪಾಡುವಂತೆ ಮನವಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ : Hijab Row Karnataka High Court: ಹಿಜಾಬ್-ಕೇಸರಿ ಶಾಲು: ಹೈಕೋರ್ಟ್‌ನಲ್ಲಿ ವಾದ ಪ್ರತಿವಾದ ಹೇಗಿತ್ತು? ಮಂಡನೆಯಾದ ಅಂಶಗಳೇನು?

Comments are closed.