ಮುಂದಿನ ಕೋವಿಡ್​ ರೂಪಾಂತರಿಯ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

ಕೋವಿಡ್​ ಸೋಂಕು ವಿಶ್ವಕ್ಕೆ ಬಂದಪ್ಪಳಿಸಿ ಎರಡು ವರ್ಷಗಳ ಬಳಿಕ ಇದೀಗ ಕೊಂಚ ಶಾಂತ ರೀತಿಯಲ್ಲಿ ವರ್ತಿಸುತ್ತಿದೆ. ಕೊರೊನಾ ಮೂರನೇ ಅಲೆಗೆ ಕಾರಣವಾಗಿರುವ ಓಮಿಕ್ರಾನ್​ ರೂಪಾಂತರಿಯು ಅಷ್ಟೇನು ಗಂಭೀರ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳನ್ನು ತೋರಿಸದ ಹಿನ್ನೆಲೆಯಲ್ಲಿ ಜನತೆ ಇನ್ಮುಂದೆ ಕೋವಿಡ್​ ಕಾಟ ನಮಗೆ ಇರೋದಿಲ್ಲ ಎಂಬ ಭಾವನೆಯಲ್ಲೇ ಇದ್ದಾರೆ. ಆದರೆ ಓಮಿಕ್ರಾನ್​ ರೂಪಾಂತರಿಯ ಬಳಿಕ ಜಗತ್ತು ಸಹಜ ಸ್ಥಿತಿಗೆ ಮರಳುವುದಿಲ್ಲ. ಬದಲಿಗೆ ಹೊಸ ಕೋವಿಡ್​ ರೂಪಾಂತರಿಯು ಮತ್ತಷ್ಟು ವೇಗವಾಗಿ ಹರಡುತ್ತದೆ . ಅಲ್ಲದೇ ಈ ಹಿಂದಿನ ಎಲ್ಲಾ ರೂಪಾಂತರಿಗಳಿಗಿಂತ ಹೆಚ್ಚು ಮಾರಕವಾಗಿ ಇರುತ್ತದೆ (Next Covid-19 variant) ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ .

ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞೆ ಹಾಗೂ ಕೋವಿಡ್​ 19 ತಾಂತ್ರಿಕ ಪ್ರಮುಖರಾದ ಡಾ. ಮಾರಿಯಾ ವ್ಯಾನ್ ಕೆರ್ಖೋವ್​​ ಕೊರೊನಾ ಸಾಂಕ್ರಾಮಿಕವು ಸದ್ಯದಲ್ಲಿ ಅಂತೂ ಸಂಪೂರ್ಣ ಮುಕ್ತವಾಗುವ ಮಾತೇ ಇಲ್ಲ. ಇದರ ಭವಿಷ್ಯದ ರೂಪಾಂತರಗಳು ಓಮಿಕ್ರಾನ್​ಗಿಂತ ಹೆಚ್ಚು ಅಪಾಯಕಾರಿಯಾಗಿರಲಿದೆ ಎಂದು ಹೇಳಿದರು.


ಮುಂದಿನ ರೂಪಾಂತರಿಯು ಹೆಚ್ಚು ಭಯಾನಕವಾಗಿ ಇರೋದ್ರಿಂದ ಅದು ರೋಗನಿರೋಧಕ ಶಕ್ತಿಯನ್ನೂ ಸೋಲಿಸುತ್ತದೆ. ಹೀಗಾಗಿ ಈಗಲೇ ಕೊರೊನಾ ಲಸಿಕೆಗಳ ಮೂರನೇ ಡೋಸ್​ಗಳನ್ನು ಸ್ವೀಕರಿಸುವುದು ಹೆಚ್ಚು ಸುರಕ್ಷಿತ ಎಂದು ಡಾ. ಮಾರಿಯಾ ವ್ಯಾನ್​ ಕೆರ್ಖೋವ್​ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ಹರಡುವಿಕೆ ಕಡಿಮೆಯಾಗಬಹುದು ಎಂದು ನಾವೆಲ್ಲ ನಿರೀಕ್ಷೆ ಮಾಡುತ್ತಿದ್ದೇವೆ. ಆದರೆ ಮುಂಬರುವ ಕೋವಿಡ್​ ರೂಪಾಂತರಿಗಳು ಓಮಿಕ್ರಾನ್​ಗಳಿಗಿಂತ ಹೆಚ್ಚು ಮಾರಕವಾಗಿ ಇರಲಿದೆ. ಇದು ದುರ್ಬಲ ವರ್ಗದ ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಮಾರಣಾಂತಿಕ ಪರಿಣಾಮವನ್ನು ಬೀರಬಲ್ಲದು. ಹೀಗಾಗಿ ಇನ್ನೂ ಕೊರೊನಾ ಲಸಿಕೆಗಳನ್ನು ಕೊರೊನಾ ಡೋಸ್​ಗಳನ್ನು ಕೂಡಲೇ ಸ್ವೀಕರಿಸಬೇಕು. ರೋಗ ನಿರೋಧಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

Next Covid-19 variant will be more infectious than Omicron, possibly deadlier, warns WHO

ಇದನ್ನು ಓದಿ : ಶಾಂತಿ ಕಾಪಾಡುವಂತೆ ಮನವಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ : Hijab Row Karnataka High Court: ಹಿಜಾಬ್-ಕೇಸರಿ ಶಾಲು: ಹೈಕೋರ್ಟ್‌ನಲ್ಲಿ ವಾದ ಪ್ರತಿವಾದ ಹೇಗಿತ್ತು? ಮಂಡನೆಯಾದ ಅಂಶಗಳೇನು?

Comments are closed.